Asianet Suvarna News

'ಸರ್ಕಾರದ ಮನೆ ತೆಗೆಯದ್ದಕ್ಕೆ ರೂಂ ಮಾಡಿದ್ದೆ, ನಿಮ್ಮ ಥರ ರಾಸಲೀಲೆಗಲ್ಲ'..!

ಸರ್ಕಾರದ ಮನೆ ತೆಗೆದುಕೊಂಡಿರದ ಕಾರಣ ಹೋಟೆಲ್‌ನಲ್ಲಿ ರೂಂ ಬುಕ್ ಮಾಡಿದ್ದೆ. ನಿಮ್ಮ ಥರ ರಾಸಲೀಲೆಗಲ್ಲ ಎಂದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಅವರು ಹುಣಸೂರು ಬಿಜೆಪಿ ಅಭ್ಯರ್ಥಿ ಎಚ್‌. ವಿಶ್ವನಾಥ್‌ಗೆ ಟಾಂಗ್ ನೀಡಿದ್ದಾರೆ.

i book room to stay not for anything else kumaraswamy taunts vishwanath
Author
Bangalore, First Published Nov 28, 2019, 2:29 PM IST
  • Facebook
  • Twitter
  • Whatsapp

ಮೈಸೂರು(ನ.28): ಸರ್ಕಾರದ ಮನೆ ತೆಗೆದುಕೊಂಡಿರದ ಕಾರಣ ಹೋಟೆಲ್‌ನಲ್ಲಿ ರೂಂ ಬುಕ್ ಮಾಡಿದ್ದೆ. ನಿಮ್ಮ ಥರ ರಾಸಲೀಲೆಗಲ್ಲ ಎಂದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಅವರು ಹುಣಸೂರು ಬಿಜೆಪಿ ಅಭ್ಯರ್ಥಿ ಎಚ್‌. ವಿಶ್ವನಾಥ್‌ಗೆ ಟಾಂಗ್ ನೀಡಿದ್ದಾರೆ.

ಹುಣಸೂರಿನಲ್ಲಿ ಮಾತನಾಡಿದ ಅವರು ಅನರ್ಹ ಶಾಸಕ ಹೆಚ್.ವಿಶ್ವನಾಥ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ವಿಶ್ವನಾಥ್ ವಿರುದ್ದ ಹೆಚ್‌ಡಿಕೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದು, ಈ ಹೆಚ್.ವಿಶ್ವನಾಥ್ ಎಷ್ಟು ದಿನ ನನ್ನ ಮನೆಗೆ ಬಂದು ತಿಂಡಿ ತಿಂದಿಲ್ಲ ಎಂದು ಪ್ರಶ್ನಿಸಿದ್ದಾರೆ.

'ಎದೆ ಬಗೆದು ದೇವೇಗೌಡರ ತೋರಿಸಲು ನಾನು ಹನುಮಂತ ಅಲ್ಲ'..!

ಅವತ್ತು ನನ್ನ ಮನೆಗೆ ಬಂದಿದ್ದೆಯಲ್ಲಪ್ಪ..? ಕ್ಷೇತ್ರದ ಕೆಲಸ ಮಾಡಿಕೊಡಿ ಅಂತ ಕೇಳಿದ್ರಾ? ನನ್ನ‌ ಮನೆಗೆ ಬಂದಿದ್ದು KSRTC ಬಸ್ ಸ್ಕ್ರ್ಯಾಪ್ ಟೆಂಡರ್ ಕೊಡಿಸಿ ಅಂತ ಕೇಳೋಕೆ. ಅದರಲ್ಲಿ ಬರೋ ಕಮಿಷನ್‌ಗಾಗಿ ನನ್ನ ಮನೆ ಬಳಿ ಬಂದಿದ್ರು. KSRTC ಎಂಡಿಗೆ ಕರೆ ಮಾಡಿ ಅಂತ ನನ್ನ‌ಮನೆಗೆ ಬಾಗಿಲಿಗೆ ಬಂದಿರಲಿಲ್ವಾ ಕೇಳಿ? ಎಂದು ಕುಮಾರಸ್ವಾಮಿ ವಿಶ್ವನಾಥ್‌ಗೆ ಪ್ರಶ್ನೆ ಹಾಕಿದ್ದಾರೆ.

ಮುಂದೆ ನಿಖಿಲ್ ಕೂಡಾ ಅಳ್ತಾರೆ! ಗೌಡ್ರು ನುಡಿದ್ರು ಭವಿಷ್ಯ!

ನನ್ನ ಬಗ್ಗೆ ಲಘುವಾಗಿ ಮಾತನಾಡೋಕು ಮುನ್ನ ಎಚ್ಚರಿಕೆ. ಬೇರೆಯವರ ಬಳಿ ಆಟವಾಡಿದ ಹಾಗೇ ನನ್ನ ಬಳಿ ಆಡಬೇಡ‌. ಹುಣಸೂರು ಜಿಲ್ಲೆ ವಿಚಾರ ನನ್ನ ಬಳಿ ಪ್ರಸ್ತಾಪವೇ ಮಾಡಿಲ್ಲ. ಅವರು ನನ್ನ ಭೇಟಿ ಮಾಡೋದಿರಲಿ ನಾನೇ ಅವರನ್ನ ಜಯದೇವ ಆಸ್ಪತ್ರೆಗೆ ಹೋಗಿ ಭೇಟಿ ಮಾಡಿದ್ದೇನೆ. ಚಂಗಿಬಿಂಗಿ ವ್ಯವಹಾರದ ಮೂಲಕ ರಾಜಕಾರಣ ಮಾಡಿದ್ದೀಯಾ. ಅದಕ್ಕೆಲ್ಲ ಹುಣಸೂರು ಜನ ಅಂತಿಮ ಹಾಡ್ತಾರೆ ಎಂದು ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

ಕಣ್ಣೀರು ನಮ್ಮ ಪೇಟೆಂಟ್, ಎಲ್ಲದಕ್ಕೂ ಹಲ್ಲು ಬಿಡೋದಲ್ಲ: ಎಚ್‌ಡಿಕೆ ಟಾಂಗ್

Follow Us:
Download App:
  • android
  • ios