"

ಮೈಸೂರು(ನ.28): ಕಣ್ಣೀರು ನಮ್ಮ ಕುಟುಂಬದ ಪೇಟೆಂಟ್. ಎಲ್ಲದಕ್ಕೂ ಹಲ್ಲು ಕಿರಿದುಕೊಂಡು ನಿಂತುಕೊಳ್ಳೋದಲ್ಲ ಎಂದು ಮಾಜಿ ಸಿಎಂ ಎಚ್‌. ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಸದಾನಂದ ಗೌಡ ಅವರು ಕುಮಾರಸ್ವಾಮಿ ಕಣ್ಣೀರು ಬಗ್ಗೆ ವ್ಯಂಗ್ಯ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಹೌದು ಕಣ್ಣಿರು ನಮ್ಮ ಕುಟುಂಬದ ಪೇಟೆಂಟ್. ಸದಾನಂದಗೌಡರ ಥರ ಎಲ್ಲದಕ್ಕು ಹಲ್ಲು ಬಿಟ್ಟುಕೊಂಡು ನಿಂತುಕೊಳ್ಳೋದಲ್ಲ ಎಂದು ಹೇಳಿದ್ದಾರೆ. ಕಣ್ಣಿರಿನ ಬಗ್ಗೆ ವ್ಯಂಗ್ಯ ಮಾಡಿದ್ದಕ್ಕೆ ಮಾಜಿ ಸಿಎಂ ಕುಮಾರ‌ಸ್ವಾಮಿ ಕೆಂಡಮಂಡಲವಾಗಿದ್ದು ಡಿವಿಎಸ್‌ಗೆ ಟಾಂಗ್ ಕೊಟ್ಟಿದ್ದಾರೆ.

'ಎದೆ ಬಗೆದು ದೇವೇಗೌಡರ ತೋರಿಸಲು ನಾನು ಹನುಮಂತ ಅಲ್ಲ'..!

ಸದಾನಂದಗೌಡರೇ ವಿಕ್ಸ್ ಗ್ಲೀಸರಿನ್ ಹಾಕಿಕೊಂಡು ಕಣ್ಣಿರು ಹಾಕೋ ಅವಶ್ಯಕತೆ ನನಗೆ ಇಲ್ಲ. ಬಡವರ ಕಷ್ಟ ನೋಡಿದ ತಕ್ಷಣ ನನಗೆ ಕಣ್ಣಿರು ಬರುತ್ತೆ. ನೀವು ಬಂದಿರೋದು ನಾಟಕ ಆಡೋ ಕಡೆಯಿಂದ. ನಿಮಗೆ ಮಾನವೀಯತೆ ಗೊತ್ತಿದ್ರೆ ತಾನೆ ಕಣ್ಣಿರು ಬರೋದು ಎಂದು ಪ್ರಶ್ನಿಸಿದ್ದಾರೆ.

ಮುಂದೆ ನಿಖಿಲ್ ಕೂಡಾ ಅಳ್ತಾರೆ! ಗೌಡ್ರು ನುಡಿದ್ರು ಭವಿಷ್ಯ!

ಎಷ್ಟು ಜನ ಬಡವರು ನಿಮ್ ಮನೆ ಹತ್ರ ಬರ್ತಾರೆ‌.? ನಿಮ್ಮ ಕೇಂದ್ರದ ಗೂಢಾಚಾರಿಗಳನ್ನ ನಮ್ಮ ಮನೆ ಹತ್ರ ಕಳುಹಿಸಿ. ಆಗ ಗೊತ್ತಾಗುತ್ತೆ. ನನ್ನದು ಡ್ರಾಮಾ ಕಣ್ಣೀರಲ್ಲ. ನಿಮ್ಮಿಂದ ನಾನು ಪಾಠ ಕಲಿಯಬೇಕಿಲ್ಲ. ಪ್ರವಾಹದ ಎಷ್ಟು ಹಳ್ಳಿಗಳಿಗೆ ಹೋಗಿದ್ರಿ..? ಎಂದು ಕೇಳಿದ್ದಾರೆ.

ಸುಮಲತಾ ಆಪ್ತರ ಜತೆ ಸಿಎಂ ಮಾತುಕತೆ : ಸಂಸದೆ ಸಪೋರ್ಟ್ ಯಾರಿಗೆ?

ನಾನು ಕಣ್ಣಿರು ಹಾಕ್ತಿನಿ ಅದು‌ ಜನರಿಗಾಗಿ ಹಾಕೋ ಕಣ್ಣಿರು. ನಿಮಗೆ ಹೃದಯ ಇದ್ರೆ ತಾನೆ ಕಣ್ಣಿರು ಬರೋದು..? ನಿಮಗೆ ಗ್ಲಿಸರಿನ್ ವಿಕ್ಸು ಬೇಕು. ಸದಾನಂದಗೌಡರನ್ನಾಗಲಿ ಬಿಜೆಪಿಯವರನ್ನಾಗಿ ಮೆಚ್ಚಿಸೋಕೆ ನಾನು ಬದುಕಿಲ್ಲ ಎಂದು ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.