ವಿದ್ಯುತ್ ಬಿಲ್ ಬಗ್ಗೆ ಗೊಂದಲ ಬೇಡ: ಹೆಸ್ಕಾಂ
ಏಪ್ರಿಲ್ ತಿಂಗಳಿನಲ್ಲಿ ಯಾವುದೇ ಗ್ರಾಹಕರಿಗೆ ಬಿಲ್ ನೀಡಲಿಲ್ಲ| ಮಾರ್ಚ್-ಏಪ್ರಿಲ್ ಎರಡು ತಿಂಗಳ ಬಿಲ್‌ನ್ನು ಮೇನಲ್ಲಿ ನೀಡಲಾಗಿದೆ| ಬಿಲ್ ನೀಡುವಲ್ಲಿ ಗ್ರಾಹಕರಿಗೆ ಯಾವುದೇ ರೀತಿಯ ಅನ್ಯಾಯವಾಗಿಲ್ಲ| ಹಿಂದಿನ ಎಲ್ಲ ಬಿಲ್‌ಗಳನ್ನು ಪರಿಶೀಲಿಸಿಯೇ ಬಿಲ್ ನೀಡಲಾಗಿದೆ| ಎರಡು ತಿಂಗಳ ಬಿಲ್ ಒಮ್ಮೆಲೆ ನೀಡಿದ್ದೇ ಗ್ರಾಹಕರಿಗೆ ಸ್ವಲ್ಪ ಗೊಂದಲ|
ಯಲ್ಲಾಪುರ(ಮೇ.11): ತಾಲೂಕಿನಾದ್ಯಂತ ಅನೇಕ ವಿದ್ಯುತ್ ಗ್ರಾಹಕರು ತಮಗೆ ಈ ತಿಂಗಳ ಒಂದಕ್ಕೆ ಎರಡರಷ್ಟು ವಿದ್ಯುತ್ ಬಿಲ್ ನೀಡಲಾಗಿದೆ ಎಂದು ಆಕ್ಷೇಪ ಎತ್ತುತ್ತಿರುವ ಕುರಿತು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿನಾಯಕ ಶೇಟ್, ಯಾವುದೇ ರೀತಿಯಲ್ಲಿ ಬಿಲ್ ದರ ಹೆಚ್ಚಿಗೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಏಪ್ರಿಲ್ ತಿಂಗಳಿನಲ್ಲಿ ಯಾವುದೇ ಗ್ರಾಹಕರಿಗೆ ಬಿಲ್ ನೀಡಲಿಲ್ಲ. ಪ್ರತಿ ತಿಂಗಳು ಬಿಲ್ ನೀಡಲಾಗುತ್ತಿತ್ತು. ಆದರೆ ಮಾರ್ಚ್-ಏಪ್ರಿಲ್ ಎರಡು ತಿಂಗಳ ಬಿಲ್‌ನ್ನು ಮೇನಲ್ಲಿ ನೀಡಲಾಗಿದೆ. ಹಾಗಂತ ಬಿಲ್ ನೀಡುವಲ್ಲಿ ಗ್ರಾಹಕರಿಗೆ ಯಾವುದೇ ರೀತಿಯ ಅನ್ಯಾಯವಾಗಿಲ್ಲ. ಹಿಂದಿನ ಎಲ್ಲ ಬಿಲ್‌ಗಳನ್ನು ಪರಿಶೀಲಿಸಿಯೇ ಬಿಲ್ ನೀಡಲಾಗಿದೆ. ಎರಡು ತಿಂಗಳ ಬಿಲ್ ಒಮ್ಮೆಲೆ ನೀಡಿದ್ದೇ ಗ್ರಾಹಕರಿಗೆ ಸ್ವಲ್ಪ ಗೊಂದಲವಾಗಿದೆ. ಆದ್ದರಿಂದ ಈ ಕುರಿತು ಸರಿಯಾದ ಖಾತ್ರಿಪಡಿಸಿಕೊಳ್ಳುವ ಅಗತ್ಯತೆಯಿದೆಯಾದರೆ ಹೆಸ್ಕಾಂ ಕಾರ್ಯಾಲಯಕ್ಕೆ ಬಂದು ಪರಿಶೀಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ವಿನಾಯಕ ಶೇಟ್ ತಿಳಿಸಿದ್ದಾರೆ.
ಹಲಸಿನ ಹಣ್ಣು ತಿಂದಿದ್ದಕ್ಕೆ ಕಾಂಗ್ರೆಸ್ ಮುಖಂಡನಿಂದ ಫೈರಿಂಗ್..!
ವಿದ್ಯುತ್ ಗ್ರಾಹಕರು ವಿದ್ಯುತ್ ಸ್ಥಾವರಗಳಿಗೆ ಮೊಬೈಲ್ ನಂಬರ್‌ನ್ನು ಜೋಡಿಸಲು www.hesc.om.co.in ಜಾಲತಾಣಕ್ಕೆ ಭೇಟಿ ನೀಡಿ, ಅಲ್ಲಿ Click Here To Update Mobile number ಲಿಂಕನ್ನು ಒತ್ತಿ ನಮೂದಿಸಬಹುದಾಗಿದೆ. ಇದರಿಂದ ಗ್ರಾಹಕರಿಗೆ ವಿದ್ಯುತ್ ಬಿಲ್‌ನ ಮಾಹಿತಿ ಹಾಗೂ ಹಣಪಾವತಿ ಮಾಡಿದ ವಿವರ ತಮ್ಮ ನೋಂದಾಯಿತ ಮೊಬೈಲ್ ನಂಬರ್‌ಗೆ ಪಡೆಯಲು ಸಹಾಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಯಲ್ಲಾಪುರದ ಹೆಸ್ಕಾಂ ಕಚೇರಿಗೆ ಸಂಪರ್ಕಿಸಲು ಸೂಚಿಸಲಾಗಿದೆ.