Asianet Suvarna News Asianet Suvarna News

ಮಾವು ಬೆಳೆಗಾರರಲ್ಲಿ ಆತಂಕ ಹುಟ್ಟಿಸಿದ ಮಳೆ

 ಮಾವು ಕಳೆದ ಎರಡ್ಮೂರು ವರ್ಷಗಳಿಂದ ಇಳುವರಿ ಕಡಿಮೆಯಾಗಿದೆ. ಈ ವರ್ಷವೂ ಮಾವಿನ ಇಳುವರಿ ಕಡಿಮೆಯಾಗುವ ಆತಂಕ ಎದುರಾಗಿದೆ. 

Heavy Rain Effects on Mango Crops In Kolar snr
Author
First Published Oct 6, 2022, 5:32 AM IST

ಕೋಲಾರ(ಅ.06):  ಜಿಲ್ಲೆಯಲ್ಲಿ ಬೆಳೆಯುವ ಮಾವು ವಿಶ್ವ ಪ್ರಸಿದ್ಧವಾದುದ್ದು. ಅದರಲ್ಲಿಯೂ ಶ್ರೀನಿವಾಸಪುರ ತಾಲೂಕಿನಲ್ಲಿ ಬೆಳೆಯುವ ಮಾವು ವಿಶೇಷ ರುಚಿಯಿಂದಾಗಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದೆ. ಜೊತೆಗೆ ಮಾವು ಬೆಳೆಗಾರರ ಜೀವನ ಆಧಾರವಾಗಿದೆ.

ಇಷ್ಟೆಲ್ಲಾ ಖ್ಯಾತಿಯಿರುವ ಮಾವು  (Mango) ಕಳೆದ ಎರಡ್ಮೂರು ವರ್ಷಗಳಿಂದ ಇಳುವರಿ ಕಡಿಮೆಯಾಗಿದೆ. ಈ ವರ್ಷವೂ ಮಾವಿನ ಇಳುವರಿ ಕಡಿಮೆಯಾಗುವ ಆತಂಕ ಎದುರಾಗಿದೆ. ಇದಕ್ಕೆ ಕಾರಣ ಇತ್ತೀಚಿನ ವರ್ಷಗಳಲ್ಲಿ ದಾಖಲೆ ಪ್ರಮಾಣದಲ್ಲಿ ಬೀಳುತ್ತಿರುವ ಮಳೆ (Rain). ಕೆಲವು ತಿಂಗಳುಗಳಿಂದ ಜಿಲ್ಲೆಯಲ್ಲಿ ಆಗುತ್ತಿರುವ ಮಳೆಇಂದಾಗಿ ಮಾವು ಬೆಳೆಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.

ಕಳೆದ ಬಾರಿ ಶೇ.30ರಷ್ಟುಬೆಳೆ

ಮಾವಿಗೆ ಅಧಿಕ ಮಳೆಯೇ ಅಗತ್ಯವಿಲ್ಲ, ಹೂವು ಬಿಡುವುದರಿಂದ ಹಿಡಿದು ಕಾಯಿ ಕೀಳುವ ಕಾಲದವರೆಗೆ ಉಷ್ಣಾಂಶ ಇದ್ದರೆ ಇಳುವರಿಯೂ ಹೆಚ್ಚು, ರುಚಿಯೂ ಹೆಚ್ಚು, ಬೆಳೆಗೆ ರೋಗಗಳ ಕಾಟವೂ ಕಡಿಮೆ.

ಮಂಡಿ ವರ್ತಕರು ಮತ್ತು ಮಾವಿನ ಬೇಸಾಯಗಾರರು(Farmers) ಅಭಿಪ್ರಾಯಪಡುವಂತೆ ಕಳೆದ ವರ್ಷದ ಹಂಗಾಮಿನಲ್ಲಿ ಶೇ.30ರಷ್ಟುಮಾತ್ರ ಕೈಗೆ ಬಂದಿತ್ತು. ಈ ಸಂದರ್ಭದಲ್ಲಿ ಕೊಂಚ ಸಮಾಧಾನದ ವಿಷಯವೆಂದರೆ ಬೆಲೆ ಸ್ಥಿರವಾಗಿದ್ದು, ರೈತರಿಗೆ ಒಂದಿಷ್ಟುಕಾಸು ಕೈಸೇರುವಂತಾಗಿತ್ತು.

