ಆನೇಕಲ್‌ : ಹಾಸ್ಟೆಲ್‌ಗಳ ವಾರ್ಡನ್‌ ಆಗಿ ಕಾರ‍್ಯನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಘಟನೆ ಆನೇಕಲ್‌ನಲ್ಲಿ ನಡೆದಿದೆ.

ಆನೇಕಲ್‌ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಹಲವು ಹಾಸ್ಟೆಲ್‌ಗಳ ವಾರ್ಡನ್‌, ಗುಲ್ಬರ್ಗ ಮೂಲದ ದೇವೆಂದ್ರಪ್ಪ(52) ಮೃತಪಟ್ಟವರು. ಕೆಲಸದ ಒತ್ತಡ ಹಾಗೂ ಮೇಲಧಿಕಾರಿಗಳು ಮತ್ತು ಕೆಲ ಸ್ಥಳೀಯ ಪತ್ರಕರ್ತರ(ಯುಟ್ಯೂಬ್‌) ಕಿರುಕುಳದಿಂದಾಗಿ ಅತಿಯಾಗಿ ಮದ್ಯ ಸೇವನೆ ಮಾಡಿ ಜೀವ ಕಳೆದುಕೊಂಡಿದ್ದಾರೆ ಎಂದು ಮೃತರ ಪತ್ನಿ ಆರೋಪಿಸಿದ್ದಾರೆ.

ದೇವೇಂದ್ರಪ್ಪ ಆನೇಕಲ್‌ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಹಲವು ಹಾಸ್ಟೆಲ್‌ಗಳ (ವಾರ್ಡನ್‌) ಮೇಲ್ವಿಚಾರಕರಾಗಿ ಸತತ 20 ವರ್ಷಗಳಿಂದ ಕೆಲಸ ನಿರ್ವಸುತ್ತಿದ್ದರು. ದೇವೇಂದ್ರಪ್ಪ ನಕಲಿ ಬಿಲ್‌ ಸೃಷ್ಟಿಸಿ ಲಕ್ಷಾಂತರ ರುಪಾಯಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ಕೆಲ ಅಧಿಕಾರಿಗಳು ಹಣ ಪೀಕಿದ್ದಾರೆ. ಇದಕ್ಕೆ ಯೂ ಟ್ಯೂಬ್‌ ಚಾನೆಲ್‌ ಸೇರಿದಂತೆ ಕೆಲ ಪತ್ರಕರ್ತರು ಕೈ ಜೋಡಿಸಿದ್ದಾರೆ. ಇವರ ಕಾಟ ತಾಳಲಾರದೇ ಮದ್ಯದ ಚಟಕ್ಕೆ ದಾಸರಾಗಿದ್ದರು. ಕೆಲವರಿಗೆ ಹಣ ನೀಡಿದ್ದು ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಕೆಲವರು ಮನೆಯ ಬಳಿ ಬಂದು ಹಣಕ್ಕಾಗಿ ಪೀಡಿಸುತ್ತಿದ್ದರು. ಹಣ ನೀಡದಿದ್ದಲ್ಲಿ ಹಿರಿಯ ಅಧಿಕಾರಿಗಳಿಗೆ ದೂರು ಬರೆಯುವುದಾಗಿ ಹೆದರಿಸಿದ್ದರು ಎಂದು ಮೃತರ ಪತ್ನಿ ಹೇಳಿದ್ದಾರೆ. ಆನೇಕಲ್‌, ಜಿಗಣಿ, ಅತ್ತಿಬೆಲೆ ಸೇರಿದಂತೆ ಹಲವು ಹಾಸ್ಟೆಲ್‌ಗಳಲ್ಲಿ ದೇವೇಂದ್ರಪ್ಪ ಒಬ್ಬರೇ ಕಾರ್ಯ ನಿರ್ವಹಿಸಬೇಕಿತ್ತು. ಇವೆಲ್ಲವುಗಳ ಅತಿಯಾದ ಒತ್ತಡದಿಂದ ಸಾವನ್ನಪ್ಪಿದ್ದಾರೆ ಎಂದು ಠಾಣೆಗೆ ದೂರು ನೀಡಿರುವುದಾಗಿ ದೇವೇಂದ್ರಪ್ಪ ಅವರ ಪತ್ನಿ ಹೇಳಿದರು.

ಆನೇಕಲ್‌ ಪೊಲೀಸರು ದೇವೇಂದ್ರಪ್ಪನವರ ಮೊಬೈಲ್‌ ಅನ್ನು ವಶಕ್ಕೆ ಪಡೆದಿದ್ದು, ಕರೆಗಳ ಪರಿಶೀಲನೆ ಬಳಿಕ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ. ಮೃತನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.

ಸಂತಾಪ ಸೂಚನೆ:

ದೇವೆಂದ್ರಪ್ಪನವರ ಅಕಾಲಿಕ ಮರಣಕ್ಕೆ ಹಾಸ್ಟೆಲ್‌ನ ಹಳೆಯ ದ್ಯಾರ್ಥಿಗಳು ಕಂಬನಿ ಮಿಡಿದಿದ್ದು, ಹಾಸ್ಟೆಲ್‌ನಲ್ಲಿ ಅವರ ಭಾವಚಿತ್ರ ಇಟ್ಟು ಪುಷ್ಪ ನಮನ ಸಲ್ಲಿಸಿದರು. ಸರ್ಕಾರ ಈ ಬಗ್ಗೆ ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ವಸಬೇಕು. ಮೃತರ ಪತ್ನಿಗೆ ಉದ್ಯೋಗ ನೀಡಬೇಕು ಎಂದು ಆಗ್ರಸಿದರು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.