Kodagu |ಆಸ್ತಿ ಕಬಳಿಸಲು ತಹಶೀಲ್ದಾರ್ ಸಹಿ, ದಾಖಲೆಗಳನ್ನೇ ನಕಲಿ ಮಾಡಿದ ಭೂಪ!

ಯಾರದ್ದೋ ಆಸ್ತಿಗೆ ಯಾರು ಬೇಕಾದರೂ ವಾರಸುದಾರರಾಗಬಹುದು. ನಿಮ್ಮ ಮನೆಯ ಆಸ್ತಿಗಳ ದಾಖಲೆಗಳನ್ನು ಒಮ್ಮೆ ಯಾವುದಕ್ಕೂ ನೀವು ಪರಿಶೀಲನೆ ಮಾಡಿಕೊಳ್ಳಿ. ಯಾಕೆ ಈ ಮಾತು ಹೇಳುತ್ತಿದ್ದೇವೆ ಎಂದರೆ, ಸಂಬಂಧಿಕರ ಆಸ್ತಿಯನ್ನೇ ಕಬಳಿಸಲು ಶಿರಸ್ತೆದಾರ್ ಅವರ ಸಹಿಯನ್ನೇ ನಕಲು ಮಾಡಿ, ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಪ್ರಕರಣವೊಂದು ಕೊಡಗು ಜಿಲ್ಲೆಯ ಬೇತು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. 

A man who forged the signature of a Tehsildar to grabbing property at kodagu district rav

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ನ.28): ಯಾರದ್ದೋ ಆಸ್ತಿಗೆ ಯಾರು ಬೇಕಾದರೂ ವಾರಸುದಾರರಾಗಬಹುದು. ನಿಮ್ಮ ಮನೆಯ ಆಸ್ತಿಗಳ ದಾಖಲೆಗಳನ್ನು ಒಮ್ಮೆ ಯಾವುದಕ್ಕೂ ನೀವು ಪರಿಶೀಲನೆ ಮಾಡಿಕೊಳ್ಳಿ. ಯಾಕೆ ಈ ಮಾತು ಹೇಳುತ್ತಿದ್ದೇವೆ ಎಂದರೆ, ಸಂಬಂಧಿಕರ ಆಸ್ತಿಯನ್ನೇ ಕಬಳಿಸಲು ಶಿರಸ್ತೆದಾರ್ ಅವರ ಸಹಿಯನ್ನೇ ನಕಲು ಮಾಡಿ, ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಪ್ರಕರಣವೊಂದು ಕೊಡಗು ಜಿಲ್ಲೆಯ ಬೇತು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. 

ಹೌದು ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಹೋಬಳಿಯ ಬೇತು ಗ್ರಾಮದ ಕೆ.ಎಚ್. ಐಮದೆ ಎಂಬಾತ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದು ಈ ಕುರಿತು ತನಿಖೆ ಮಾಡಿ ಎಂದು ಮಡಿಕೇರಿ ತಹಶೀಲ್ದಾರ್ ಪ್ರವೀಣ್ ಕುಮಾರ್ ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಐಮದೆ ಕೆ.ಹೆಚ್ ಎಂಬಾತ ಬೇತು ಗ್ರಾಮದ ಸರ್ವೆ ನಂಬರ್ 57/1 ರ ಭೂಮಿಯ ದಾಖಲೆಯಲ್ಲಿದ್ದ ಅಬ್ದುಲ್ ರೆಹಮಾನ್ ಮತ್ತು ಅಯಮದೆ ಅವರ ಹೆಸರುಗಳನ್ನು ತೆಗೆದು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾನೆ ಎಂದು ಹ್ಯಾರಿಸ್ ಎಂಬುವರು ದೂರು ನೀಡಿದ್ದಾರೆ. 

ಬಿಜೆಪಿ-ಜೆಡಿಎಸ್ ಸರ್ವಾಧಿಕಾರಿ ನಡೆಯನ್ನು ಜನರು ತಿರಸ್ಕರಿಸಿದ್ದಾರೆ: ಸಚಿವ ಮಹದೇವಪ್ಪ

ದೂರು ಆಧರಿಸಿ ಪರಿಶೀಲನೆ ಮಾಡಿದಾಗ ಜನನ ಮರಣ ನೋಂದಣಿ ವಹಿಯಲ್ಲಿ ಅಯಮದೆ ಅವರ ಮರಣ ದೃಢೀಕರಣವು ನೋಂದಣಿಯೇ ಆಗಿಲ್ಲದೆ ಇರುವುದು ಗೊತ್ತಾಗಿದೆ. 1998 ರಲ್ಲಿ ಮೃತಪಟ್ಟಿರುವ ಅಯಮದೆ ಅವರ ನಕಲಿ ಮರಣ ದೃಢೀಕರಣ ಪತ್ರವನ್ನು ಐಮದೆ ಕೆ.ಎಚ್ ಎಂಬಾತ ಪಡೆದಿದ್ದಾನೆ. ಶಿರಸ್ತೆದಾರ್ ಅವರ ಸಹಿಯನ್ನು ನಕಲಿ ಮಾಡಿದ್ದಲ್ಲದೆ ಸುಳ್ಳು ಮರಣ ದೃಢೀಕರಣ ಪತ್ರವನ್ನು ಮಾಡಿಸಿಕೊಂಡಿರುವ ಮತ್ತು ನಕಲಿ ಮರಣ ಪ್ರಮಾಣ ಮಾಡಿಕೊಟ್ಟಿರುವವರ ವಿರುದ್ಧ ತನಿಖೆ ನಡೆಸುವಂತೆ ಮಡಿಕೇರಿ ತಹಶೀಲ್ದಾರ್ ಪ್ರವೀಣ್ ಕುಮಾರ್ ಅವರು ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

