ಶಾಲೆಗಳಿಗೆ ರಜೆ ಘೋಷಣೆ ಸುಳ್ಳು ಸುದ್ದಿ; ಕಲಬುರಗಿ ಜಿಲ್ಲಾಧಿಕಾರಿ ಸ್ಪಷ್ಟನೆ
ಮೂರು ದಿನಗಳ ಕಾಲ ರಜೆ ಎನ್ನುವುದು ಸುಳ್ಳು ಸುದ್ದಿ. ಕಲಬುರಗಿ ಜಿಲ್ಲೆಯಲ್ಲಿಂದು ಶಾಲೆಗಳಿಗೆ ರಜೆ ಇಲ್ಲ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಸ್ಪಷ್ಟೀಕರಣ ನೀಡಿದ್ದಾರೆ.
ಕಲಬುರಗಿ (ಜು.27) : ಮೂರು ದಿನಗಳ ಕಾಲ ರಜೆ ಎನ್ನುವುದು ಸುಳ್ಳು ಸುದ್ದಿ. ಕಲಬುರಗಿ ಜಿಲ್ಲೆಯಲ್ಲಿಂದು ಶಾಲೆಗಳಿಗೆ ರಜೆ ಇಲ್ಲ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್(Fauzia tarannum IAS) ಸ್ಪಷ್ಟೀಕರಣ ನೀಡಿದ್ದಾರೆ.
ಕಳೆದ ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲಾಧಿಕಾರಿ ಮೂರು ದಿನಗಳ ಕಾಲ ಶಾಲೆಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ನಿನ್ನೆಯ ರಜೆ ವಿಸ್ತರಣೆ ಮಾಡಿಲ್ಲ. ವಾಟ್ಸಪ್‌ನಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿಯಾಗಿದೆ ಎಂದು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದ್ದರೂ, ಮಳೆಯಾಗಿಲ್ಲ. ಮೋಡ ಕವಿದ ವಾತಾವರಣವಿದೆ. ಹೀಗಾಗಿ ಶಾಲೆಗಳಿಗೆ ರಜೆ ಘೊಷಣೆಯಾಗಿಲ್ಲ. ಹವಾಮಾನ ಇಲಾಖೆ ವರದಿ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ರಾಯಚೂರು: ಜಿಟಿ ಜಿಟಿ ಮಳೆ, ಇಂದು ಅಂಗನವಾಡಿ, ಶಾಲೆಗಳಿಗೆ ರಜೆ
ಮಳೆ: ಕೃಷಿ ಚುಟುವಟಿಕೆಗೆ ಅಡ್ಡಿ
ಆಳಂದ: ತಾಲೂಕಿನಲ್ಲಿ ಸದ್ಯ ಸಾಧಾರಣ ಮಳೆಯಾಗಿದೆ. ಆದಾಗ್ಯೂ ಇದು ಕೃಷಿಗೆ ವರವಾಗಿದೆ. ಆದರೆ ಕುಡಿವ ನೀರಿನ ಮೂಲ ತೆರೆದ ಬಾವಿ. ಕೊಳವೆ ಬಾವಿಗಳಿಗೆ ಇನ್ನೂ ಅಂತರ್ಜಲ ಕೊರತೆ ಎದುರಿಸುತ್ತಿವೆ. ಕೆರೆ, ಗೋಕಟ್ಟೆನೀರು ಸಂಗ್ರಹವಾಗಿಲ್ಲ. ಖಜೂರಿ ವಲಯ ಸೇರಿ ಇನ್ನಿತರ ಕಡೆ ಬಿತ್ತನೆ ಕೈಗೊಂಡವರಿಗೆ ಬೆಳೆಯಲ್ಲಿ ಕಳೆ ತೆಗೆಯಲು ಮಳೆ ಅಡಿಯಾಗಿದೆ. ಮತ್ತೊಂಡೆ ನಿಂಬರಗಾ, ಆಳಂದ, ನರೋಣಾ ವಲಯದ ಬಿತ್ತನೆಗೆ ನಿರೀಕ್ಷಿತ ಮಳೆಯಾಗಿದೆ. ಆದರೆ ಬಿತ್ತನೆಗೆ ಮುಂದಾಗುವ ರೈತರಿಗೆ ಮಳೆಯ ಬಿಡುವ ನೀಡುತ್ತಿಲ್ಲ. ಈಗಾಗಲೇ ಎರಡು ತಿಂಗಳ ಬಿತ್ತನೆ ವಿಳಂಬವಾಗಿದೆ. ಮುಂದೆ ಬಿತ್ತನೆ ಮಾಡುವ ಬೆಳೆಗೆ ಮಳೆ ಕೊರತೆಯಾದರೆ ಸಮಸ್ಯೆ ಆಗುತ್ತದೆ ಎಂಬ ಚಿಂತೆಗೊಳಗಾಗಿದ್ದಾರೆ.
ರೆಡ್ ಅಲರ್ಟ್ ಇದ್ದರೂ ಕಲಬುರಗಿಯಲ್ಲಿ ಇಡೀ ದಿನ ಮಳೆ ಇಲ್ಲ!