Asianet Suvarna News Asianet Suvarna News

ನಾನೊಬ್ಬ ಇದ್ದೀನಿ-ಯಾರನ್ ಕೇಳಿ ಈ ತೀರ್ಮಾನ ಮಾಡಿದ್ರಿ : ರೇವಣ್ಣ ಗರಂ

ಮಾಜಿ ಸಚಿವ ಎಚ್‌ ಡಿ ರೇವಣ್ಣ ಗರಂ ಆಗಿದ್ದಾರೆ. ನಾನೊಬ್ಬ ಇದೀನಿ... ಯಾರನ್ನು ಕೇಳಿ ಈ ನಿರ್ಧಾರ ಮಾಡಿದ್ರಿ ಎಂದು  ಹೇಳಿದ್ದಾರೆ.

HD Revanna Angry Over Hasanamba Temple Darshan Issue snr
Author
Bengaluru, First Published Nov 4, 2020, 3:06 PM IST

ಹಾಸನ (ನ.04): ಸರ್ಕಾರದಲ್ಲೆ ಮೇವಿಲ್ಲಾದಾಗಿರುವಾಗ ಜನರಿಗೆ ಏನ್‌ ಯೋಜನೆ ಕೊಡಲು ಸಾಧ್ಯ. ರೈತರ ಬೆಳೆ ಪರಿಹಾರವಂತು ಕೊಡ್ತಾರಾ? ಅವರು ಎಂದು ಮಾಜಿ ಸಚಿವ ಎಚ್‌.ಡಿ. ರೇವಣ್ಣ ವ್ಯಂಗ್ಯವಾಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ 15ನೇ ಹಣಕಾಸು ಆಯೋಗದ ಅನುದಾನದಲ್ಲಿ ನೇರವಾಗಿ ಪಂಚಾಯಿತಿಗಳಿಗೆ ಕೊಟ್ಟಿದ್ದು, ಕ್ರಿಯಾ ಯೋಜನೆ ಎಲ್ಲ ಮಾಡಲಾಗಿದೆ. ಬಂದ ಹಣದಲ್ಲಿ ಶೇಕಡ 25 ಭಾಗವನ್ನು ಪರಿಶಿಷ್ಟಜಾತಿ ಮತ್ತು ಪಂಗಡಗಳಿಗೆ ಮೀಸಲು ಎಂದು ಹೇಳಲಾಗಿದೆ. ಈ ಸಮಾಜಕ್ಕೆ ನೀಡಿದರೇ ನಾನು ವಿರೋಧ ಮಾಡುವುದಿಲ್ಲ.

ಶೆ. 25 ಭಾಗ ವಿದ್ಯುತ್‌ ಶುಲ್ಕ, ಇನ್ನು ಶೇ. 5 ಭಾಗ ಅಂಗವಿಕಲರಿಗೆ, ಶೇ. 25 ಭಾಗ ಘನ ತ್ಯಾಜ್ಯಗಳಿಗೆ ಹಾಗೂ ಉಳಿದ ಶೇಕಡ 25 ಭಾಗವನ್ನು ಜನ ಜೀವನ ಮಿಷನ್‌ಗೆ ಕೊಡುವುದಾಗಿ ಹೇಳಲಾಗಿದೆ. ಜಿಪಂನಲ್ಲಿ ಬಾತ್‌ ರೂಮ್‌ ಸ್ವಚ್ಛ ಮಾಡುವ ಮಿಷೆನ್‌ ಬಂದು ಹತ್ತು ವರ್ಷಗಳೆ ಕಳೆದಿದೆ. ಇನ್ನು ಉಳಿದಿರುವ ಶೇ. 10 ಭಾಗವನ್ನು ಇತರೆ ಕಾಮಗಾರಿಗಳಿಗೆ ಮೀಸಲಿಟ್ಟಿರುವುದಾಗಿ ಹೇಳಿದರು. ಮತ್ತೆ ಈಗ ಸೋಲರ್‌ ಗೆ ಶೇ. 5 ಭಾಗ ಇಡಲಾಗಿದೆ. ಈಗಗಲೇ ಕೆಲಸದ ಆದೇಶ ನೀಡಿ 6 ತಿಂಗಳೇ ಕಳೆದಿದೆ. ಹಣ ಹಂಚಿಕೊಂಡಿರುವುದನ್ನು ಈಗ ಕೈ ಹಾಕಲು ಹೊರಟಿದ್ದಾರೆ. ಬೇಕಾದ್ರೇ ದೊಡ್ಡ ಮಟ್ಟದಲ್ಲಿ ಹಣ ಹೊಡೆದುಕೊಳ್ಳಲಿ ಎಂದರು.

ವೇದಿಕೆಯಲ್ಲೇ ಮೈಕ್ ಕಿತ್ತುಕೊಂಡ ರೇವಣ್ಣ : ಗರಂ ಆದ ಜೆಡಿಎಸ್ ನಾಯಕ ...

