ರಾಮನಗರ ಜಿಲ್ಲೆಯಲ್ಲಿ, ತನಗೆ ನಿತ್ಯ ಆಹಾರ ನೀಡುತ್ತಿದ್ದ 85 ವರ್ಷದ ಪಾರ್ವತಮ್ಮ ಎಂಬ ವೃದ್ಧೆಯ ಸಾವಿಗೆ ಮಂಗವೊಂದು ಮರುಗಿದೆ. ವೃದ್ಧೆಯ ಪಾರ್ಥಿವ ಶರೀರವನ್ನು ಮನೆಗೆ ತಂದಾಗ, ಅಲ್ಲಿಗೆ ಬಂದ ಮಂಗವು ಶವವನ್ನು ತಬ್ಬಿಕೊಂಡು, ಮುತ್ತಿಕ್ಕಿ ಕಣ್ಣೀರಿಟ್ಟಿದ್ದು, ಈ ಮನಕಲಕುವ ದೃಶ್ಯ ಎಲ್ಲರನ್ನೂ ಬೆರಗುಗೊಳಿಸಿದೆ.
ರಾಮನಗರ (ಏ.1): ಕಷ್ಟ ಕಾಲದಲ್ಲಿ ಸಹಾಯ ಮಾಡಿದವರಿಗೆ ಮರಳಿ ಕೇಡು ಬಯಸುವ ಆಧುನಿಕ ಕಾಲದಲ್ಲಿ ಮಂಗವೊಂದು ತನಗೆ ಆಹಾರ ಹಾಕಿದ ವೃದ್ಧೆಯ ಸಾವಿಗೆ ಮರುಗಿದ್ದು, ಆಕೆಯ ಪಾರ್ಥಿವ ಶರೀರವನ್ನು ತಬ್ಬಿಕೊಂಡು ಮುತ್ತಿಕ್ಕಿ, ಕಣ್ಣೀರಿಟ್ಟಿರುವ ಮನಕಲಕುವ ಪ್ರಸಂಗ ರಾಮನಗರ ಜಿಲ್ಲೆಯ ರಾಯರದೊಡ್ಡಿಯಲ್ಲಿ ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಅನ್ನ ಕೊಟ್ಟ ಅಮ್ಮ ಇನ್ನಿಲ್ಲ, ತಬ್ಬಿ ಕಣ್ಣೀರಾಕಿದ ಮಂಗ
ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿ ನಿವಾಸಿ ಪಾರ್ವತಮ್ಮ (85) ತಮ್ಮ ಮನೆ ಬಳಿ ಆಗಾಗ ಬರುತ್ತಿದ್ದ ಮಂಗಗಳಿಗೆ ಆಹಾರ ಕೊಡುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಪಾರ್ವತಮ್ಮ ಸೋಮವಾರ ರಾತ್ರಿ ಮೃತಪಟ್ಟಿದ್ದು, ಅವರ ಮೃತದೇಹವನ್ನು ಮನೆಗೆ ತರುತ್ತಿದ್ದಂತೆ ಮಂಗವೂ ಆಗಮಿಸಿ, ಶವವನ್ನು ತಬ್ಬಿಕೊಂಡು ಮುತ್ತಿಕ್ಕಿ ಕಣ್ಣೀರಿಟ್ಟಿದೆ.
ಈ ದೃಶ್ಯ ಮನಕಲುಕುತ್ತೆ
ಮೃತ ವೃದ್ಧೆ ಜೊತೆಗೆ ಮಾನವ ರಕ್ತ ಸಂಬಂಧವನ್ನು ಮೀರಿಸುವಂತೆ ಮಂಗ ವರ್ತಿಸಿದ್ದು, ಎಲ್ಲರನ್ನು ಬೆರಗುಗೊಳಿಸಿದೆ. ವೃದ್ಧೆ ಮತ್ತು ಮಂಗನ ಬಾಂಧವ್ಯ ನೋಡಿ ಜನರು ಆಶ್ಚರ್ಯ ವ್ಯಕ್ತಪಡಿಸಿದರು.


