ಮೈಸೂರು(ಜ.03): ಮಾಜಿ ಶಾಸಕ ಎಚ್‌. ವಿಶ್ವನಾಥ ಅವರು ತಮ್ಮ ಒಂದೂವರೆ ವರ್ಷಗಳ ಕ್ಷೇತ್ರ ನಿರ್ಲಕ್ಷ್ಯಕ್ಕಾಗಿ ತಾಲೂಕಿನ ಜನರಲ್ಲಿ ಮೊದಲು ಬೇಷರತ್‌ ಆಗಿ ಕ್ಷಮೆಯಾಚಿಸಬೇಕು ಎಂದು ಶಾಸಕ ಎಚ್‌.ಪಿ. ಮಂಜುನಾಥ್‌ ಆಗ್ರಹಿಸಿದ್ದಾರೆ.

ಹುಣಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉನ್ನತ ಶಿಕ್ಷಣ ಸಚಿವರಾಗಿದ್ದ ಪುಣ್ಯಾತ್ಮ ಜಿ.ಟಿ. ದೇವೇಗೌಡರು ತಾಲೂಕಿನ ಸ್ವಹಿತಾಸಕ್ತಿಯಿಂದಾಗಿ ಕಾಲೇಜು ಅಭಿವೃದ್ಧಿ ಮತ್ತು ಕಟ್ಟಡಕ್ಕಾಗಿ ಕೋಟಿಗಟ್ಟಲೆ ಅನುದಾನ ಕೊಡಿಸಿದ್ದಾರೆಯೇ ಹೊರತು, ಇದರಲ್ಲಿ ನಿಮ್ಮದೇನೂ ಕೊಡುಗೆ ಇಲ್ಲವೆಂದು ದೂರಿದ್ದಾರೆ.

ಪರಿಶೀಲನೆಗೆ ಬಂದು ನಿಂತಲ್ಲೇ ನಿಂತಿದ್ದ ರೈಲ್ವೇ ಸಚಿವ, ಅಂಡರ್‌ಪಾಸ್ ಠುಸ್

ಸ್ಪೀಕರ್‌, ಸುಪ್ರಿಂಕೋರ್ಟ್‌ ಹಾಗೂ ಜನತಾ ನ್ಯಾಯಾಲಯದಲ್ಲೂ ಅನರ್ಹ ಪಟ್ಟವನ್ನು ಶಾಶ್ವತವಾಗಿಸಿಕೊಂಡಿರುವ ವಿಶ್ವನಾಥ್‌ ಅವರು ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಾ ಇದ್ದಾರೆ. ತಮ್ಮ ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಮಂಜೂರು ಮಾಡಿದ್ದ ಹಲವಾರು ಕಾಮಗಾರಿಗಳನ್ನು ತಮ್ಮದೆಂದು ಬಿಂಬಿಸಿಕೊಂಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಟೀಕಿಸಿದ್ದಾರೆ.

ಹಸಿರು ಶಾಲು ಹೊದ್ದೇ ಪ್ರಶಸ್ತಿ ಪ್ರದಾನ ಮಾಡಿದ ಪ್ರಧಾನಿ ಮೋದಿ

ಅಲ್ಲದೆ ತಮ್ಮ ಕುಟುಂಬದ ಬಗ್ಗೆ ಬೇಕಾಬಿಟ್ಟಿಮಾತನಾಡಿರುವ ಅವರು, ಗಾಜಿನ ಮನೆಯಲ್ಲಿದ್ದಾರೆಂಬುದನ್ನು ಮರೆತಿರುವ ಇವರು, ನನ್ನನ್ನು ಪ್ರಶ್ನೆಮಾಡಲು ಅರ್ಹರಲ್ಲವೆಂದು ಕ್ಷೇತ್ರದ ಜನತೆಯೇ ತೀರ್ಮಾನ ಮಾಡಿದ್ದಾರೆ ಎಂದರು.

ಅಭಿವೃದ್ಧಿಗೆ ಸ್ಪಂದಿಸಿಲ್ಲ:

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಭಿವೃದ್ದಿಗೆ ಸ್ಪಂದಿಸಿಲ್ಲ, ನಿರ್ಲಕ್ಷಿಸಿದ್ದಾರೆಂದು ಹಿಂದೆ ಆರೋಪಿಸಿ, ಸರ್ಕಾರವನ್ನೇ ಕೆಡವಿದ್ದೀರಾ, ಈಗ ಸಮ್ಮಿಶ್ರ ಸರ್ಕಾರದಲ್ಲಿ ಸಾಕಷ್ಟುಅನುದಾನ ತಂದಿದ್ದೇನೆಂದು ಹೇಳಿಕೊಂಡಿದ್ದೀರಾ, ಮತ್ತೇಕೆ ಸರ್ಕಾರ ಬೀಳಿಸಿದ್ದೀರಿ, ಇದರ ಹಿಂದಿನ ಮರ್ಮ ಇಡೀ ರಾಜ್ಯದ ಜನತೆಗೆ ತಿಳಿದಿದೆ, ನಾನು ಗೆದ್ದಾಗಲೇ ವಿಶ್ವನಾಥ್‌ ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕೆಲಸ ಮಾಡುತ್ತೇನೆಂದು ಹೇಳಿದ್ದೆ, ಆದರೆ ನೀವು ತಮ್ಮ ಭಟ್ಟಂಗಿಗಳ ಮೂಲಕ ತಮ್ಮ ವಿರುದ್ದ ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಹಕರಿಸುವ ಬದಲು ಕಾಲು ಕೆರೆದು ಜಗಳಕ್ಕೆ ನಿಂತಿದ್ದೀರಾ, ಅದಕ್ಕೆ ನಾನು ತಯಾರಿದ್ದೇನೆಂದು ಸವಾಲೆಸೆದಿದ್ದಾರೆ.