A man who forged the signature of a Tehsildar to grabbing property at kodagu district rav

ಇದು ಒಂದೆಡೆಯಾದರೆ ಮತ್ತೊಂದೆಡೆ ಈ ಆಸ್ತಿಗೆ ಸಂಬಂಧಿಸಿದ ಆರ್ಟಿಸಿಗಳನ್ನು ನಕಲಿ ಮಾಡಲಾಗಿದೆ. ತಮ್ಮ ಮೂಲ ದಾಖಲೆಗಳನ್ನು ಕೊಡುವಂತೆ ಹ್ಯಾರೀಸ್ ಅವರು ಎಸಿ ಕೋರ್ಟಿಗೆ ಮೊರೆ ಹೋಗಿದ್ದಾರೆ. ಈ ವೇಳೆ ಮೂಲ ದಾಖಲೆಗಳೇ ನಾಪತ್ತೆಯಾಗಿವೆ ಎನ್ನುವುದು ಗೊತ್ತಾಗಿದೆ. ಹೀಗಾಗಿ ಎಸಿ ಕೋರ್ಟ್ ಕೂಡ ಸಂಬಂಧಿಸಿದ ಅಧಿಕಾರಿಗಳು ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಿರುವವರ ವಿರುದ್ಧ ದೂರು ದಾಖಲಿಸುವಂತೆ ಸೂಚಿಸಿದೆ. ವಿಪರ್ಯಾಸವೆಂದರೆ ಪ್ರಕರಣ ದಾಖಲಿಸುವ ಬದಲು ಎಲ್ಪಿಟಿಎನ್ ಮಾಡಿ ಪ್ರಕರಣ ಮುಕ್ತಾಯ ಮಾಡಲಾಗಿದೆ. ಇದರ ವಿರುದ್ಧ ಎಸ್ಪಿಗೆ ದೂರು ನೀಡಿದ ನಂತರ ಸದ್ಯ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಭೂಮಿಯ ದಾಖಲೆಯಲ್ಲಿದ್ದ ಅಬ್ದುಲ್ ರೆಹಮಾನ್ ಮತ್ತು ಅಯಮದೆ ಅವರ ಹೆಸರನ್ನು ಅಕ್ರಮವಾಗಿ ತೆಗೆದು ಅದರಲ್ಲಿ ಇವರ ಕುಟುಂಬಕ್ಕೆ ಸಂಬಂಧವೇ ಇಲ್ಲದ ಇಸ್ಮಾಯಿಲ್ ಎಂಬುವರ ಹೆಸರನ್ನು ಸೇರಿಸಲಾಗಿದೆ. ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಲಾಯಿಲ್ ಎಂಬುವರನ್ನು ಈ ಕುರಿತು ಪ್ರಶ್ನಿಸಿದ್ದರಿಂದ ಅವರು ಮತ್ತು ಅವರ ಮಗ ನಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆಸ್ತಿಯ ವಿಷಯದಲ್ಲಿ ನಮಗೆ ಮೋಸವಾಗಿದೆ ಎನ್ನುತ್ತಿರುವ ಝಕ್ರಿಯಾ ಎಂಬುವವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೀಗಾಗಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಅವರ ವಿರುದ್ಧ ದೂರು ದಾಖಲಾಗಿದೆ. ಮತ್ತೊಂದೆಡೆ ಇಸ್ಮಾಯಿಲ್ ಅವರು ಕೂಡ ಪ್ರತಿ ದೂರು ನೀಡಿದ್ದಾರೆ ಎನ್ನಲಾಗಿದೆ. 

ಆಡಳಿತ ಅಲೆಯಿಂದ ಕಾಂಗ್ರೆಸ್‌ಗೆ ಗೆಲುವು: ಮಾಜಿ ಶಾಸಕ ಕೆ.ಜಿ. ಬೋಪಯ್ಯ

ಒಟ್ಟಿನಲ್ಲಿ ಆಸ್ತಿಗಾಗಿ ಸಂಬಂಧಿಗಳು, ಮೂರನೇ ವ್ಯಕ್ತಿಗಳ ನಡುವೆ ಗೊಂದಲಗಳಿರುವುದೇನೋ ನಿಜವಾದರೂ ಆಸ್ತಿ ಕಬಳಿಸುವುದಕ್ಕೆ ತಹಶೀಲ್ದಾರ್ ಕಚೇರಿ ಮೊಹರು, ಶಿರಸ್ಥೇದಾರ್ ಅವರ ಸಹಿ ಮುಂತಾದವುಗಳನ್ನು ಬಳಸಿ ನಕಲಿ ದಾಖಲೆಗಳನ್ನು ಮಾಡಿರುವುದು ನಿಜಕ್ಕೂ ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಾಗಿರುವುದಂತು ಸತ್ಯ. ಸದ್ಯ ದಾಖಲಾಗಿರುವ ಪ್ರಕರಣವನ್ನಾದರೂ ಪೊಲೀಸರು ಸರಿಯಾಗಿ ತನಿಖೆ ಮಾಡಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುವ ಮತ್ತು ಅದಕ್ಕೆ ಸಹಾಯ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವುದು ನೊಂದವರ ಆಗ್ರಹ.

Latest Videos
Follow Us:
Download App:
  • android
  • ios