ಮಳೆಯಿಂದಾಗಿ ಭೂಮಿ ತಂಪಾಗಿರುವುದರಿಂದ ಮಾವಿನ ಗಿಡಗಳು ಚಿಗುರಿ ತನ್ನ ಬೆಳವಣಿಗೆಯತ್ತ ಹೋಗುವುದರಿಂದ ಹೆಚ್ಚು ಹೂವನ್ನು ಬಿಡುವುದಿಲ್ಲ, ಈ ವರ್ಷವೂ ಈಗಾಗಲೇ ಮಾವಿನ ತೋಪುಗಳು ಮಾವಿನ ಚಿಗುರಿನಿಂದ ಕಂಗೊಳಿಸುತ್ತಿವೆ. ಇದು ಮಾವು ಬೆಳೆಗಾರರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಅನುಭವಿ ಬೆಳೆಗಾರರು ಮತ್ತು ಮಂಡಿ ಮಾಲೀಕರು ಅಭಿಪ್ರಾಯಪಡುತ್ತಾರೆ.

ಇತರೇ ಬೆಳೆಗಳೂ ಕುಂಠಿತ

ಈ ಮಳೆಯಿಂದಾಗಿ ಇತರೆ ಬೆಳೆಗಳೂ ಕುಂಠಿತಗೊಂಡಿವೆ. ಒಂದು ಅಂದಾಜಿನ ಪ್ರಕಾರ ಕೃಷಿ ನೆಲದಲ್ಲಿ ಶೇ.70ರಿಂದ 80ರಷ್ಟುನೆಲ ಉಳುಮೆಯೇ ಆಗಿಲ್ಲ, ಮಾವಿನ ಚಿಗುರು ಮತ್ತು ಬಿತ್ತನೆಯಾಗದ ಭೂಮಿ ರೈತರನ್ನು ಒಟ್ಟಿಗೆ ಆತಂಕ ಸೃಷ್ಟಿಸಿದೆ.

ಸಾಲು ಸಾಲು ಸಮಸ್ಯೆಗಳು

ಹೂವು ಬಂದ ಮೇಲಿನ ಸಮಸ್ಯೆಗಳು ಸಾಲಾಗಿ ನಿಂತಿರುತ್ತಿರುತ್ತದೆ. ಹೂಗಳು ದುಂಬಿ ಚಿಟ್ಟೆಜೇನು ನೊಣಗಳಿಂದ ಪರಾಗಸ್ಪಶ್ರ್ವ ಕ್ರಿಯೆಗೆ ತನ್ನನ್ನು ಒಡಿಕೊಳ್ಳುತ್ತದೆ. ಆಗ ಮಳೆ ಬಿದ್ದರೆ ಫಸಲಿನ ಇಳುವರಿ ಇಳಿಕೆಯಾಗುತ್ತದೆ. ಹೂಗಳಲ್ಲಿ ಅಂಟು ಅಂಟಾದ ದ್ರವವನ್ನು ಕೀಟಗಳು ಉತ್ಪಾದಿಸುವುದರಿಂದ ಅದು ಸಹ ಫಸಲಿನ ಇಳುವರಿಯನ್ನು ಕುಗ್ಗಿಸುತ್ತದೆ. ಈ ವೇಳೆ ಕ್ರಿಮಿನಾಶಕ ಬಳಕೆ ಅನಿವಾರ್ಯ.

ಹೀಚು ಆಗುವ ಕಾಲಕ್ಕೆ ಬೇಸಗೆ ಬಲಿಯುತ್ತದೆ. ಬಿಸಿಲಿನ ತಾಪ ಹೆಚ್ಚಿದಾಗ ಹೀಚುಗಳು ಉದುರುತ್ತವೆ. ಮಳೆಗಾಲಕ್ಕೆ ಕಾಯಿ ದಪ್ಪವಾಗ ತೊಡಗುತ್ತದೆ. ಹಾಗೇನಾದರೂ ದುರಾದೃಷ್ಟದಿಂದ ಆಲಿಕಲ್ಲು ಮಳೆ ಬಿದ್ದರೆ ಕಾಯಿ ದೋರೆಗೆ ಬರುವಷ್ಟರೊತ್ತಿಗೆ ಕಲ್ಲಿನ ಏಟು ಬಿದ್ದ ಕಡೆ ಕಪ್ಪು ಮಚ್ಚೆ ಏರ್ಪಟ್ಟು, ಕಾಯಿ ಕಳಪೆ ರಾಶಿಗೆ ಹೋಗುತ್ತದೆ. ಅಲ್ಲದೆ ಹಣ್ಣನ್ನು ಕೆಡಿಸುವ ಕೀಟಗಳು ಕಾಯಿಯ ಗುಣಮಟ್ಟಹಾಳಾಗುತ್ತದೆ.

