Hirebenakal megalithic: ಕರ್ನಾಟಕದ ಏಳು ಅದ್ಭುತಗಳಲ್ಲಿ ಹಿರೇಬೆಣಕಲ್‌ ಶಿಲಾ ಸಮಾಧಿ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಪ್ರಾಗೈತಿಹಾಸಿಕ ಹಿನ್ನೆಲೆ ಹೊಂದಿರುವ ‘ಹಿರೇಬೆಣಕಲ್‌ ಶಿಲಾ ಸಮಾಧಿ’ಗಳ ತಾಣ ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದು ಎಂದು ಅಧಿಕೃತ ಮಾನ್ಯತೆ ಹೊಂದಿದೆ.

Hirebenakal prehistoric megalithic is one of the seven wonders of Karnataka koppal rav

ಬೆಂಗಳೂರು (ಫೆ.26) : ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಪ್ರಾಗೈತಿಹಾಸಿಕ ಹಿನ್ನೆಲೆ ಹೊಂದಿರುವ ‘ಹಿರೇಬೆಣಕಲ್‌ ಶಿಲಾ ಸಮಾಧಿ’ಗಳ ತಾಣ ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದು ಎಂದು ಅಧಿಕೃತ ಮಾನ್ಯತೆ ಹೊಂದಿದೆ.

ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌(Asianet suvarnata news) ಹಾಗೂ ಕರ್ನಾಟಕ ಪ್ರವಾಸೋದ್ಯಮ ಇಲಾಖೆ(Karnataka Tourism Department) ಸಹಯೋಗದಲ್ಲಿ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಈ ಘೋಷಣೆ ಮಾಡಿದರು. ಪ್ರವಾಸೋದ್ಯಮ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌(Minister Anand singh) ಕರ್ನಾಟಕ ಏಳು ಅದ್ಭುತಗಳ ಘೋಷಣೆಗೆ ಸಾಕ್ಷಿಯಾದರು. ಕೊಪ್ಪಳದ ಡಿಸಿ ಎಂ.ಸುಂದರೇಶ ಬಾಬು ಅವರಿಗೆ ವಿಜೇತ ಜಾಲತಾಣದ ಪ್ರಮಾಣ ಪತ್ರ ನೀಡಲಾಯಿತು.

ಶಿವಮೊಗ್ಗ: ಕರುನಾಡ 7 ಅದ್ಭುತಗಳಲ್ಲಿ ಜೋಗಕ್ಕೆ ಸ್ಥಾನ

ಶಿಲಾ ಸಮಾಧಿಗಳು:

ಹಿರೇಬೆಣಕಲ್‌ ಶಿಲಾ ಸಮಾಧಿ(Hirebenakal's  megalithic )ಗಳು (ಬೃಹತ್‌ ಶಿಲಾಯುಗದ ಅದ್ಭುತ) ಬಹುತೇಕ ಕನ್ನಡಿಗರಿಗೆ ಅಪರಿಚಿತವಾದ ಕರ್ನಾಟಕದ ಅದ್ಭುತ ಇದು. ಸುಮಾರು 3000-4000 ವರ್ಷಗಳಷ್ಟುಹಳೆಯ ಇತಿಹಾಸ ಇರುವ ತಾಣ.

ಕೊಪ್ಪಳ(Koppal) ಜಿಲ್ಲೆ ಗಂಗಾವತಿಯಿಂದ ಸುಮಾರು 10 ಕಿಮೀ ದೂರದ ಹಿರೇಬೆಣಕಲ್‌ ಗ್ರಾಮ(Hirebenakal village)ದ ಮೋರ್ಯಾರ ಗುಡ್ಡ(Morya Hill)ದಲ್ಲಿ ಆದಿಮಾನವ ನಿರ್ಮಿತ ಬೃಹತ್‌ ಶಿಲಾಯುಗದ ನೂರಾರು ಶಿಲಾಸಮಾಧಿಗಳು ಹಾಗೂ ಆದಿಮಾನವ ರಚಿತ ಗುಹಾಚಿತ್ರಗಳು ಇವೆ. ಲಂಡನ್ನಿನ ಸ್ಟೋನ್‌ ಹೆಂಜಸ್‌(Stonehenges of London), ಈಜಿಪ್ಟಿನ ಪಿರಮಿಡ್ಡುಗಳು(Egyptian pyramids), ಬಹರೈನಿನ ದಿಲ್ಮನ್‌ ಸಮಾಧಿ ದಿಬ್ಬ(Dilman burial mound, Bahrain)ಗಳಂತೆ-ಸಾವಿನ ಗೌರವ ಸೂಚಕಗಳು-ಈ ಶಿಲಾಸಮಾಧಿ ಡೋಲ್ಮನ್ಗಳು. ವಿಶ್ವದ ಹಲವೆಡೆ ಇಂಥ ಡೋಲ್ಮನ್‌ಗಳು ಇದ್ದು, ಕೋರಿಯಾ ಒಂದರಲ್ಲೇ ವಿಶ್ವದ ಶೇ. 40ರಷ್ಟುಡೋಲ್ಮನ್‌ಗಳು ಪತ್ತೆಯಾಗಿವೆ. ಭಾರತದಲ್ಲಿ ಹಲವೆಡೆ ಈ ಶಿಲಾ ಸಮಾಧಿಗಳು ಪತ್ತೆಯಾಗಿವೆಯಾದರೂ, ಹಿರೇಬೆಣಕಲ್‌ ಮೋರ್ಯಾರ ಗುಡ್ಡ ಇಡೀ ದಕ್ಷಿಣ ಭಾರತದಲ್ಲೇ ಅತಿದೊಡ್ಡ ಮೆಗಾಲಿಥಿಕ್‌ ತಾಣವಾಗಿದೆ.

