ಅಧಿವೇಶನ ಬಳಿಕ ಸಂಪುಟ ಕಸರತ್ತು?: ಹಲವು ಸಚಿವರಿಗೆ ಕೊಕ್

ಕೆಪಿಸಿಸಿ ಅಧ್ಯಕ್ಷರು ಬದಲಾದರೆ ತಮಗೆ ಅವಕಾಶ ಸಿಗಬೇಕು ಎಂದು ನಾಯಕ ಸಮುದಾಯಕ್ಕೆ ಸೇರಿದ ಕೆ.ಎನ್. ರಾಜಣ್ಣ ಹಾಗೂ ಸತೀಶ್ ಜಾರಕಿಹೊಳಿ ಇಂಗಿತ ವ್ಯಕ್ತಪಡಿಸುತ್ತಿದ್ದರೂ ಹುದ್ದೆ ದೊರೆಯುವುದು ಲಿಂಗಾಯತ ಸಮುದಾಯಕ್ಕೆ ಎನ್ನಲಾಗಿದೆ.

Likely Cabinet expansion after Belagavi Winter Session grg

ಬೆಂಗಳೂರು(ನ.29):  'ಕಾಂಗ್ರೆಸ್ ವಲಯದಲ್ಲಿ ಗುಲ್ಲೆದ್ದಿರುವ ಸಚಿವ ಸಂಪುಟ ಪುನಾರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾ ವಣೆ, ಮೇಲ್ಮನೆಗೆ 4 ಸದಸ್ಯರ ನಾಮನಿರ್ದೇಶನ ಕುರಿತು ಪಕ್ಷದ ಹೈಕಮಾಂಡ್ ಚರ್ಚೆ ಆರಂಭಿಸುವುದೇ ಬೆಳಗಾವಿ ವಿಧಾನಮಂಡ ವೇಶನದ ನಂತರ' ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. 

ಈ ಮೂಲಗಳ ಪ್ರಕಾರ, ಸಚಿವ ಸಂಪುಟ ಪುನಾರಚನೆ ವಿಚಾರದ ಚರ್ಚೆ ಬೆಳಗಾವಿ ಅಧಿವೇಶನ ಮುಗಿದ ನಂತರ ಆರಂಭವಾಗುವ ಸಾಧ್ಯತೆಯಿದೆ. ಆದರೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಂತೂ ಸದ್ಯಕ್ಕೆ ಯಾವ ಹಂತದಲ್ಲೂ ಚರ್ಚೆ ಆರಂಭವಾಗಿಲ್ಲ. ಅಧಿ ವೇಶನದ ನಂತರವೂ ಪಕ್ಷದ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಕಡಿಮೆ.

ಸಚಿವ ಸಂಪುಟ ವಿಸ್ತರಣೆ: ದೆಹಲಿಯಿಂದ ಪಟ್ಟಿ ಬಂದರೆ ಮನೆ ಖಾಲಿ ಮಾಡಬೇಕು, ಸಚಿವ ಜಾರಕಿಹೊಳಿ

ಖಾದರ್ ಸಂಪುಟಕ್ಕೆ, ದಿನೇಶ್ ಸ್ಪೀಕ‌ರ್? 

