1 ಲೀಟರ್‌ ಕೆಮಿಕಲ್‌ ಬಳಸಿ 500 ಲೀಟರ್‌ ನಕಲಿ ಹಾಲು ಮಾಡುತ್ತಿದ್ದ ಉದ್ಯಮಿಯ ಬಂಧನ!

ಕೆಮಿಕಲ್‌ ಬಳಸಿ ನಕಲಿ ಹಾಲು ಹಾಗೂ ಪನ್ನೀರ್‌ ತಯಾರಿಸುತ್ತಿದ್ದ ಉತ್ತರ ಪ್ರದೇಶದ ಡೈರಿ ಉದ್ಯಮಿಯನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಬಂಧಿಸಿದ್ದಾರೆ.

UP dairy trader held for 500 litres of fake milk using one litre of chemicals san

ನವದೆಹಲಿ (ಡಿ.11): ಕೇವಲ ಒಂದು ಲೀಟರ್‌  ಕೆಮಿಕಲ್‌ ಬಳಸಿ 500 ಲೀಟರ್‌ ನಕಲಿ ಹಾಲು ತಯಾರಿಸುತ್ತಿದ್ದ ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಉದ್ಯಮಿಯನ್ನು ಅಧಿಕಾರಿಗಳು ಬಂದಿದ್ದಾರೆ.ಅಧಿಕಾರಿಗಳ ಪ್ರಕಾರ, ಹಾಲು ಮತ್ತು ಹಾಲಿನ ಉತ್ಪನ್ನಗಳ ಉದ್ಯಮ ಮಾಡುತ್ತಿದ್ದ ಅಗರ್ವಾಲ್ ಟ್ರೇಡರ್ಸ್‌ನ ಮಾಲೀಕ ಅಜಯ್ ಅಗರ್ವಾಲ್, ನಿಜವಾದ ಹಾಲು ಎಂದು ಕಾಣುವಂತೆ ರಾಸಾಯನಿಕ ಹಾಲಿನಲ್ಲಿ ಕೃತಕ ಸಿಹಿಕಾರಕಗಳು ಹಾಗೂ ಸುವಾಸನೆಯನ್ನು ಮಿಶ್ರಣ ಮಾಡುತ್ತಿದ್ದ. ಕಳೆದ 20 ವರ್ಷಗಳಿಂದ ಈತ ಸಿಂಥೆಟಿಕ್‌ ಹಾಲು ಹಾಗೂ ಪನ್ನೀರ್‌ ಮಾರಾಟ ಮಾಡುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಅಧಿಕಾರಿಗಳು ಅಗರ್ವಾಲ್ ಅವರ ಅಂಗಡಿ ಮತ್ತು ನಾಲ್ಕು ಗೋಡೌನ್‌ಗಳ ಮೇಲೆ ದಾಳಿ ನಡೆಸಿ ಪೂರ್ವ ಮಿಶ್ರಣ ರಾಸಾಯನಿಕಗಳನ್ನು ವಶಪಡಿಸಿಕೊಂಡಿದ್ದಾರೆ. "ಅಗರ್ವಾಲ್ ಅವರು ನಕಲಿ ಹಾಲನ್ನು ತಯಾರಿಸಲು ಬಳಸಿದ ರಾಸಾಯನಿಕಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ಆತ ಕೇವಲ ಐದು ಮಿಲಿಲೀಟರ್‌ ಕೆಮಿಕಲ್‌ನಿಂದ ಎರಡು ಲೀಟರ್‌ನಷ್ಟು ನಕಲಿ ಹಾಲನ್ನು ತಯಾರಿಸಿದ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಾಲಿನಂತೆ ಕಾಣಲು ಅದಕ್ಕೆ ಸುವಾಸನೆಯನ್ನು ಮಿಶ್ರಣ ಮಾಡುತ್ತಿದ್ದ.ಇದರಿಂದಾಗಿ ಕೃತಕ ಹಾಲನ್ನು ಅದರ ನೋಟ, ರುಚಿ ಅಥವಾ ವಾಸನೆಯಿಂದ ನಿಜವಾದ ಹಾಲಿನಿಂದ ಯಾರೂ ಪ್ರತ್ಯೇಕಿಸಲು ಸಾಧ್ಯವಿರಲಿಲ್ಲ.
ದೈನಿಕ್ ಭಾಸ್ಕರ್ ವರದಿಯ ಪ್ರಕಾರ, ಅಗರ್ವಾಲ್ ಅವರು ತಮ್ಮ ಹಳ್ಳಿಯಲ್ಲಿ ಇತರ ಹಾಲು ಮಾರಾಟಗಾರರೊಂದಿಗೆ ಸಿಂಥೆಟಿಕ್ ಹಾಲಿನ ಸೂತ್ರವನ್ನು ಹಂಚಿಕೊಂಡಿದ್ದಾರೆ. ಇದಲ್ಲದೆ, ಹಾಲಿಗೆ ಸೇರಿಸಲಾಗುತ್ತಿರುವ ಕೆಲವು ಕೃತಕ ಸಿಹಿಕಾರಕಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಅವುಗಳು ಎರಡು ವರ್ಷಗಳ ಹಿಂದೆಯೇ ಎಕ್ಸ್‌ಪೈರಿ ಆಗಿದ್ದವಾಗಿದೆ. ಆತನ ಗೋಡೌನ್‌ಗಳಿಂದ ವಶಪಡಿಸಿಕೊಂಡ ಇತರ ರಾಸಾಯನಿಕಗಳಲ್ಲಿ ಕಾಸ್ಟಿಕ್ ಪೊಟ್ಯಾಶ್, ವೀ ಪೌಡರ್‌, ಸೋರ್ಬಿಟೋಲ್, ಹಾಲಿನ ಪರ್ಮಿಯೇಟ್ ಪೌಡರ್ ಮತ್ತು ಸಂಸ್ಕರಿಸಿದ ಸೋಯಾ ಕೊಬ್ಬುಗಳು ಸೇರಿವೆ.

