Bengaluru: ಡಾಕ್ಟರ್‌ನ ಪಿಕಪ್‌-ಡ್ರಾಪ್‌ ಮಾಡೋಕೆ ಆಂಬ್ಯುಲೆನ್ಸ್ ಸೈರನ್‌ ಬಳಸ್ತಿದ್ದ ಡ್ರೈವರ್‌ ಮೇಲೆ ಕೇಸ್‌!

ಬೆಂಗಳೂರಿನಲ್ಲಿ ರೋಗಿಗಳಿಲ್ಲದ ಆಂಬ್ಯುಲೆನ್ಸ್‌ಗಳು ಸೈರನ್‌ ಮತ್ತು ಲೈಟ್‌ಗಳನ್ನು ದುರ್ಬಳಕೆ ಮಾಡಿಕೊಂಡು ಟ್ರಾಫಿಕ್‌ ಜಾಮ್‌ ತಪ್ಪಿಸಿಕೊಳ್ಳುವುದು ಸಾಮಾನ್ಯ. ಸದಾಶಿವನಗರದಲ್ಲಿ ಪೊಲೀಸರು ಇಂತಹ ಒಂದು ಆಂಬ್ಯುಲೆನ್ಸ್‌ ಅನ್ನು ತಡೆದು ಪರಿಶೀಲಿಸಿದಾಗ ಒಳಗೆ ರೋಗಿಯ ಬದಲು ವೈದ್ಯರು ಮೊಬೈಲ್‌ ನೋಡುತ್ತಿದ್ದರು.

In Bengaluru Ambulance driver faces charges for misusing siren to fetch doctor san

ಬೆಂಗಳೂರು (ಡಿ.11): ರಾಜಧಾನಿ ಬೆಂಗಳೂರಿನ ಟ್ರಾಫಿಕ್‌ ಕಿರಿಕಿರಿ ತಪ್ಪಿಸಿಕೊಳ್ಳಲು ಕೆಲವೊಮ್ಮೆ ಆಂಬ್ಯುಲೆನ್ಸ್ ಡ್ರೈವರ್‌ಗಳು ಒಳಗೆ ರೋಗಿ ಇಲ್ಲದೇ ಇದ್ದರೂ ಸೈರನ್‌ ಹಾಗೂ ಲೈಟ್‌ ಹಾಕಿಕೊಂಡು ಹೋಗೋದು ಸಾಮಾನ್ಯ. ಯಾರೂ ಕೂಡ ಅದರಲ್ಲಿ ರೋಗಿ ಇದ್ದಾರೋ ಇಲ್ಲವೋ ಅನ್ನೋ ಗೋಜಿಗೆ ಕೂಡ ಹೋಗೋದಿಲ್ಲ. ಇನ್ನು ಪೊಲೀಸರು ಕೂಡ ಸೈರನ್‌ ಹಾಗೂ ಲೈಟ್‌ ಹಾಕಿಕೊಂಡು ಹೋಗುವ ಆಂಬ್ಯುಲೆನ್ಸ್ಅನ್ನು ನಿಲ್ಲಿಸಿ ಚೆಕ್‌ ಮಾಡುವ ಗೋಜಿಗೆ ಹೋಗೋದಿಲ್ಲ. ತುಂಬಾ ಟ್ರಾಫಿಕ್‌ ಇರುವ ಸಮಯದಲ್ಲಿ ಗಂಭೀರವಾಗಿರುವ ರೋಗಿಗಳನ್ನು ಸಾಗಿಸಲು ಮಾತ್ರವೇ ಆಂಬ್ಯುಲೆನ್ಸ್‌ಗಳು ಸೈರನ್‌ ಹಾಗೂ ಲೈಟ್‌ ಬಳಸಬೇಕು ಅನ್ನೋ ನಿಯಮವಿದೆ. ಇದನ್ನು ಹೆಚ್ಚಿನ ಯಾವ ಡ್ರೈವರ್‌ಗಳು ಪಾಲಿಸೋದಿಲ್ಲ. ಆದರೆ, ತೀರಾ ಅಪರೂಪಕ್ಕೆ ಎನ್ನುವಂತೆ ಬೆಂಗಳೂರಿನ ಸದಾಶಿವನಗರದ ಪೊಲೀಸರು ಈ ಆಂಬ್ಯುಲೆನ್ಸ್ಅನ್ನು ತಡೆದಿದ್ದಾರೆ. ಈ ವೇಳೆ ಆಂಬ್ಯುಲೆನ್ಸ್ ಒಳಗೆ ರೋಗಿಯ ಬದಲಾಗಿ ವೈದ್ಯ ಮೊಬೈಲ್‌ ನೋಡ್ತಾ ಕುಳಿತಿರುವುದು ಗೊತ್ತಾಗಿದೆ.

