Asianet Suvarna News Asianet Suvarna News

ಕೇಂದ್ರದ ಯೋಜನೆಗಳಿಗೆ ಕಾಂಗ್ರೆಸ್‌ ಅಡ್ಡಿ: ಸಂಸದ ಮುನಿಸ್ವಾಮಿ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಕೇಂದ್ರ ಸರ್ಕಾರದ ಪ್ರಗತಿಪರ ಯೋಜನೆಗಳ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ಸೂಚಿಸಲಾಗಿದೆ. ರಾಜ್ಯದ ಪಾಲನ್ನು ವಾಪಾಸ್‌ ಪಡೆಯಲು ಮುಂದಾಗಿದೆ.

Congress is obstructing Central govt plans Says MP S Muniswamy gvd
Author
First Published Jun 3, 2023, 10:43 PM IST

ಕೋಲಾರ (ಜೂ.03): ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಕೇಂದ್ರ ಸರ್ಕಾರದ ಪ್ರಗತಿಪರ ಯೋಜನೆಗಳ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ಸೂಚಿಸಲಾಗಿದೆ. ರಾಜ್ಯದ ಪಾಲನ್ನು ವಾಪಾಸ್‌ ಪಡೆಯಲು ಮುಂದಾಗಿದೆ. ಜಲಜೀವನ್‌ ಮಿಷನ್‌ ಯೋಜನೆ ಅನುಷ್ಠಾನಗೊಳಿಸಲು 1080 ಕೋಟಿ ರೂ. ಅನುದಾನ ನೀಡಿದೆ. ಸರ್ಕಾರವು ತನ್ನ ಪಾಲನ್ನು ವಾಪಸ್‌ ಪಡೆದಲ್ಲಿ ಇದರ ಹೋರಾಟದ ನೇತೃತ್ವವನ್ನು ಬಿಜೆಪಿ ವಹಿಸಲಿದೆ ಎಂದು ಸಂಸದ ಎಸ್‌.ಮುನಿಸ್ವಾಮಿ ಎಚ್ಚರಿಸಿದರು.

ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಎಂಎಲ್‌ಸಿ ಅನಿಲ್‌ ಕುಮಾರ್‌ ತಾಪಂ ಸಭಾಂಗಣದಲ್ಲಿ ಅಧಿಕಾರಿಗಳನ್ನು ಕರೆಸಿಕೊಂಡು ಕಾಮಗಾರಿಗಳ ವಿವರ ಪಡೆದು ಅಧಿಕಾರಿಗಳಿಗೆ ಕೇಂದ್ರದ ಯೋಜನೆಗಳನ್ನು ಸ್ಥಗಿತಗೊಳಿಸಲು ಸೂಚಿಸಿದ್ದಾರೆ. ಇದರ ವಿರುದ್ಧ ಸಾರ್ವಜನಿಕರು ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ವಿಪಕ್ಷಗಳಿಗೆ ರಾಜ್ಯ ಸರ್ಕಾರ ತಕ್ಕ ಉತ್ತರ ನೀಡಿದೆ: ಶಾಸಕ ಗಣೇಶ್‌ ಪ್ರಸಾದ್‌

ಪ್ರಕರಣ ಸಾಭೀತಾದರೆ ಅಧಿಕಾರಕ್ಕೆ ಕುತ್ತು: ಮಾಲೂರು ಕ್ಷೇತ್ರದ ಶಾಸಕ ಕೇವಲ 248 ಮತಗಳ ಮೂಲಕ ಅಧಿಕಾರ ಪಡೆದಿದ್ದಾರೆ. ಮತ ಎಣಿಕೆಯ ಲೋಪ ವಿರುದ್ಧ ನ್ಯಾಯಾಯದಲ್ಲಿ ಪ್ರಕರಣ ದಾಖಲಾಗಿದೆ. ಮಾಲೂರು ಶಾಸಕರ ವಿರುದ್ಧ ಅನೇಕ ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿದ್ದು ಜಾಮೀನಿನ ಮೇಲೆ ಹೊರಗೆ ಇದ್ದಾರೆ. ಈ ಪ್ರಕರಣಗಳಲ್ಲಿ ಯಾವುದೇ ಒಂದು ಪ್ರಕರಣ ಸಾಭೀತು ಆದರೂ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದರು.

ಜಿಲ್ಲೆಯಲ್ಲಿ ಒಂದು ಸ್ಥಾನವನ್ನೂ ಗೆಲ್ಲಿಸದ ಸಂಸದ: ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳ ಪೈಕಿ ಒಂದನ್ನೂ ಗೆಲ್ಲಿಸಿಕೊಳ್ಳಲಾಗದ ಸಂಸದ ಎಸ್‌.ಮುನಿಸ್ವಾಮಿ ರಾಜಕೀಯ ಮಾಡಲು ಅರ್ಹರಲ್ಲ. ಇನ್ನಾದರೂ ಅನಗತ್ಯ ಟೀಕೆ ಮಾಡುವುದನ್ನು ಬಿಟ್ಟು ಸುಮ್ಮನೆ ಮನೆಯಲ್ಲಿ ಕೂರುವುದು ಲೇಸು ಎಂದು ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಸಲಹೆ ನೀಡಿದರು.