ಒಂದು ಅಡಿಯ ಶಿಲಾಸಮಾಧಿಯಿಂದ ಹಿಡಿದು 10ಅಡಿ ಶಿಲಾಚಪ್ಪಡಿಯ ಸಮಾಧಿಗಳು ಮೂರು-ನಾಲ್ಕು ಸಾವಿರ ವರ್ಷಗಳ ಪ್ರಾಕೃತಿಕ ಹೊಡೆತಗಳನ್ನು ತಾಳಿಯೂ ಇನ್ನೂ ಗಟ್ಟಿಯಾಗಿ ನಿಂತಿರುವುದು ನಿಜಕ್ಕೂ ಅದ್ಭುತ. ಕರ್ನಾಟಕದಲ್ಲಿ ಇರುವ ಇಂಥ ಅನೇಕ ಪ್ರಾಗೈತಿಹಾಸಿಕ ತಾಣಗಳ ಪ್ರಾತಿನಿಧಿಕ ಅದ್ಭುತವೇ ಹಿರೇಬೆಣಕಲ್‌ ಮೋರ್ಯಾರ ಗುಡ್ಡದ ಶಿಲಾ ಸಮಾಧಿಗಳು.

ಕರ್ನಾಟಕದ 7 ಅದ್ಭುತಗಳಲ್ಲೊಂದು ವಿಜಯಪುರದ ಗೋಲಗುಮ್ಮಟ..!

ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಕನ್ನಡಪ್ರಭ ದಿನ ಪತ್ರಿಕೆಯವರು ಹಾಗು ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಕರ್ನಾಟಕದ ಅದ್ಭುತ ತಾಣಗಳ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್‌ ಶಿಲಾಸಮಾಧಿಗಳನ್ನು ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದು ಎಂದು ಆಯ್ಕೆ ಮಾಡಿರುವುದು ಕೊಪ್ಪಳ ಜಿಲ್ಲೆಗೆ ಹೆಮ್ಮೆ ತಂದಿದೆ. ಇದುವರೆಗೂ ಅಷ್ಟಾಗಿ ಪ್ರಚಾರಕ್ಕೆ ಬರದ ಈ ಶ್ರೇಷ್ಠ ಪುರಾತನ ಸ್ಥಳವನ್ನು ಹೆಕ್ಕಿ ತೆಗೆದು ಗುರುತಿಸಿ ಆಯ್ಕೆ ಮಾಡಿರುವುದು ಅತೀವ ಸಂತೋಷ ಆಗಿದೆ. ಮುಂದಿನ ದಿನಗಳಲ್ಲಿ ಇದರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಎಂ ಸುಂದರೇಶ ಬಾಬು, ಜಿಲ್ಲಾಧಿಕಾರಿ ಕೊಪ್ಪಳ

ಹಿರೇಬೆಣಕಲ್‌ ಶಿಲಾ ಸಮಾಧಿ ತಾಣ ರಾಜ್ಯದ ಏಳು ಅದ್ಭುತಗಳಲ್ಲಿ ಒಂದಾಗಿರುವುದು ಹೆಮ್ಮೆ ಸಂಗತಿ. ಮುಂದಿನ ದಿನಮಾಗಳಲ್ಲಿ ಈ ತಾಣ ವಿಶ್ವ ಅದ್ಬುತ ತಾಣಗಳಲ್ಲಿ ಒಂದಾಗಲಿದೆ. ಇದೊಂದು ನಮ್ಮ ರಾಜ್ಯದ ಅದ್ಭುತ ತಾಣವಾಗಿದೆ.

ಶರಣಬಸಪ್ಪ ಕೋಲ್ಕಾರ್‌, ಪ್ರಾಚಾರ್ಯರು ಗಂಗಾವತಿ.

Latest Videos
Follow Us:
Download App:
  • android
  • ios