Asianet Suvarna News

'ಎದೆ ಬಗೆದು ದೇವೇಗೌಡರ ತೋರಿಸಲು ನಾನು ಹನುಮಂತ ಅಲ್ಲ'..!

ಎದೆ ಬಗೆದು ದೇವೇಗೌಡರನ್ನು ತೋರಿಸಲು ನಾನು ಹನುಮಂತ ಅಲ್ಲ ಸ್ವಾಮಿ ಎಂದು ಹುಣಸೂರು ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ಹೇಳಿದ್ದಾರೆ. ನಾನು ಹೃದಯದಲ್ಲಿದ್ದೀನಾ ಎಂಬ ಮಾಜಿ ಪ್ರಧಾನಿ ದೇವೇಗೌಡರ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.

i cant open my heart and show devegowda says hunsur bjp candidate h vishwanath
Author
Bangalore, First Published Nov 28, 2019, 11:56 AM IST
  • Facebook
  • Twitter
  • Whatsapp

ಮೈಸೂರು(ನ.28): ಎದೆ ಬಗೆದು ದೇವೇಗೌಡರನ್ನು ತೋರಿಸಲು ನಾನು ಹನುಮಂತ ಅಲ್ಲ ಸ್ವಾಮಿ ಎಂದು ಹುಣಸೂರು ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ಹೇಳಿದ್ದಾರೆ. ನಾನು ಹೃದಯದಲ್ಲಿದ್ದೀನಾ ಎಂಬ ಮಾಜಿ ಪ್ರಧಾನಿ ದೇವೇಗೌಡರ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.

ನನ್ನ ಫೋಟೋ ದೇವರ ಮನೆಯಲ್ಲಿ‌ ಇರಬಹುದು, ನಾನು ಹೃದಯದಲ್ಲಿ ಇದ್ದೀನಾ ಎಂಬ ಪ್ರಶ್ನೆ ವಿಚಾರವಾಗಿ ಎಚ್‌. ವಿಶ್ವನಾಥ್ ಅವರು ಹುಣಸೂರಿನಲ್ಲಿ ಚುನಾವಣಾ ಪ್ರಚಾರದ ಸಂದರ್ಭ ಪ್ರತಿಕ್ರಿಯೆ ನೀಡಿದ್ದಾರೆ.

ಸುಮಲತಾ ಆಪ್ತರ ಜತೆ ಸಿಎಂ ಮಾತುಕತೆ : ಸಂಸದೆ ಸಪೋರ್ಟ್ ಯಾರಿಗೆ?

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿಕೆಗೆ ಬಿಜೆಪಿ ಅಭ್ಯರ್ಥಿ ಅಡಗೂರು ಎಚ್.ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದು, ನಾನು ಹನುಮಂತ ಅಲ್ಲ. ಹೃದಯ ಬಗೆದು ತೋರಿಸಲು ಸಾಧ್ಯವಿಲ್ಲ. ನಾನು ದೇವೇಗೌಡರ ಮೇಲೆ ಅಪಾರ ಪ್ರೀತಿ, ಗೌರವ ಹೊಂದಿದ್ದೇನೆ ಎಂದು ಹೇಳಿದ್ದಾರೆ.

ದೇವೇಗೌಡರು ಏನೇ ಹೇಳಲಿ. ನಾನು ಅವರ ಬಗ್ಗೆ ಹೊಂದಿರುವ ಗೌರವ ಕಡಿಮೆ ಆಗುವುದಿಲ್ಲ. ಅದು ಹೀಗೆಯೇ ಇರುತ್ತದೆ ಎಂದು ಹುಣಸೂರು ತಾಲೂಕಿನ ರಾಮಾಪುರದಲ್ಲಿ ಎಚ್.ವಿಶ್ವನಾಥ್ ಹೇಳಿದ್ದಾರೆ.

ಉಪ ಚುನಾವಣೆ : 5 ದಿನ ಮದ್ಯ ಮಾರಾಟ ನಿಷೇಧ

Follow Us:
Download App:
  • android
  • ios