ಬೆಂಗಳೂರು:  ಸಚಿವ ಸಂಪುಟ ಪುನಾರಚನೆ ನಡೆಯುವ ವೇಳೆಯೇ ಸ್ಪೀಕ‌ರ್ ಸ್ಥಾನಕ್ಕೂ ಬದಲಾವಣೆ ಯಾಗುವಸಾಧ್ಯತೆದಟ್ಟವಾಗಿದೆ. ಸಚಿವ ಸಂಪುಟ ಪುನಾರಚನೆ ಯಾವಾಗ ನಡೆದರೂ ಆಗ ಹೊಸ ಸ್ಪೀಕರ್ ಆಯ್ಕೆಯೂ ಆಗುವ ಸಾಧ್ಯತೆಯಿದೆ. ಏಕೆಂ ದರೆ, ಹಾಲಿ ಸ್ಪೀಕ‌ರ್ ಯು.ಟಿ. ಖಾದರ್ ಅವರು ಸಂಪುಟ ಪುನಾ ರಚನೆ ವೇಳೆ ಸಚಿವ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಹೊಸ ಸ್ಪೀಕರ್ ಆಗಿ ಹಾಲಿ ಸಚಿವರಾಗಿರುವ ದಿನೇಶ್ ಗುಂಡೂರಾವ್ ಅವರು ಹುದ್ದೆ ಅಲಂಕರಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಏಕೆಂದರೆ, ಸಂಪುಟ ಪುನಾರಚನೆ ನಡೆ ದರೇ ಬ್ರಾಹ್ಮಣ ಸಮುದಾಯದ ಪ್ರಾತಿನಿಧ್ಯ ಅಡಿಯಲ್ಲಿ ಆರ್.ವಿ. ದೇಶಪಾಂಡೆ ಅವರು ಸಂಪುಟಕ್ಕೆ ಸೇರ್ಪಡೆಯಾಗಬಹುದು. ಇದೇ ವೇಳೆ ಖಾದರ್‌ಅವರನ್ನು ಸಂಪು ಟಕ್ಕೆ ಸೇರಿಸಿಕೊಳ್ಳುವ ಇರಾದೆ ನಾಯಕತ್ವಕ್ಕೆ ಇದೆ. ಹೀಗಾಗಿ, ದೇಶಪಾಂಡೆ, ಖಾದ‌ರ್ ಸಂಪು ಟಕ್ಕೆ ಬಂದರೆ ಆಗ ಬ್ರಾಹ್ಮಣ ಸಮುದಾಯದ ದಿನೇಶ್ ಗುಂ ಡೂರಾವ್ ಅವರನ್ನು ಸ್ಪೀಕರ್ ಹುದ್ದೆಗೆ ಪರಿಗಣಿಸಬಹುದು ಎನ್ನುತ್ತವೆ ಮೂಲಗಳು. ಹೀಗೆ ಆರ್.ವಿ. ದೇಶಪಾಂಡೆ ಸಂಪುಟಕ್ಕೆ ಬಂದರೆ ಆಗ ಕಾರವಾರ ಜಿಲ್ಲಾ ಪ್ರಾತಿನಿಧ್ಯವೂ ಈಡೇರಿಕೆಯಾಗುವುದರಿಂದ ಹಾಲಿ ಸಚಿವರಾಗಿರುವ ಅದೇ ಜಿಲ್ಲೆಯ ಮಂಕಾಳು ವೈದ್ಯರಿಗೆ ಕೊಕ್ ದೊರೆಯುವ ಸಂಭವ ಹೆಚ್ಚು ಎನ್ನುತ್ತವೆ ಮೂಲಗಳು.

ಕೆಪಿಸಿಸಿ ಅಧ್ಯಕ್ಷರ ಬದಲು ಸದ್ಯಕ್ಕಿಲ್ಲ 

ಬೆಂಗಳೂರು: ಬೆಂಗಳೂರು ಕೆಪಿಸಿಸಿ ಅಧ್ಯಕ್ಷಗಾದಿಗೆ ಹಲವು ಆಕಾಂಕ್ಷಿಗಳು ಹುಟ್ಟಿಕೊಂಡಿ ದ್ದರೂ ಸದ್ಯಕ್ಕೆ ಹುದ್ದೆ ಬದಲಾವಣೆ ತಕ್ಷಣಕ್ಕೆ ನಡೆಯುವ ಸಾಧ್ಯತೆ ಕಂಡು ಬರುತ್ತಿಲ್ಲ. ಒಬ್ಬರಿಗೆ ಒಂದು ಹುದ್ದೆ ಇರಬೇಕು ಎಂಬ ಕಾರಣಕ್ಕೆ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ 4 ಹುದ್ದೆ ಹೊಂದಿರುವ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಹುದ್ದೆಯಿಂದ ಬಿಟ್ಟು ಕೊಡಬೇಕು ಎಂಬ ವಾದವಿದೆ. 

ಈ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗೆ ಬಂದಾಗ ಹಾಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಚುನಾ ವಣೆವರೆಗೂ ಇದೇ ಹುದ್ದೆಯಲ್ಲಿ ಮುಂದುವರೆಯಲು ತಮಗೆ ಆಸಕ್ತಿಯಿದೆ ಎಂದು ತಿಳಿಸಿದ್ದರು ಎನ್ನಲಾಗಿದೆ. 

