ಹಲ್ಕೆ–ಮುಪ್ಪಾನೆ ಮಾರ್ಗದ ಲಾಂಚ್ ಸೇವೆ ಸ್ಥಗಿತ; ಕರೂರು, ಭಾರಂಗಿ ಸಂಪರ್ಕಿಸುವ ಜಲಮಾರ್ಗ
ಲಿಂಗನಮಕ್ಕಿ ಜಲಾಶಯದ ಶರಾವತಿ ಹಿನ್ನೀರಿನ ಮಟ್ಟ ಕುಸಿದ ಕಾರಣ, ಹಲ್ಕೆ–ಮುಪ್ಪಾನೆ ಮಾರ್ಗದ ಲಾಂಚ್ ಸೇವೆಯನ್ನು ಸುರಕ್ಷತಾ ದೃಷ್ಟಿಯಿಂದ ಸ್ಥಗಿತಗೊಳಿಸಲಾಗಿದೆ. ಮಳೆ ಬಂದು ನೀರಿನ ಮಟ್ಟ ಏರುವವರೆಗೂ ಸಾಗರ ತಾಲೂಕಿನ ಈ ಪ್ರಮುಖ ಜಲಮಾರ್ಗ ಬಂದ್ ಆಗಿರಲಿದೆ.

ಹಲ್ಕೆ–ಮುಪ್ಪಾನೆ ಮಾರ್ಗದ ಲಾಂಚ್ ಸೇವೆ
ಲಿಂಗನಮಕ್ಕಿ ಜಲಾಶಯದ ಶರಾವತಿ ಹಿನ್ನೀರಿನ ಮಟ್ಟ ಕನಿಷ್ಠ ಮಟ್ಟಕ್ಕೆ ಇಳಿದ ಹಿನ್ನೆಲೆ ಹಲ್ಕೆ–ಮುಪ್ಪಾನೆ ಮಾರ್ಗದ ಲಾಂಚ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕರೂರು ಹಾಗೂ ಭಾರಂಗಿ ಹೋಬಳಿಗಳನ್ನು ಸಂಪರ್ಕಿಸುವ ಪ್ರಮುಖ ಜಲಮಾರ್ಗ ಇದಾಗಿದೆ.
ಶರಾವತಿ ಹಿನ್ನೀರಿನ ಮಟ್ಟ
ಸಾರ್ವಜನಿಕರ ಸುರಕ್ಷತಾ ದೃಷ್ಟಿಯಿಂದ ಜೂನ್ 2 ರಿಂದ ಸೇವೆ ಸ್ಥಗಿತಗೊಳಿಸಿ ರುವುದಾಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ತಿಳಿಸಿದೆ. ಶರಾವತಿ ಹಿನ್ನೀರಿನ ಮಟ್ಟ ದಿನೇ ದಿನೇ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ನೀರಿನೊಳಗಿನ ಮರದ ಕಾಂಡಗಳು ಲಾಂಚ್‌ಗೆ ತಾಗುವ ಅಪಾಯ ಎದುರಾಗಿದೆ.
ಲಾಂಚ್ ಸೇವೆ
ಜೊತೆಗೆ ವಾಹನ ಇಳಿಸುವ ಪ್ಲಾಟ್‌ಫಾರ್ಮ್ ಪ್ರದೇಶದಲ್ಲಿ ಲಾಂಚ್‌ನ ಅಡಿಭಾಗ ನೆಲಕ್ಕೆ ತಾಗುತ್ತಿರುವ ಕಾರಣ ಸೇವೆ ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಳೆಯಾಗಿ ನೀರಿನ ಪ್ರಮಾಣ ಹೆಚ್ಚಳವಾಗೋವರೆಗೂ ಲಾಂಚ್ ಸೇವೆ ಸ್ಥಗಿತಗೊಳ್ಳಲಿದೆ.