ಅಕಾಲಿಕ ಮಳೆಯಿಂದ ನಷ್ಟ : 

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಸೆ.26): ಕಳೆದೊಂದು ತಿಂಗಳಿಂದ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಗೆ ಅನ್ನದಾತ ನಲುಗಿ ಹೋಗಿದ್ದಾನೆ. ವಾಡಿಕೆಗಿಂತ ಈ ಬಾರಿ ಮೂರು ಪಟ್ಟು ಮಳೆ ಹೆಚ್ಚಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬಂತಾಗಿದೆ ರೈತರ ಪರಿಸ್ಥಿತಿ. ಸಾಲ‌ ಮಾಡಿ ಬಿತ್ತನೆ ಮಾಡಿದ್ದ ಬೆಳೆಗಳು ನಾಶವಾಗಿದ್ದು, ಸೂಕ್ತ ಪರಿಹಾರ ನೀಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ಓದಿ. ಅತಿಯಾದ ಮಳೆ ನೀರು ಜಮೀನಿನಲ್ಲಿ ನಿಂತ ಪರಿಣಾಮ ಮೆಕ್ಕೆಜೋಳ ಬೆಳೆ ನೆಲಕ್ಕುರಿಳೋ ದೃಶ್ಯ. ಇದು ಒಂದು ಜಮೀನಿನ ಸಮಸ್ಯೆ ಅಲ್ಲ ಇಡೀ ಚಿತ್ರದುರ್ಗ ಜಿಲ್ಲೆಯ ಪ್ರತಿಯೊಬ್ಬ ಅನ್ನದಾತರ ಸಮಸ್ಯೆ ಆಗಿದೆ. 

ಜಿಲ್ಲೆಯಲ್ಲಿ ಈಗಾಗಲೇ 300ಕ್ಕೂ ಅಧಿಕ ಕೋಟಿಯಷ್ಟು ಈರುಳ್ಳಿ ಬೆಳೆ, ಸಾವಿರಾರು ಕೋಟಿ ಮೌಲ್ಯದಷ್ಟು ಮೆಕ್ಕೆಜೋಳ ಬೆಳೆ ಅತಿವೃಷ್ಠಿಯಿಂದ ನಾಶವಾಗಿದೆ. ಇಷ್ಟೆಲ್ಲಾ ಆದ್ರು ತಮ್ಮದೇ ಜಿಲ್ಲೆಯ ಉಸ್ತುವಾರಿ ಸಚಿವರು ಆಗಿರುವ ಕೃಷಿ ಮಂತ್ರಿ ಬಿ.ಸಿ ಪಾಟೀಲ್ ಮಾತ್ರ ಒಬ್ಬ ರೈತನ ಜಮೀನಿಗು ಭೇಟಿ ನೀಡಿಲ್ಲ ಎಂಬುದೇ ದುರದೃಷ್ಟಕರ ಸಂಗತಿ. ರೈತರು ಇಷ್ಟೊಂದು ಸಂಕಷ್ಟಕ್ಕೆ ಸಿಲುಕಿದ್ರು ಸಣ್ಣ ಪರಿಹಾರ ಕೂಡ ಇದುವರೆಗೂ ಯಾವುದೇ ರೈತನಿಗೆ ಬಿಡುಗಡೆ ಮಾಡಿಲ್ಲ. ಕೇವಲ ಅಧಿಕಾರಿಗಳ ಜೊತೆ ಸಭೆ ನಡೆಸಿ ಸುಮ್ಮನಾಗ್ತಿದ್ದಾರೆ. 

Chitradurga: ಮಳೆ ಬಂದ್ರೆ ದುರ್ಗದ ಮಂದಿ ದೋಣಿ ನೆನಪು ಮಾಡ್ಕಂತಾರೆ!

