ಮೈಸೂರು(ಜ.03): ಸಿಎಎ, ಎನ್‌ಸಿಆರ್‌, ಎನ್‌ಪಿಆರ್‌ ಕಾಯ್ದೆ ಹಿಂಪಡೆಯದಿದ್ದರೆ ಮೋದಿ ಹಠವೋ ದೇಶ್‌ ಬಚಾವೋ ಚಳವಳಿ ನಡೆಸಲಾಗುವುದು ಎಂದು ಚಿಂತಕ ಪ್ರೊ.ಬಿ.ಪಿ. ಮಹೇಶ್‌ಚಂದ್ರ ಗುರು ತಿಳಿಸಿದ್ದಾರೆ.

ಪೌರತ್ವ ಕಾಯ್ದೆ ಕೇವಲ ಮುಸ್ಲಿಮರ ಸಮಸ್ಯೆ ಅಲ್ಲ. ದೇಶದ ಮೂಲನಿವಾಸಿಗಳು, ದಲಿತರು, ಹಿಂದುಳಿದವರಿಗೂ ಸಮಸ್ಯೆಯಾಗಲಿದ್ದು, ಈ ಕಾಯ್ದೆಯನ್ನು ವಾಪಸ್‌ ಪಡೆಯಬೇಕು. ಇಲ್ಲವಾದರೆ ಎಲ್ಲ ಸಂಘಟನೆಗಳೂ, ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ದೇಶಾದ್ಯಂತ ‘ಮೋದಿ ಹಠವೋ, ದೇಶ್‌ ಬಚಾವೋ’ ಹೋರಾಟ ನಡೆಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಅನಧಿಕೃತ ಹೆಚ್ಚುವರಿ ಶುಲ್ಕ ಸಂಗ್ರಹ: ರೈಲ್ವೇಗೆ ನೋಟಿಸ್‌

ಜನವಿರೋಧಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಇಡೀ ದೇಶದ ಜನತೆ ಒಗ್ಗಟ್ಟಾಗಿಸಿ ಪ್ರತಿಭಟಿಸುತ್ತಿದ್ದಾರೆ. ಇಡೀ ದೇಶದ ಜನರನ್ನು ಜೈಲಿಗೆ ಹಾಕಿದರೂ ಸಹ ಪ್ರತಿಭಟನೆ ನಿಲ್ಲಿಸುವುದಿಲ್ಲ. ಜೈಲುಭರೋ ಚಳವಳಿ ನಡೆಸಲು ಸಿದ್ಧವಾಗಿವೆ. ನಿಮ್ಮ ಬುಲೆಟ್‌ ಶಕ್ತಿಗಿಂತ, ಮತದಾನ ಶಕ್ತಿ ಪರಿಣಾಮಕಾರಿಯಾಗಿದೆ ಎಂದಿದ್ದಾರೆ.

ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ನಮಗೆ ಧರ್ಮ ಮುಖ್ಯ ಅಲ್ಲ, ದೇಶ ಮುಖ್ಯ, ಸಂಪ್ರದಾಯಕ್ಕಿಂತ ಸತ್ಯ ಶ್ರೇಷ್ಠ. ಆದರೆ ಕೇಂದ್ರ ಸರ್ಕಾರ ಧರ್ಮ ಹೇರಲು ಹೊರಟಿದೆ. ಈ ದೇಶದ ಮೂಲ ನಿವಾಸಿಗಳ ಪೌರತ್ವ ಪರೀಕ್ಷೆ ಮಾಡುತ್ತಿರುವುದು ಖಂಡನೀಯ. ಈ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರವು ಈ ಮಣ್ಣನ್ನೇ ಸಾಯಿಸಲು ಮುಂದಾಗಿದ್ದು, ನಾಗರಿಕತೆಯನ್ನು ಅಣಕವಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೃಷಿ ಸಮ್ಮಾನ್‌ಗೆ ತುಮಕೂರಿನಿಂದ 3 ಲಕ್ಷಕ್ಕೂ ಅಧಿಕ ರೈತರಿಂದ ಅರ್ಜಿ

ಸುದ್ದಿಗೋಷ್ಠಿಯಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಸಂಚಾಲಕ ಡಾ. ಕೃಷ್ಣಮೂರ್ತಿ ಚಮರಂ, ಪತ್ರಕರ್ತ ಬಿ.ಆರ್‌. ರಂಗಸ್ವಾಮಿ, ಮುಸ್ಲಿಂ ಮುಖಂಡ ಅಜಿಜುಲ್ಲಾ ಅಜ್ಜು ಬಾಯಿ, ದಸಂಸ ಜಿಲ್ಲಾ ಸಂಚಾಲಕ ದೇವೆಂದ್ರ, ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಮ್ಜದ್‌ ಖಾನ್‌ ಇದ್ದರು.