ಈ ಪಂಚಾಯಿತಿ ಹಂತದಲ್ಲಿ ಏಕೆ ಮುಂದಾಗಿದ್ದೀರಿ ಎಂದು ಸಲಹೆ ನೀಡಿದ ಅವರು, ಇದೊಂದು ದುರದೃಷ್ಟಕರವಾಗಿದ್ದು, ಮುಂದೆ ಯಾವ ಮಟ್ಟದಲ್ಲಿ ನಿಲ್ಲುತ್ತದೆ ಕಾದು ನೋಡಬೇಕಾಗಿದೆ. ಇಡೀ ರಾಜ್ಯದಲ್ಲಿ ಮೊದಲ ಬಾರಿಗೆ 100 ಕೋಟಿಗೆ 8 ಜಿಲ್ಲೆಗಳಿಗೆ ಟೆಂಡರ್‌ ಕರೆಯಲಾಗಿದೆ. ಸರ್ಕಾರದವ್ರಿಗೆ ಮೇವಿಲ್ಲಾ ಇನ್ನೂ ಜನ್ರಿಗೆ ಏನು ಕೊಡಲು ಸಾಧ್ಯ. ಬೆಳೆ ಪರಿಹಾರ ಕೊಡ್ತಾರಾ ಅವ್ರು ಎಂದು ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು.

ಹಾಸನಾಂಬ ದೇವಾಲಯಕ್ಕೆ ಮೊದಲ ದಿನ ಗಣ್ಯರಿಗೆ ಮಾತ್ರ ಅವಕಾಶ ಅಂತಾ ವ್ಯವಸ್ಥೆ ಮಾಡಿದ್ದು, ಆದರೇ ಹಾಸನಾಂಬ ದೇವಾಲಯದ ಪ್ರವೇಶಕ್ಕೆ ಯಾರು ತೀರ್ಮಾನ ಮಾಡಿರೋರು, ನಾನೊಬ್ಬ ಶಾಸಕ ಇದ್ದೇನೆ, ಸಂಸದರಿದ್ದಾರೆ. ಹಾಸನದಲ್ಲಿ ನಮ್ಮವರು 6 ಜನ ಶಾಸಕರಿದ್ದಾರೆ, ಯಾರನ್ನು ಕೇಳಿ ತೀರ್ಮಾನ ಮಾಡಿದ್ದಾರೆ. ಸಾರ್ವಜನಿಕರಿಗೆ ಯಾಕೆ ದರ್ಶನಕ್ಕೆ ಪ್ರವೇಶವಿಲ್ಲಾ ಎಂದು ಪ್ರಶ್ನೆ ಮಾಡಿದರು. ಈ ಹಾಸನಾಂಬ ದೇವಾಲಯ ಕೆಲವರ ಸ್ವತ್ತಲ್ಲ. ರಾಜ್ಯದ 224 ಕ್ಷೇತ್ರದ ಜನರ ಸ್ವತ್ತು. ಸುಬ್ರಹ್ಮಣ್ಯ, ಧರ್ಮಸ್ಥಳ ಎಲ್ಲವೂ ಮುಜರಾಯಿ ದೇವಾಲಯ ಅಲ್ವಾ. ಯಾಕೆ ಅಲ್ಲಿಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕೊಟ್ಟು ಹಾಸನಾಂಬೆ ದೇವಾಲಯಕ್ಕೆ ಮಾತ್ರ ಸಾರ್ವಜನಿಕ ದರ್ಶನ ನೀಡುತ್ತಿಲ್ಲಾ. ಈ ನೀತಿ ಬಿಟ್ಟು ಬೇಕಾದರೇ ಶಾಸಕರನ್ನು ದೂರವಿಟ್ಟು ನಿಜವಾದ ಭಕ್ತರಿಗೆ ಹಾಸನಾಂಬ ದರ್ಶನಕ್ಕೆ ಅವಕಾಶ ಕೊಡುವಂತೆ ಒತ್ತಾಯಿಸಿದರು.

ಇನ್ನು ನಗರಸಭೆ ಉಪಾಧ್ಯಕ್ಷ ಚುನಾವಣೆ ವಿಚಾರವಾಗಿ ಸರಿಯಾದ ನಿರ್ಧಾರ ಮಾಡಿರುವುದಿಲ್ಲ. ಇದುವರೆಗೂ ನೋಟಿಸ್‌ ನೀಡಿರುವುದಿಲ್ಲ. ಇದನ್ನು ಖಂಡಿಸಿ ಇಂದು ಬುಧವಾರ ಹಾಸನ ಉಪವಿಭಾಗಾಧಿಕಾರಿ ಕಚೇರಿ ಮುಂದೆ ಜೆಡಿಎಸ್‌ ಸದಸ್ಯರು ಧರಣಿ ಮಾಡುವುದಾಗಿ ಎಚ್ಚರಿಸಿದರು.

Follow Us:
Download App:
  • android
  • ios