ಇದು ನಿಜಕ್ಕೂ ಸರಿಯಲ್ಲ,‌ಕೂಡಲೇ ಸಚಿವರು, ಸರ್ಕಾರ ರೈತರ ಮೇಲೆ ಕಾಳಜಿ ಇಟ್ಟುಕೊಂಡು ಅವರಿಗೆ ಆಗಿರೋ ಅನ್ಯಾಯಕ್ಕೆ ಪರಿಹಾರ ನೀಡುವ ಮೂಲಕ ನ್ಯಾಯ ಒದಗಿಸಬೇಕು ಎಂದು ರೈತರು ಒತ್ತಾಯಿಸಿದರು.  ಇನ್ನೂ ಅತಿವೃಷ್ಠಿಯಿಂದಾಗಿ ಜಿಲ್ಲೆಯಲ್ಲಿ ಎಷ್ಟೆಲ್ಲಾ ಬೆಳೆಹಾನಿ ಆಗಿದೆ. ಏನೆಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದೀರಿ ಎಂಬುದರ ಬಗ್ಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕರನ್ನೇ ವಿಚಾರಿಸಿದ್ರೆ, ವಾಡಿಕೆಯಂತೆ ನಮ್ಮ ಜಿಲ್ಲೆಗೆ 356 ಮಿ.ಮೀ ಮಳೆ ಆಗಬೇಕಿತ್ತು, ಆದ್ರೆ ಈ ಬಾರಿ 641 ಮಿ.ಮೀ ನಷ್ಟು ಮಳೆಯಾಗಿದೆ. ಜಿಲ್ಲೆಯಲ್ಲಿ ಅತಿಹೆಚ್ಚು ಮಳೆ ಹೊಸದುರ್ಗ ತಾಲ್ಲೂಕಿನಲ್ಲಿ ಆಗಿದೆ. 

ಸದ್ಯಕ್ಕೆ ಬಿದ್ದಿರುವ ಮಳೆಗೆ ಜಿಲ್ಲೆಯಲ್ಲಿ 71153 ಹೆಕ್ಟೇರ್ ಕೃಷಿ ಬೆಳೆ ನಾಶವಾಗಿದೆ ಎಂದು ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. NDRF ನಿಯಮದ ಪ್ರಕಾರದ ೪೮ ಕೋಟಿ ನಷ್ಟವಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರದ NDRF ಪರಿಹಾರಕ್ಕೆ ರಾಜ್ಯ ಸರ್ಕಾರವು ಸೇರಿಸಿ ಒಟ್ಟು 96 ಕೋಟಿ ಪರಿಹಾರ ಮೊತ್ತ ನೀಡುವ ಭರವಸೆಯಿದೆ. ನಮ್ಮ ಜಿಲ್ಲೆಯ ಪ್ರಮುಖ ಬೆಳೆ ಮಕ್ಕೆಜೋಳ, ಈ ಬಾರಿ 95 ಸಾವಿರ ಹೆಕ್ಟೇರ್ ನಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ. ಅದ್ರಲ್ಲಿ ಸುಮಾರು 49800 ಹೆಕ್ಟೇರ್ ಬೆಳೆ ಸಂಪೂರ್ಣ ನಾಶವಾಗಿರೋದು ರೈತರಿಗೆ ತುಂಬಾ ನಷ್ಟವುಂಟು ಮಾಡಿದೆ. 

Chitradurga: ಟ್ಯಾಕ್ಸ್‌ ಕಟ್ಟಲು ನನ್ನ ಬಳಿ ಹಣವಿಲ್ಲ: ಸಚಿವ ಮಾಧುಸ್ವಾಮಿ

ಸುಮಾರು 50% ನಷ್ಟು ಜಿಲ್ಲೆಯಲ್ಲಿ ಬೆಳೆ ಹಾನಿಯಾಗಿದೆ ಎಂದು ನಾವೇ ವರದಿ ನೀಡಿದ್ದೇವೆ. ಒಟ್ಟು ಜಿಲ್ಲೆಯಲ್ಲಿ ಸುಮಾರು 400 ಕೋಟಿಗೂ ಅಧಿಕ ಬೆಳೆ ಹಾನಿ ಆಗಿದೆ ಪರಿಹಾರ ಶೀಘ್ರವೇ ರೈತರಿಗೆ ದೊರಕಲಿದೆ ಎಂದು ಭರವಸೆ ನೀಡಿದರು. ಇನ್ನೇನು ಕಟಾವು ಹಂತಕ್ಕೆ ಬಂದಿದ್ದ ಮೆಕ್ಕೆಜೋಳ, ರಾಗಿ,‌ ಶೇಂಗಾ ಬೆಳೆಗಳು ಅಕಾಲಿಕ ಮಳೆಗೆ ನೆಲಕಚ್ಚಿರೋದು ರೈತನಿಗೆ ಮತ್ತೊಂದು ಸಂಕಷ್ಟ ತಂದೊಡ್ಡಿದೆ. ಆದ್ದರಿಂದ ಕೂಡಲೇ ಸರ್ಕಾರ ಅನ್ನದಾತನಿಗೆ ಆಗಿರೋ ಅನ್ಯಾಯಕ್ಕೆ ತುರ್ತಾಗಿ ಸೂಕ್ತ ಪರಿಹಾರ ಒದಗಿಸಬೇಕಿದೆ.

Follow Us:
Download App:
  • android
  • ios