Chamarajanagar: ಹಲವು ದಶಕದ ಬಳಿಕ ಮೇನಲ್ಲಿ‌ ಜಲಾಶಯ ಭರ್ತಿ: ಪ್ರವಾಸಿಗರ ಆಕರ್ಷಣೆಯ ಕೇಂದ್ರವಾದ ಅವಳಿ ಜಲಾಶಯ

ಈ ಜಲಾಶಯಗಳು ಭರ್ತಿಯಾಗೋದೆ ತಮಿಳುನಾಡಿನಲ್ಲಿ ಉತ್ತಮ ಮಳೆಯಾದ್ರೆ. ಅಸಾನಿ ಚಂಡಮಾರುತದ ಎಫೆಕ್ಟ್‌ನಿಂದ ತಮಿಳುನಾಡಿನ ದಿಂಬಂ,ತಾಳವಾಡಿಯಲ್ಲಿ ಉತ್ತಮ ಮಳೆ ಬಿದ್ದಿದೆ. 

Heavy Rain Suvarnavathi Dam and Chikkahole Dam Full In Chamarajanagar gvd

ವರದಿ: ಪುಟ್ಟರಾಜು. ಆರ್.ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ (ಮೇ.23): ಈ ಜಲಾಶಯಗಳು ಭರ್ತಿಯಾಗೋದೆ ತಮಿಳುನಾಡಿನಲ್ಲಿ ಉತ್ತಮ ಮಳೆಯಾದ್ರೆ. ಅಸಾನಿ ಚಂಡಮಾರುತದ ಎಫೆಕ್ಟ್‌ನಿಂದ ತಮಿಳುನಾಡಿನ ದಿಂಬಂ,ತಾಳವಾಡಿಯಲ್ಲಿ ಉತ್ತಮ ಮಳೆ ಬಿದ್ದಿದೆ. ಈ ಹಿನ್ನಲೆ ಹಲವು ದಶಕದ ಬಳಿಕ ಅಕ್ಟೋಬರ್, ನವೆಂಬರ್‌ನಲ್ಲಿ ಭರ್ತಿಯಾಗ್ತಿದ್ದ ಅವಳಿ ಜಲಾಶಯಗಳು ಮೇ ನಲ್ಲೇ ಭರ್ತಿಯಾಗಿದೆ. ಇದರಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಅದ್ಯಾವ ಜಲಾಶಯಗಳು ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ.

ಚಾಮರಾಜನಗರದ ಸುವರ್ಣಾವತಿ, ಚಿಕ್ಕಹೊಳೆ ಅವಳಿ ಜಲಾಶಯಗಳು ಹಿಂದೆಲ್ಲಾ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಭರ್ತಿಯಾಗುತ್ತಿದ್ದವು. ಅದು ಹಿಂಗಾರು ಮಳೆ ಮುಗಿದು ತಮಿಳುನಾಡಿನಲ್ಲಿ ಹೆಚ್ಚು ಮಳೆ ಬಂದು ದಿಂಬಂ ಮತ್ತು ಬೇಡಗುಳಿ ಬೆಟ್ಟದಿಂದ ಹರಿದು ಬರುವ ನೀರಿನಿಂದ ಜಲಾಶಯ ಭರ್ತಿ ಆಗುತ್ತಾ‌ ಇತ್ತು. ಆದರೆ ಈ ಬಾರಿ ಇನ್ನು ಆರು ತಿಂಗಳು ಬಾಕಿ ಇರುವಾಗಲೆ ಅಂದರೆ ಈ  ಮೇ ತಿಂಗಳಲ್ಲೇ ಡ್ಯಾಂ ಭರ್ತಿಯಾಗಿದ್ದು, ಜಲ ವೈಭವ ವೀಕ್ಷಣೆಗೆ ಸಾರ್ವಜನಿಕರು ಬರುತ್ತಿದ್ದಾರೆ. ಕರ್ನಾಟಕಕ್ಕೆ ಸೇರಿರುವ ಬೇಡಗುಳಿ, ತಮಿಳುನಾಡಿನ ದಿಂಬಂ, ಹಾಸನೂರು ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಜಲಾಶಯಗಳಿಗೆ ಜೀವಕಳೆ ತಂದಿದೆ. 

Chamarajanagar: ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆದ್ದಿದ್ದಕ್ಕೆ ಕಾಂಗ್ರೆಸ್ ಸದಸ್ಯರ ರಾಜೀನಾಮೆ!