'ಅಮೆರಿಕದ 4692 ಕೋಟಿ ಬೇಡ..' ಸ್ವಂತ ಹಣದಲ್ಲೇ Colombo Port Project ಮುಗಿಸುವ ನಿರ್ಧಾರಕ್ಕೆ ಬಂದ ಅದಾನಿ!

ಈ ನಡುವೆಎ ಅಗರ್‌ವಾಲ್‌ ಈ ರಾಸಾಯನಿಕವನ್ನು ಕಲಿತಿದ್ದು ಎಲ್ಲಿಂದ ಎನ್ನುವುದನ್ನು ತನಿಖೆ ಮಾಡಲು ಆರಂಭಿಸಿದ್ದಾರೆ. ಅಗರ್ವಾಲ್ ಅವರಿಂದ ನಕಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಯಾರು ಖರೀದಿಸುತ್ತಾರೆ ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಎಫ್ಎಸ್ಎಸ್ಎಐನ ಅಧಿಕಾರಿ ವಿನಿತ್ ಸಕ್ಸೇನಾ ಹೇಳಿದ್ದಾರೆ. ಕಳೆದ ಆರು ತಿಂಗಳಲ್ಲಿ ಅವರು ಈ ‘ಹಾಲು’ ಉತ್ಪನ್ನಗಳನ್ನು ಎಲ್ಲಿಗೆ ಪೂರೈಸಿದ್ದಾರೆ ಎಂಬುದನ್ನೂ ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ದೇಶದ 12 ಬ್ಯಾಂಕ್‌ಗಳಿಂದ 25,500 ಕೋಟಿ ಸಾಲ ಕೇಳಿದ ರಿಲಯನ್ಸ್‌ ಇಂಡಸ್ಟ್ರೀಸ್‌!

Latest Videos
Follow Us:
Download App:
  • android
  • ios