ಹೃದಯ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಶೇ. 35 ರಷ್ಟುಸಾವುಗಳು ಹೃದಯ ಸಂಬಂಧಿ ಕಾಯಿಲೆಯಿಂದ ಆಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ, ಪದ್ಮಶ್ರೀ ಡಾ. ಸಿ.ಎನ್‌. ಮಂಜುನಾಥ್‌ ಹೇಳಿದರು.

ಮೈಸೂರು (ಜೂ.03): ಹೃದಯ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಶೇ. 35 ರಷ್ಟುಸಾವುಗಳು ಹೃದಯ ಸಂಬಂಧಿ ಕಾಯಿಲೆಯಿಂದ ಆಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ, ಪದ್ಮಶ್ರೀ ಡಾ. ಸಿ.ಎನ್‌. ಮಂಜುನಾಥ್‌ ಹೇಳಿದರು. ಮೈಸೂರು ಜಯದೇವ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸುವ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿನ ಗುಣಮಟ್ಟದ ಚಿಕಿತ್ಸೆ, ಸ್ವಚ್ಛತೆ ವೈದ್ಯರು ಹಾಗೂ ಸಿಬ್ಬಂದಿವರ್ಗದವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದವರು. ಕೆಲವು ರೋಗಿಗಳು ಚಿಕಿತ್ಸೆಗೆ ರಿಯಾಯಿತಿ ಕೇಳಿದರು ಅದಕ್ಕೆ ಸ್ಪಂದಿಸಿದ ಡಾ.ಸಿ.ಎನ್‌. ಮಂಜುನಾಥ್‌ ಅವರು ನಿಂತಲ್ಲೆ ಆದೇಶ ನೀಡಿದರು.

ಆಸ್ಪತ್ರೆಯ ಎಲ್ಲ ವಿಭಾಗಗಳು ಸಮರ್ಪಕವಾಗಿ ಕೆಲಸ ಮಾಡುತ್ತಿದ್ದು, ಪ್ರತಿದಿನ 700ಕ್ಕೂ ಹೆಚ್ಚು ಹೊರರೋಗಿಗಳು ಬರುತ್ತಿದ್ದಾರೆ. ಕುಟುಂಬಸ್ಥರಲ್ಲಿ ಹೃದಯ ಸಂಬಂಧಿ ಕಾಯಿಲೆ ಇರುವವರು ಎಚ್ಚರಿಕೆ ವಹಿಸಬೇಕು. ಹೆಚ್ಚಾಗಿ ಧೂಮಪಾನ ಮಾಡುವವರು, ಸಕ್ಕರೆ ಕಾಯಿಲೆ ಇರುವವರು ಹೃದಯ ಸಂಬಂಧಿ ಕಾಯಿಲೆ ನಿರ್ಲಕ್ಷಿಸಬಾರದು. ಬದಲಾದ ಜೀವನ ಶೈಲಿಯಿಂದ ಯುವಕರಲ್ಲಿ ಹೆಚ್ಚಾಗಿ ಹೃದಯಘಾತವಾಗುತ್ತಿದ್ದು, ಯುವಕರು ಒತ್ತಡ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಗುಣಮಟ್ಟದ ಆಹಾರವನ್ನು ಸೇವಿಸಬೇಕು. 

ಕೇಂದ್ರದ ಯೋಜನೆಗಳಿಗೆ ಕಾಂಗ್ರೆಸ್‌ ಅಡ್ಡಿ: ಸಂಸದ ಮುನಿಸ್ವಾಮಿ

ಪ್ರತಿದಿನ 45 ನಿಮಿಷ ವ್ಯಾಯಾಮ ಮಾಡಬೇಕು. 35 ವರ್ಷ ದಾಟಿದ ಗಂಡಸರು, 45 ವರ್ಷ ದಾಟಿದ ಹೆಂಗಸರು ಪ್ರತಿ ವರ್ಷ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್‌. ಸದಾನಂದ್‌, ಡಾ. ಹರ್ಷಬಸಪ್ಪ, ಡಾ. ಸಂತೋಷ್‌, ಡಾ. ರಾಜೀತ್‌, ಡಾ. ದಿನೇಶ್‌, ಡಾ. ಹೇಮಾರವೀಶ್‌, ಡಾ. ಜಯಪ್ರಕಾಶ್‌, ಡಾ. ಭಾರತಿ, ಡಾ. ವೀಣಾನಂಜಪ್ಪ, ಡಾ. ರಶ್ಮಿ, ಡಾ. ಶೀತಲ್‌, ಡಾ. ನವೀಣ್‌, ಡಾ. ಶ್ರೀನಿಧಿ ಹೆಗ್ಗಡೆ, ಡಾ. ಹರ್ಷ, ಡಾ. ಅಶ್ವಿನಿ, ಡಾ. ದೇವರಾಜ್‌, ಸೈಂಟಿಫಿಕ್‌ ಆಫಿಸರ್‌ ಪದ್ಮ, ಆರ್‌ಎಂಒ ಪಶುಪತಿ, ನರ್ಸಿಂಗ್‌ ಅಧೀಕ್ಷಕ ಹರೀಶ್‌ಕುಮಾರ್‌, ಪಿಆರ್‌ಓ ವಾಣಿಮೋಹನ್‌, ಚಂಪಕಮಾಲ, ಸೈಯದ್‌, ಶಂಕರ್‌ ಇದ್ದರು.