ಸೋಮವಾರ ಬೆಳಗ್ಗೆ ಪೀಕ್‌ ಅವರ್‌ ಟ್ರಾಫಿಕ್‌ನಲ್ಲಿ ಈ ಘಟನೆ ನಡೆದಿದೆ. ಅಸಿಸ್ಟೆಂಟ್‌ ಸಬ್‌ ಇನ್ಸ್‌ಪೆಕ್ಟರ್‌ ಎಲ್‌.ಮಾಯಮ್ಮ ಸೋಮವಾರ ಸದಾಶಿವನಗರ ಟ್ರಾಫಿಕ್‌ ಪೊಲೀಸ್‌ ಜಂಕ್ಷನ್‌ನಲ್ಲಿ ಡ್ಯೂಟಿಯಲ್ಲಿದ್ದರು. ಬೆಳಗ್ಗೆ 10 ರಿಂದ 10.30ರ ವೇಳೆಗೆ ಕೆಲವು ಬಾರಿ ಆಂಬ್ಯುಲೆನ್ಸ್ ಜಂಕ್ಷನ್‌ನಿಂದ ಹಾದು ಹೋಗಿದ್ದನ್ನು ಗಮನಿಸಿದ್ದಾರೆ. ಈ ವೇಳೆ ಸೈರನ್‌ ಹಾಗೂ ಲೈಟ್‌ ಬಳಸಿದ್ದನ್ನೂ ನೋಡಿದ್ದಾರೆ. ಈ ವೇಳೆ ಅನುಮಾನ ಸಿವಿ ರಾಮನ್‌ ರಸ್ತೆ ದಾಟಿ ಸೈರನ್‌ ಹಾಕಿಕೊಂಡು ಬರುತ್ತಿದ್ದ ಆಂಬ್ಯುಲೆನ್ಸ್ಅನ್ನು ಚೆಕ್‌ ಮಾಡುವ ನಿರ್ಧಾರ ಮಾಡಿದ್ದಾರೆ. ಅವರ ಅನುಮಾನದಂತೆ ಆಂಬ್ಯುಲೆನ್ಸ್‌ನಲ್ಲಿ ಯಾವುದೇ ಗಂಭೀರ ರೋಗಿ ಇದ್ದಿರಲಿಲ್ಲ. ಸೀಟ್‌ನ ಮೇಲೆ ಮಲಗಿಕೊಂಡಿದ್ದ ವೈದ್ಯ ಮೊಬೈಲ್‌ ನೋಡುತ್ತಾ ಕುಳಿತಿದ್ದ.

ಸದಾಶಿವನಗರ ಟೆನೆಟ್‌ ಡಯಾಗ್ನೋಸ್ಟಿಕ್ಸ್‌ನ ಮಾರುತಿ ಸುಜುಕಿ ಇಕೋ ಆಂಬ್ಯುಲೆನ್ಸ್ ಇದಾಗಿದೆ. ಡ್ರೈವರ್‌ಅನ್ನು 24 ವರ್ಷದ ಜುನೈದ್‌ ಅಹ್ಮದ್‌ ಎಂದು ಗುರುತಿಸಲಾಗಿದೆ. ವೈದ್ಯರನ್ನು ಮನೆಯಿಂದ ಪಿಕಪ್‌-ಡ್ರಾಪ್‌ ಮಾಡಲು ಆಂಬ್ಯುಲೆನ್ಸ್ ಬಳಸುತ್ತಿದ್ದೆ ಎಂದು ಜುನೈದ್‌ ತಿಳಿಸಿದ್ದಾನೆ.

1 ಲೀಟರ್‌ ಕೆಮಿಕಲ್‌ ಬಳಸಿ 500 ಲೀಟರ್‌ ನಕಲಿ ಹಾಲು ಮಾಡುತ್ತಿದ್ದ ಉದ್ಯಮಿಯ ಬಂಧನ!

ಬಿಎನ್‌ಎಸ್‌ ಸೆಕ್ಷನ್‌ 285 ಅಡಿಯಲ್ಲಿ ಜುನೈದ್‌ ವಿರುದ್ಧ ಕೇಸ್‌ ದಾಖಲು ಮಾಡಲಾಗಿದ್ದು, ಆಂಬ್ಯುಲೆನ್ಸ್ಅನ್ನು ಜಪ್ತಿ ಮಾಡಿದ್ದಾರೆ. ಆಂಬ್ಯುಲೆನ್ಸ್‌ ಸೈರನ್‌ ಹಾಗೂ ಲೈಟ್‌ಅನ್ನು ದುರ್ಬಳಕೆ ಮಾಡುವುದು ಮೋಟಾರಿಸ್ಟ್‌ಗಳ ಸಮಸ್ಯೆಗೆ ಕಾರಣವಾಗುತ್ತದೆ. ವೈದ್ಯರು ಹಾಗೂ ಡ್ರೈವರ್‌ಗೆ ಎಚ್ಚರಿ ನೀಡಿ ಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

'ಅಮೆರಿಕದ 4692 ಕೋಟಿ ಬೇಡ..' ಸ್ವಂತ ಹಣದಲ್ಲೇ Colombo Port Project ಮುಗಿಸುವ ನಿರ್ಧಾರಕ್ಕೆ ಬಂದ ಅದಾನಿ!

Latest Videos
Follow Us:
Download App:
  • android
  • ios