Mysuru : ಮತ್ತೆ ಮುಳುಗಿದ ಹುಣಸೂರಿನ ಮಂಜುನಾಥ ಬಡಾವಣೆ

ಕಳೆದ ರಾತ್ರಿ ಎಡಬಿಡದೆ ಸುರಿದ ಮಳೆಗೆ ನಗರಸಭೆ ವ್ಯಾಪ್ತಿಯ ಮಂಜುನಾಥ ಬಡಾವಣೆ ಮತ್ತೆ ಮುಳುಗಿದೆ. ಮಳೆಯ ಆರ್ಭಟಕ್ಕೆ ನಾಗರಿಕರು ದಂಗಾಗಿದ್ದು, ರಾತ್ರಿಯಿಡೀ ಮಳೆ ನೀರು ಮನೆಗೆ ನುಗ್ಗಬಹುದೆಂದು ಆತಂಕಗೊಂಡು ನಿದ್ರೆ ಬಿಟ್ಟು ಕುಳಿತಿದ್ದರು

Heavy Rainfall in Mysuru district snr

 ಹುಣಸೂರು (ಅ.11):  ಕಳೆದ ರಾತ್ರಿ ಎಡಬಿಡದೆ ಸುರಿದ ಮಳೆಗೆ ನಗರಸಭೆ ವ್ಯಾಪ್ತಿಯ ಮಂಜುನಾಥ ಬಡಾವಣೆ ಮತ್ತೆ ಮುಳುಗಿದೆ. ಮಳೆಯ ಆರ್ಭಟಕ್ಕೆ ನಾಗರಿಕರು ದಂಗಾಗಿದ್ದು, ರಾತ್ರಿಯಿಡೀ ಮಳೆ ನೀರು ಮನೆಗೆ ನುಗ್ಗಬಹುದೆಂದು ಆತಂಕಗೊಂಡು ನಿದ್ರೆ ಬಿಟ್ಟು ಕುಳಿತಿದ್ದರು.

ಭಾನುವಾರ ಸಂಜೆ 7 ಗಂಟೆಗೆ ಆರಂಭಗೊಂಡ ಮಳೆ (Rain) ರಾತ್ರಿಯಿಡೀ ಸುರಿದಿದೆ. ಮಧ್ಯರಾತ್ರಿಯ ನಂತರ ಮಳೆ ಇನ್ನಷ್ಟುಬಿರುಸುಗೊಂಡಿದೆ. ನಗರದ ಪ್ರತಿಷ್ಠಿತ ಬಡಾವಣೆಯಾದ ಮಂಜುನಾಥ್‌ ಬಡಾವಣೆಯಲ್ಲಿ ಎಂದಿನಂತೆ ನೀರು (Water ) ತುಂಬಿ ಇಡೀ ಬಡಾವಣೆ ದ್ವೀಪದಂತಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಮಳೆ ನೀರಿನಿಂದ ಬವಣೆ ಅನುಭವಿಸುತ್ತಿರುವ ನಾಗರಿಕರಿಗೆ ನಿನ್ನೆಯ ಮಳೆ ಮತ್ತೆ ಆತಂಕ ತಂದಿದೆ. ಬಡಾವಣೆಯ 50ಕ್ಕೂ ಹೆಚ್ಚು ಮನೆಯವರು ರಾತ್ರಿಯಿಡೀ ನಿದ್ರೆ ಬಿಟ್ಟು ನೀರು ಮನೆಯೊಳಗೆ ನುಗ್ಗದಂತೆ ತಡೆಯಲು ಪರದಾಡಿದ್ದಾರೆ.

ಪೂರ್ಣಗೊಳ್ಳದ ಕಾಮಗಾರಿ:

ತಿಂಗಳ ಹಿಂದೆ ಮಳೆ ಅವಾಂತರದಿಂದಾಗಿ ನಲುಗಿದ ನಾಗರಿಕರಿಗೆ ನಗರಸಭೆ ವತಿಯಿಂದ ಸಮಸ್ಯೆ ಪರಿಹಾರದ ಭರವಸೆ ಸಿಕ್ಕಿತ್ತು. ಹಾಲಿ ಇರುವ ಕಾಲುವೆಯ ದುರಸ್ತಿ, ನೀರು ಸರಾಗವಾಗಿ ಹರಿದುಹೋಗಲು ತಾತ್ಕಾಲಿಕವಾಗಿ ಪರಾರ‍ಯಯ ಕಾಲುವೆಗಳ ನಿರ್ಮಾಣ ಕಾಮಗಾರಿ ಆರಂಭಗೊಂಡಿತ್ತು. ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ 3 ಕೋಟಿ ರು. ವೆಚ್ಚದಡಿ 3ನೇ ಹಂತದ ನಗರೋತ್ಥಾನ ಯೋಜನೆಯಡಿ ರಾಜಕಾಲುವೆ ನಿರ್ಮಾಣ ಕಾಮಗಾರಿಗೆ ನೀಲನಕ್ಷೆ ಸಿದ್ಧಪಡಿಸಲಾಗಿತ್ತು.

ಈಗಾಗಲೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳಬೇಕಿತ್ತು. ಆದರೆ ಪೌರಾಯುಕ್ತರ ವರ್ಗಾವಣೆಯಾದ ಕಾರಣ ಪ್ರಕ್ರಿಯೆ ಅಲ್ಲಿಗೆ ನಿಂತು ಹೋಗಿದೆ. ತಾತ್ಕಾಲಿಕವಾಗಿ ಕಾಲುವೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದ್ದು ರಸ್ತೆಯೆಲ್ಲ ಹಳ್ಳಕೊಳ್ಳಗಳ ಹಾದಿಯಾಗಿದ್ದು, ಸಂಚಾರಕ್ಕೆ ಸಂಚಕಾರ ತಂದಿದೆ ಎಂದು ಬಡಾವಣೆಯ ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಬಡಾವಣೆಯಲ್ಲಿ ಈ ಹಿಂದೆ ರಾಜಕಾಲುವೆಯನ್ನೇ ಒತ್ತುವರಿ ಮಾಡಿಕೊಂಡು ಖಾಸಗಿ ಲೇಔಟ್‌ ಮಾಲೀಕರು ನಿವೇಶನಗಳನ್ನು ರಚಿಸಿ ಮಾರಾಟ ಮಾಡಿದ್ದು, ಆ ಜಾಗದಲ್ಲಿ ಮನೆಗಳ ನಿರ್ಮಾಣಗೊಂಡಿವೆ. ರಾಜಕಾಲುವೆ ಕಣ್ಮರೆಯೇ ಇಂತಹ ಅನಾಹುತಕ್ಕೆ ಕಾರಣವಾಗಿದೆ ಎಂದು ನಾಗರಿಕರ ಆರೋಪ.

ತಿಂಗಳ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಟೆಂಡರ್‌ ಪ್ರಕ್ರಿಯೆ ಆರಂಭಗೊಂಡಿತ್ತು. ಒಬ್ಬರೇ ಗುತ್ತಿಗೆದಾರ ಟೆಂಡರ್‌ನಲ್ಲಿ ಭಾಗವಹಿಸಿದ್ದರು. ತಾಂತ್ರಿಕ ಕಾರಣಗಳಿಂದ ಟೆಂಡರ್‌ ಅನುಮೋದನೆಗೊಂಡಿಲ್ಲ. ಇದೀಗ ಮತ್ತೆ ಎರಡನೇ ಬಾರಿಗೆ ಟೆಂಡರ್‌ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿ ಕಚೇರಿ ಆರಂಭಿಸಿದ್ದು ಟೆಂಡರ್‌ ಅನುಮೋದನೆಗೊಂಡ ಕೂಡಲೆ ರಾಜಕಾಲುವೆ ಸೇರಿದಂತೆ ಬಡಾವಣೆಯ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಆರಂಭಗೊಳ್ಳಲಿವೆ.

- ಎಲ್‌. ರೂಪಾ, ಪರಿಸರ ಎಂಜಿನಿಯರ್‌, ನಗರಸಭೆ, ಹುಣಸೂರು.

ಚಿತ್ರದುರ್ಗದಲ್ಲಿ ವರುಣನ ಆರ್ಭಟ

 