ಸಾರ್ವಜನಿಕ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್‌ ಕೆಟ್ಟು ಮೂರು ತಿಂಗಳಾಗಿದೆ. ತಾಲೂಕಿನಲ್ಲಿದ್ದ ಎರಡು 108 ವಾಹನ ಹಿಂಪಡೆದಿದ್ದರೂ, ಮೌನವಹಿಸಿದ್ದೀರಾ, ಆಸ್ಪತ್ರೆ ಸಮಸ್ಯೆಗಳಿಗೆ ನೀವು ಸ್ಪಂದಿಸದ ಪರಿಣಾಮ ರೋಗಿಗಳು ಪರದಾಡುವಂತಾಗಿದೆ ಎಂದಿದ್ದಾರೆ.

ಪೌರತ್ವ ಕಾಯ್ದೆ: ಮೋದಿ ಹಠಾವೋ, ದೇಶ್‌ ಬಚಾವೋ ಹೋರಾಟ...

ಹನುಮ ಜಯಂತಿ ಗಲಾಟೆ ಸಂಬಂಧ ತಮ್ಮ ಮೇಲೆ ಗೂಬೆ ಕೂರಿಸುತ್ತೀರಾ, ಆ ವೇಳೆ ನಾನೇ ಕೇಸ್‌ ಹಾಕಿಸಿದೆ ಎಂದು ಸುಳ್ಳು ಪ್ರಚಾರ ನಡೆಸಿದಿರಿ, 107 ಕಾಯ್ದೆಯಡಿ ಹಾಕಿದ್ದ ಪ್ರಕರಣಕ್ಕೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದು ಖುಲಾಸೆಯಾಗದಂತೆ ಜೀವಂತವಾಗಿಟ್ಟಿದ್ದೀರಾ, ನನ್ನ ಮೇಲೆ ಆರೋಪಿಸುತ್ತೀರಾ, ಕನಿಷ್ಟರಸ್ತೆ ತೆರವುಗೊಳಿಸುವಲ್ಲಿ ವಿಫಲರಾಗಿದ್ದೀರಾ ಎಂದು ಪ್ರಶ್ನಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜೇಗೌಡ, ನಗರ ಅಧ್ಯಕ್ಷ ಶಿವಯ್ಯ, ಮಾಜಿ ಅಧ್ಯಕ್ಷ ಕೆಂಪೇಗೌಡ, ವಕೀಲ ಪುಟ್ಟರಾಜು, ಮುಖಂಡ ಕುಮಾರ್‌ ಇದ್ದರು.

ಮುಖಾಮುಖಿ ಚರ್ಚೆಗೆ ಸಿದ್ಧ

ಕಬಿನಿ ನದಿಯಿಂದ ಹುಣಸೂರು ಮತ್ತು ಎಚ್‌.ಡಿ. ಕೋಟೆ ತಾಲೂಕಿನ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ತಮ್ಮ ಅವಧಿಯಲ್ಲೇ ಜಿಪಂನಲ್ಲಿ ಸಿಇಒ ಆಗಿದ್ದ ಗೋಪಾಲ್‌ರ ಶ್ರಮವಿತ್ತು, ಅದನ್ನೇ ಮತ್ತೆಮತ್ತೆ ಹೇಳುತ್ತಿದ್ದೀರಾ, ಮರದೂರು ಏತ ನೀರಾವರಿ ಯೋಜನೆಯೂ ಸಹ ಹಳೆಯದ್ದೆ, ಆದರೆ ಇದನ್ನು ನಾನೇ ಮಾಡಿದೆ ಎಂದು ಹೇಳಿಕೊಳ್ಳುತ್ತಿದ್ದೀರಾ, ಹೀಗೆ ಅನ್ಯಾಯಮಾಡಿರುವ ನೀವು ಮೊದಲು ಜನರ ಕ್ಷಮೆ ಕೇಳಿ ಬನ್ನಿ, ನಂತರ ಎಲ್ಲ ವಿಷಯಗಳಿಗೆ ಮುಖಾಮುಖಿ ಚರ್ಚೆಯಾಗಲು ಸಿದ್ದನಿದ್ದೇನೆ ಎಂದಿದ್ದಾರೆ.