ತುಮಕೂರು(ಜ.03): 32 ಜನರಿಗೆ ಕೃಷಿ ಕರ್ಮಣ, ಮೂರು ಮಂದಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡನ್ನು ಪ್ರಧಾನಿ ನರೇಂದ್ರ ಮೋದಿ ವಿತರಿಸುವ ಕಾರ್ಯಕ್ಕೆ ಸಹಸ್ರಾರು ಅನ್ನದಾತರು ಸಾಕ್ಷಿಯಾದರು.

20 ನಿಮಿಷಗಳ ಕಾಲ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ಶಾಲನ್ನು ಹೊದ್ದುಕೊಂಡೇ ಪುರಸ್ಕೃತರಿಗೆ ಪ್ರಶಸ್ತಿ ನೀಡಿದರು. ಅಲ್ಲದೇ ಕೆಲವು ರೈತರ ಬೆನ್ನು ತಟ್ಟಿದರು. ಕಾಲಿಗೆ ಬೀಳಲು ಮುಂದಾದಾಗ ವಿನಯವಾಗಿ ನಿರಾಕರಿಸಿದರು. ಕಿಸಾನ್ ಸಮ್ಮಾನ್ ಯೋಜನೆಯಡಿ 6 ಕೋಟಿ ಕುಟುಂಬಗಳಿಗೆ 12 ಸಾವಿರ ಕೋಟಿ ರು. ಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಟನ್ ಒತ್ತುವ ಮೂಲಕ ನೇರವಾಗಿ ರೈತರ ಖಾತೆಗೆ ಹಣ ವರ್ಗಾವಣೆ ಮಾಡಿದರು.

ಪರಿಶೀಲನೆಗೆ ಬಂದು ನಿಂತಲ್ಲೇ ನಿಂತಿದ್ದ ರೈಲ್ವೇ ಸಚಿವ, ಅಂಡರ್‌ಪಾಸ್ ಠುಸ್

ತುಮಕೂರಿನ ಜೂನಿಯರ್ ಕಾಲೇಜಿನಲ್ಲಿ ನಡೆದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆ ಮಧುಗಿರಿ ತಾಲೂಕು ದೊಡ್ಡೇರಿ ಹೋಬಳಿ ಯ ಗೊದ್ದನಪಾಳ್ಯದ ಜಿ. ರಂಗಪ್ಪ ಸೇರಿ 32 ಮಂದಿಗೆ ಪ್ರಧಾನಿ ಮೋದಿ ಪ್ರಶಸ್ತಿ ವಿತರಿಸಿ ದರು. ಹಾಗೆಯೇ ಇದೇ ಮೊದಲ ಬಾರಿಗೆ ಕಿಸಾನ್ ಕ್ರೆಡಿಟ್ ಕಾರ್ಡನ್ನು ಮೀನುಗಾರಿಕೆಗೂ ನೀಡಲು ತೀರ್ಮಾನಿಸಿದ್ದು ಕರ್ನಾಟದವರಾದ ಮಾಲತಿ, ರಂಗೇಶ್ ಹಾಗೂ ಸುಪ್ರಿಯಾ ಅವರಿಗೆ ನೀಡಿದರು. ಈ ಮೂಲಕ ಸಮುದ್ರದ ಆಳದಲ್ಲಿನ ಮೀನುಗಾರಿಕೆ ಮಾಡಲು ಯಂತ್ರಗಳನ್ನು ಕೊಳ್ಳಲು ಸಹಕಾರಿಯಾಗಲಿದೆ.

ಕೃಷಿ ಸಮ್ಮಾನ್‌ಗೆ ತುಮಕೂರಿನಿಂದ 3 ಲಕ್ಷಕ್ಕೂ ಅಧಿಕ ರೈತರಿಂದ ಅರ್ಜಿ

ಬಳಿಕ ಮಾತನಾಡಿದ ಪ್ರಧಾನಿ ಮೋದಿ ಅವರು ೨೦೨೨ ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷವಾಗುತ್ತದೆ. ಆ ಸಂದರ್ಭ ದಲ್ಲಿ ರೈತರ ಆದಾಯ ದ್ವಿಗುಣಗೊಳಿಸಿ ಸ್ವಾತಂತ್ರ್ಯ ತಂದು ಕೊಟ್ಟವ ರಿಗೆ ಶ್ರದ್ಧಾಂಜಲಿ ಸಲ್ಲಿಸುವುದಾಗಿ ತಿಳಿಸಿದರು. ಕಾಫಿ ಹಾಗೂ ಮೆಣಸು ಬೆಳೆಯುವ ಚಿಕ್ಕ ಮಗಳೂರು ಜಿಲ್ಲೆ, ಈರುಳ್ಳಿ ಹೆಚ್ಚಾಗಿ ಬೆಳೆ ಯುವ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು, ಬಾದಾಮಿ ಬೆಳೆಯುವ ಬೆಳಗಾವಿ ಹಾಗೂ ಮೈಸೂರಿನ ಭಾಗದ ರೈತರು ಬೆಳೆಯುವ ಪದಾರ್ಥಗಳಿಗೆ ಕ್ಲಸ್ಟರ್ ನಿರ್ಮಣ ಮಾಡುವ ಇಂಗಿತ ವ್ಯಕ್ತಪಡಿಸಿದರು. ದಕ್ಷಿಣ ಭಾರತದಲ್ಲಿ ಹೇರಳವಾಗಿ ಬೆಳೆಯುವ ತೆಂಗು ಹಾಗೂ ಗೋಡಂಬಿ ಬೆಳೆಯುತ್ತಿದ್ದು ತೆಂಗಿನ ಬೆಳೆಗೆ ಸೂಕ್ತ ಬೆಲೆ ನೀಡುವ ಸುಳಿವನ್ನು ನೀಡಿದರು.