ಉತ್ತಮ ಆರೋಗ್ಯಕ್ಕೆ ಪ್ರತಿದಿನ ಸೈಕಲ್‌ ಬಳಸಿ: ಆಧುನಿಕ ಜಗತ್ತಿನಲ್ಲಿ ಬಿಡುವಿಲ್ಲದ ಕೆಲಸ, ದೈಹಿಕ ಕಾರ್ಯ ಚಟುವಟಿಕೆಗಳ ಉದಾಸೀನತೆಯಿಂದಾಗಿ ಸಣ್ಣ ವಯಸ್ಸಿನಲ್ಲಿಯೇ ಅನೇಕರು ಅನಾರೋಗ್ಯಕ್ಕೆ ಬಲಿಯಾಗುತ್ತಿದ್ದಾರೆ. ಪ್ರತಿದಿನ ಸೈಕಲ್‌ ಬಳಸುವುದರಿಂದ ಉತ್ತಮ ಆರೋಗ್ಯ ಹೊಂದಲು ಅನುಕೂಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬೆಳಗಾವಿ ವಿಭಾಗೀಯ ಜಂಟಿ ನಿರ್ದೇಶಕಿ ಡಾ.ಪುಷ್ಪಾ ಎಚ್‌.ಆರ್‌. ಹೇಳಿದರು.

ಆರೋಗ್ಯ ಇಲಾಖೆಯು ಜಿಲ್ಲಾಡಳಿತ ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ ರಾಷ್ಟ್ರೀಯ ಅಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ವಿಶ್ವ ಬೈಸಿಕಲ್‌ ದಿನಾಚರಣೆ ಅಂಗವಾಗಿ ಆರೋಗ್ಯಕ್ಕಾಗಿ ಸೈಕಲ್‌ ಘೋಷವಾಕ್ಯದಡಿ ಶನಿವಾರ ಆಯೋಜಿಸಿದ್ದ ಸೈಕಲ್‌ಥಾನ್‌ ಕಾರ್ಯಕ್ರಮಕ್ಕೆ ಹಸಿರು ಬಾವುಟ ತೋರಿಸಿದ ಅವರು, ಕೋವಿಡ್‌ ಸಮಯದಲ್ಲಿ ಹಾಕಲಾಗಿದ್ದ ನಿಬಂರ್‍ಧಗಳಿಂದಾಗಿ ಜಿಮ್‌, ವ್ಯಾಯಾಮ, ಸೈಕಲ್‌ ಬಳಕೆ ಕಡಿಮೆ ಆಗಿದೆ. ಇದರಿಂದಾಗಿ ಸಣ್ಣ ವಯಸ್ಸಿನ, ಹದಿಹರೆಯದ ಅನೇಕರು ಮಧುಮೇಹ, ಹೃದಯಾಘಾತ, ರಕ್ತದೊತ್ತಡ ಮುಂತಾದ ರೋಗಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.

ವಿಪಕ್ಷಗಳಿಗೆ ರಾಜ್ಯ ಸರ್ಕಾರ ತಕ್ಕ ಉತ್ತರ ನೀಡಿದೆ: ಶಾಸಕ ಗಣೇಶ್‌ ಪ್ರಸಾದ್‌

ಅಹಿತಕರ ಆಹಾರ ಪದ್ಧತಿ, ದೈಹಿಕ ಶ್ರಮ ಇಲ್ಲದಿರುವುದು, ಮದ್ಯಪಾನ ಹಾಗೂ ತಂಬಾಕು ಸೇವನೆ ಅಂತಹ ವ್ಯಸನಗಳು ಅಸಾಂಕ್ರಾಮಿಕ ರೋಗಗಳ ಪ್ರಮುಖ ಅಪಾಯಕಾರಿ ಅಂಶಗಳಾಗಿವೆ. ಇವುಗಳನ್ನು ತಡೆಗಟ್ಟಲು ನಿಯಮಿತ ಹಾಗೂ ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು. ಆರೋಗ್ಯ ಇಲಾಖೆಯಿಂದ ಸೈಕಲ್‌ ಜಾಥಾ ಸಂಘಟಿಸುವ ಮೂಲಕ ಜನಸಾಮಾನ್ಯರಿಗೆ ಸೈಕಲ್‌ ಬಳಕೆಯ ಪ್ರಯೋಜನಗಳನ್ನು ಮನವರಿಕೆ ಮಾಡಲು ಪ್ರಯತ್ನಿಸಲಾಗುತ್ತದೆ ಎಂದು ಡಾ.ಪುಷ್ಪಾ ತಿಳಿಸಿದರು.