ಆದರೆ, ಕಾಂಗ್ರೆಸ್‌ನ ಒಂದು ಬಣ ಅಧ್ಯಕ್ಷರ ಹುದ್ದೆ ಬದ ಲಾವಣೆಗೆ ಒತ್ತಡ ನಿರ್ಮಾಣ ಮಾಡಿದೆ. ಹೀಗಾಗಿ ಅಧ್ಯಕ್ಷ ಬದಲಾವಣೆ ವಿಚಾರ ರಾಷ್ಟ್ರಮಟ್ಟದಲ್ಲಿ ನಡೆಯಲಿರುವ ಎಐಸಿಸಿ ಪುನರಚನೆ (ಈ ಪ್ರಕ್ರಿಯೆ ಜನವರಿ ಮಾಸದಲ್ಲಿ ನಡೆಯಲಿದೆ) ನಂತರ ಹೈಕಮಾಂಡ್ ಚರ್ಚೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ. ಹೈಕಮಾಂಡ್ ಮೊದಲು ಎಐಸಿಸಿ ಪುನಾರ ಚನೆ ಪ್ರಕ್ರಿಯೆ ಮುಗಿಸಿ ನಂತರ ಪಿಸಿಸಿ (ಪ್ರದೇಶ ಕಾಂಗ್ರೆಸ್ ಅಧ್ಯಕ್ಷ) ಬದಲಾವಣೆ ಪ್ರಕ್ರಿಯೆ ಆರಂಭಿಸ ಲಿದ್ದು, ಆಕ ಕೆಪಿಸಿಸಿ ವಿಚಾರವನ್ನು ಪರಿಗಣಿಸಬ ಹುದು ಎನ್ನಲಾಗಿದೆ.  ಹೀಗಾಗಿ ಈ ಪ್ರಕ್ರಿಯೆ ಏನಿದ್ದರೂ ಜನವರಿ ಅಥವಾ ಫೆಬ್ರವರಿ ನಂತರವೇ ನಡೆಯಬಹುದು. 

ಸಚಿವ ಸ್ಥಾನ ಬಿಡುವಂತೆ ಕೆಲವರಿಗೆ ಹೇಳಿದ್ದೆವು: ಡಿ.ಕೆ.ಶಿವಕುಮಾ‌ರ್

ಲಿಂಗಾಯತ ಸಮುದಾಯಕ್ಕೆ?: 

ಇನ್ನು ಕೆಪಿಸಿಸಿ ಅಧ್ಯಕ್ಷರು ಬದಲಾದರೆ ತಮಗೆ ಅವಕಾಶ ಸಿಗಬೇಕು ಎಂದು ನಾಯಕ ಸಮುದಾಯಕ್ಕೆ ಸೇರಿದ ಕೆ.ಎನ್. ರಾಜಣ್ಣ ಹಾಗೂ ಸತೀಶ್ ಜಾರಕಿಹೊಳಿ ಇಂಗಿತ ವ್ಯಕ್ತಪಡಿಸುತ್ತಿದ್ದರೂ ಹುದ್ದೆ ದೊರೆಯುವುದು ಲಿಂಗಾಯತ ಸಮುದಾಯಕ್ಕೆ ಎನ್ನಲಾಗಿದೆ.

ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಕಾಂಕ್ಷಿ: ರಾಜಣ್ಣ 

ಬೆಂಗಳೂರು : ಸಚಿವ ಸಂಪುಟ ಪುನಾರಚನೆ, ಕೆಪಿ ಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರಗಳ ಬಗ್ಗೆ ಸಚಿವರು ದ್ವಂದ ಹೇಳಿಕೆ ನೀಡಿದ್ದು, ಕೆಲ ಸಚಿವರು ಸದರಿ ಹುದ್ದೆಗೆ ತಾವು ಆಕಾಂಕ್ಷಿಯೆಂದರೆ, ಮತ್ತೆ ಕೆಲವರು ತಮಗೆ ಈ ಬಗ್ಗೆ ಏನೂ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ನಾನು ಹಿಂದೆ ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ, ಆ ಸ್ಥಾನ ಸಿಕ್ಕರೆ ಸಚಿವ ಸ್ಥಾನ ತೊರೆಯಲು ಸಿದ್ದ ಎಂದು ಹೇಳಿದ್ದೆ. ಈಗಲೂ ಅದಕ್ಕೆ ಬದ್ಧ ಎಂದರು.

Latest Videos
Follow Us:
Download App:
  • android
  • ios