ಚಿತ್ರದುರ್ಗ (ಅ.9): ಕೆರೆ ತುಂಬಿದ್ರೆ ರೈತರ ಮೊಗದಲ್ಲಿ‌‌ ಮಂದಹಾಸ ಮೂಡೋದು‌ ಸಹಜ. ಆದ್ರೆ ಇಲ್ಲೊಂದು ಕೆರೆ ತುಂಬಿದ್ರೂ ಸಹ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ‌.  ಜಲಾವೃತವಾಗಿರೊ ಅಡಿಕೆ, ಮೆಕ್ಕೆಜೋಳ ಬೆಳೆ. ಫಸಲಿಗೆ ಬಂದಿರೋ ಅಡಿಕೆ ತೆಗಿಸಲಾಗದೇ, ಇತ್ತ ಕಟಾವಿಗೆ ಬಂದಿರೋ ಮೆಕ್ಕೇಜೋಳ ಕಟಾವು ಮಾಡಲಾಗದೇ,  ಕಂಗಾಲಾಗಿರೋ ಅನ್ನದಾತರು. ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ ತಾಲ್ಲೂಕಿನ ಹಂಪನೂರು‌ ಗ್ರಾಮದಲ್ಲಿ ಬಳಿ. ಎಂಎಹಟ್ಟಿ ಹಾಗು ಹಂಪನೂರು ಮಧ್ಯೆ ಇರುವ  ಕೆರೆ ಸತತ ಮಳೆಯಿಂದಾಗಿ ಭರ್ತಿಯಾಗಿದೆ. ಈ ಕೆರೆ ಪ್ರತಿವರ್ಷ ಭರ್ತಿಯಾಗಿ‌ ಕೋಡಿಬಿದ್ದರು ಯಾವುದೇ ಅವಾಂತರ ಆಗ್ತಿರಲಿಲ್ಲ. ಆದ್ರೆ ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಗಾಗಿ 16 ಎಕರೆ ಕೆರೆಯಂಗಳವನ್ನು ವಶಪಡಿಸಿ ಕೊಂಡಿರುವುದರಿಂದ ಕೆರೆಯ ನೀರು ಪಕ್ಕದ ಜಮೀನುಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ಜಮೀನುಗಳಲ್ಲಿ ಸತತ ಎರಡು ತಿಂಗಳಿಂದ‌ ನೀರು ನಿಂತು ಅಡಿಕೆ ಕಟಾವಿಗೆ ಅಡ್ಡಿಯಾಗಿದೆ. ಹೀಗಾಗಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಅಡಿಕೆಹಾಗು ಮೆಕ್ಕೆಜೋಳ ಬೆಳೆದ ರೈತರು ಕೈಗೆ ಬಂದ ತೋಟ ಹೆಚ್ಚಿನ ಶೀತದಿಂದ ಹಾಳಾಗಲಿದೆ ಎಂಬ ಆತಂಕದಲ್ಲಿದ್ದಾರೆ.

ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಸಣ್ಣ‌ನೀರಾವರಿ ಇಲಾಖೆ  ಹಾಗು ಹೆದ್ದಾರಿ ಪ್ರಾಧಿಕಾರದ ‌ಗಮನಕ್ಕ ತಂದರು ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಮೆಕ್ಕೆಜೋಳ ಕೊಳೆತು ಹೋಗಿದೆ. ಕಟಾವಿಗೆ ಬಂದಿರೋ ಅಡಿಕೆ ನೀರು ಪಾಲಾಗಿ ರೈತರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ‌. ಹೀಗಾಗಿ ಸಂಬಂಧಪಟ್ಟವರು, ಕೂಡಲೇ‌ ಇದಕ್ಕೊಂದು ಪರಿಹಾರ ಹುಡುಕಬೇಕಿದ್ದು, ರೈತರಿಗಾದ ನಷ್ಟಕ್ಕೆ ಸರ್ಕಾರದಿಂದ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

Haveri: ತುಂಬಿದ ಕೆರೆ ಕಟ್ಟೆಗಳು: ನೀರಿನ ಕೊರತೆ ಚಿಂತೆ ದೂರ

ಒಟ್ಟಾರೆ ಮಳೆ ನಿಂತರು‌ಮಳೆಯ ಹನಿ ನಿಲ್ಲಲ್ಲ ಎಂಬಂತೆ ಮಳೆ ನಿಂತರು ಮಳೆಯಿಂದಾಗಿ ಭರ್ತಿಯಾಗಿರೊ ಕೆರೆಯಿಂದ ಹಂಪನೂರಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನಾದ್ರು ಸಂಬಂಧಪಟ್ಟವರು ಅನ್ನದಾತರ ಸಂಕಷ್ಟಕ್ಕೊಂದು ಶಾಶ್ವತ ಪರಿಹಾರ ಹುಡುಕಲು ಮುಂದಾಗಬೇಕಿದೆ.

ಕೆರೆಗಳ ನೀರು ಸೋರಿಕೆಯಾಗದಂತೆ ನಿಗಾ ವಹಿಸಿ
ಹುಕ್ಕೇರಿ: ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭಾನುವಾರ ನಸುಕಿನ ಜಾವ ಮಾಜಿ ಸಂಸದರೂ ಆದ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಮೇಶ ಕತ್ತಿ ಅವರು ಭೇಟಿ ನೀಡಿ ಅಲ್ಲಿನ ಕೆರೆಗಳನ್ನು ವೀಕ್ಷಿಸಿದರು.

Latest Videos
Follow Us:
Download App:
  • android
  • ios