ಸುವರ್ಣಾವತಿ ಜಲಾಶಯದ ನೀರು ಸಂಗ್ರಹಣದ ಗರಿಷ್ಠ ಮಟ್ಟ 2455 ಅಡಿ. ಎರಡು ಅಡಿ ಬಾಕಿಯಿದ್ದು, ಬಹುತೇಕ ಭರ್ತಿ ಹಂತದಲ್ಲಿದೆ. ಅದೇ ರೀತಿ ಚಿಕ್ಕಹೊಳೆ 2449 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು ಭರ್ತಿಯಾಗಿದೆ. ಸುವರ್ಣಾವತಿ ಜಲಾಶಯ 6400 ಎಕರೆ ಹಾಗು ಚಿಕ್ಕಹೊಳೆ 4000 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಅಸಾನಿ ಚಂಡಮಾರುತದಿಂದ ಹವಾಮಾನದಲ್ಲಿ ಉಂಟಾದ ಬದಲಾವಣೆಯಿಂದ ತಮಿಳುನಾಡು ಮತ್ತು ಕರ್ನಾಟಕದಲ್ಲಿ  ಮಳೆ ಸುರಿದಿದ್ದು, ಜಲಾಶಯಗಳು ನಳನಳಿಸುತ್ತಿದ್ದು ರೈತರ ಮೊಗದಲ್ಲಿ ಹರ್ಷ ವ್ಯಕ್ತವಾಗುತ್ತಿದೆ.

ಇನ್ನೂ ಈ ಜೋಡಿ ಜಲಾಶಯ ತುಂಬಿರುವುದರಿಂದ ಎಡದಂಡೆ ನಾಲೆ ಹಾಗು ಬಲದಂಡೆ ನಾಲೆಗಳಿಗೆ ಕೂಡಲೇ ನೀರು ಹರಿಸುವಂತೆ ರೈತರು ಒತ್ತಾಯ ಮಾಡ್ತಿದ್ದಾರೆ. ಅಲ್ಲದೇ ಕೇರಳ, ತಮಿಳುನಾಡು ಸೇರಿದಂತೆ ಎಲ್ಲೆಡೆಯಿಂದ ಪ್ರವಾಸಿಗರು ಬರುವುದರಿಂದ ಸುವರ್ಣಾವತಿ ಡ್ಯಾಂನಲ್ಲಿ ನವೀನ ಮಾದರಿಯ ಪಾರ್ಕ್‌ ನಿರ್ಮಾಣ ಮಾಡಿ ಬೋಟಿಂಗ್ ವ್ಯವಸ್ಥೆ ಮಾಡಿ ಪ್ರವಾಸಿಗರನ್ನು ಆಕರ್ಷಿಸಿದರೆ ಪ್ರವಾಸೋದ್ಯಮಕ್ಕೂ ಉತ್ತೇಜನ ಕೊಟ್ಟ ಹಾಗೆ ಹಾಗುತ್ತದೆ ಜೊತೆಗೆ ಆದಾಯ ಬರುತ್ತೆ ಅಂತಾರೆ ಸ್ಥಳೀಯರು.

Chamarajanagar: ವಾವ್! ನೋಡುಗರನ್ನು ವಿಸ್ಮಯಗೊಳಿಸ್ತಿದೆ ಬಿಳಿಗಿರಿರಂಗನ ಬೆಟ್ಟ!

ಒಟ್ಟಿನಲ್ಲಿ ಬರದ ನಾಡು ಚಾಮರಾಜನಗರದ ಅವಳಿ ಜಲಾಶಯಗಳು ಅವಧಿಗೂ ಮುಂಚೆಯೇ ತುಂಬಿದ್ರಿಂದ ರೈತರು ಕೂಡ ಖುಷಿಯಲ್ಲಿದ್ದಾರೆ. ಇದರ ಜೊತೆಗೆ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತಹ ಸೌಲಭ್ಯ ಕಲ್ಪಿಸಿದ್ರೆ ಪ್ರವಾಸಿಗರ ಅಚ್ಚುಮೆಚ್ಚಿನ ಸ್ಪಾಟ್ ಆಗೋದ್ರಲ್ಲಿ ಅನುಮಾನವಿಲ್ಲ.

Latest Videos
Follow Us:
Download App:
  • android
  • ios