ಅವರು ತಾಲೂಕಿನ ಆಲಂಬಾಡಿ ಜೋತೇನಹಳ್ಳಿಯಲ್ಲಿ 70.55 ಲಕ್ಷ ವೆಚ್ಚದ ಗ್ರಾಮ ಪಂಚಾಯತಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾನಪನೆ ನೆರವೇರಿಸಿ ಮಾತನಾಡಿದರು. ಬಿಜೆಪಿ ಗೆಲ್ಲಿಸುವುದಿರಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಾಧ್ಯವಾಗದ ಸ್ಥಿತಿ ನೋಡಿದರೆ ಕ್ಷೇತ್ರದಲ್ಲಿ ಬಿಜೆಪಿ ಯಾವ ಹಂತಕ್ಕೆ ಹೋಗಿದೆ ಎಂಬುದು ಅರಿವಾಗುತ್ತದೆ. ದೇಶದ ಪ್ರಧಾನಿ ಮೋದಿ ಬಂದು ಪ್ರಚಾರ ಮಾಡಿ ಹೋದರೂ ಮೂರು ಕಡೆ ಬಿಜೆಪಿ ಅಭ್ಯರ್ಥಿಗಳಿಗೆ ಠೇವಣಿ ಕಳೆದುಕೊಳ್ಳುವ ಮಟ್ಟಕ್ಕೆ ಬಿಜೆಪಿ ಹೋಗಿದೆ ಎಂದರೆ ಅದಕ್ಕೆ ಸಂಸದ ಎಸ್‌.ಮುನಿಸ್ವಾಮಿ ಕಾರ‍್ಯವೈಖರಿಯೇ ಕಾರಣ ಎಂದು ಟೀಕಿಸಿದರು.

ಒಳ ಒಪ್ಪಂದ ಮಾಡಿಕೊಂಡರೂ ಗೆಲ್ಲಲಿಲ್ಲ: ನನ್ನನ್ನು ಸೋಲಿಸುವ ಏಕೈಕ ಉದ್ದೇಶದಿಂದ ಬಿಜೆಪಿ ನಾಯಕರು ಜೆಡಿಎಸ್‌ ಅಭ್ಯರ್ಥಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಕೊನೆಗಳಿಗೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಕಣದಿಂದ ಹಿಂದೆ ಸರಿದು ಜೆಡಿಎಸ್‌ ಪರ ಪ್ರಚಾರ ಮಾಡಿದರೆಂದರೆ ಬಿಜೆಪಿಗೆ ಅದಕ್ಕಿಂತ ನಾಚಿಕೆಕೇಡಿನ ಸಂಗತಿ ಮತ್ತೊಂದಿಲ್ಲ. ಇಷ್ಟೊಂದು ತಂತ್ರ ಕುತಂತ್ರ ಮಾಡಿದರೂ ನನ್ನನ್ನು ಸೋಲಿಸಲು ಸಾಧ್ಯವಾಗಿಲ್ಲ. ಜನರು ನನ್ನ ಪರವಿದ್ದಾರೆ ಎಂದರು.

ಆರೋಗ್ಯವಂತ ಸಮಾಜದ ಉಳಿವಿಗೆ ಪುಸ್ತಕ ಅಗತ್ಯ: ಸಿಎಂ ಸಿದ್ದರಾಮಯ್ಯ

ಸಂಸದ ಎಸ್‌.ಮುನಿಸ್ವಾಮಿ ನನ್ನ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಗಾಲ್‌್ಫನಲ್ಲಿ ಪತ್ತೆಯಾದ 4.50 ಕೋಟಿ ಹಣಕ್ಕೂ ನನಗೂ ಸಂಬಂಧವಿಲ್ಲದಿದ್ದರೂ ಪ್ರಕರಣ ದಾಖಲಿಸಿದ್ದು ತನಿಖೆ ನಡೆಯುತ್ತಿದೆ. ಸಂಸದರೇ ಆ ಹಣವನ್ನು ವಿಲ್ಲಾದಲ್ಲಿಟ್ಟು ನನ್ನ ಮೇಲೆ ಆರೋಪ ಬರುವಂತೆ ಮಾಡಿರುವ ಅನುಮಾನ ಕಾಡುತ್ತಿದೆ ಎಂದರು.

Follow Us:
Download App:
  • android
  • ios