ತುಮ​ಕೂ​ರು (ನ.02):  ಮಾಜಿ ಸಚಿವ ಹೆಚ್‌.ಡಿ. ರೇವಣ್ಣ ಮೇಲೆ ತುಮ​ಕೂರು ಗ್ರಾಮಾಂತರ ಶಾಸಕ ಗೌರಿ​ಶಂಕರ್‌ ಅಸ​ಮಾ​ಧಾ​ನ​ಗೊಂಡ ಘಟನೆ ಶಿರಾ​ದಲ್ಲಿ ನಡೆ​ಯಿತು.

ಶಿರಾದ ಬರ​ಗೂರು ರಾಮ​ಚಂದ್ರಪ್ಪ ಬಯಲು ರಂಗ​ಮಂದಿ​ರ​ದಲ್ಲಿ ನಡೆದ ಜೆಡಿ​ಎಸ್‌ ಸಮಾ​ವೇ​ಶ​ದಲ್ಲಿ ಕಾರ್ಯ​ಕ​ರ್ತ​ರನ್ನು ಉದ್ದೇ​ಶಿಸಿ ಗೌರಿ​ಶಂಕರ್‌ ಮಾತ​ನಾ​ಡು​ತ್ತಿ​ದ್ದರು. 

ಆ ವೇಳೆ ವೇದಿ​ಕೆ​ಯ​ಲ್ಲಿದ್ದ ರೇವಣ್ಣ ಮೈಕ್‌ ಅನ್ನು ಕಿತ್ತು​ಕೊ​ಳ್ಳಲು ಮುಂದಾ​ದರು. ಆಗ ಸಿಟ್ಟಾದ ಗೌರಿ​ಶಂಕರ್‌ ವೇದಿಕೆ ಹಿಂಭಾ​ಗಕ್ಕೆ ಹೊರಟು ಹೋದರು.

ಜೆಡಿಎಸ್ ಮುಖಂಡ ಶರವಣ ಮಾಡಿದ ಮನವಿ ಇದು ...

ಆಗ ಸಂಸದ ಪ್ರಜ್ವಲ್‌  ಮತ್ತು ವೈ.ಎ​ಸ್‌.ವಿ ದತ್ತ ಅವರು ಸಮಾ​ಧಾನ ಪಡಿಸಿ ಮತ್ತೆ ಕರೆ ತಂದರು. ಬಳಿಕ ಗೌರಿ​ಶಂಕರ್‌ ಮತ್ತೆ ಭಾಷಣ ಆರಂಭಿ​ಸಿ​ದ​ರು.

ಅಬ್ಬರದ ಪ್ರಚಾರ

ಬಹಿರಂಗ ಪ್ರಚಾರದ ಕೊನೆ ದಿನವಾದ ಭಾನುವಾರ ಶಿರಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಅಮ್ಮಾಜಮ್ಮ ಪರ ಭರ್ಜರಿಯಾಗಿ ಮತಬೇಟೆಗಿಳಿದಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಚಿವ ರೇವಣ್ಣ, ಜೆಡಿಎಸ್‌ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್‌ ಬೃಹತ್‌ ಸಮಾವೇಶ ನಡೆಸಿ ಅಬ್ಬರದ ಪ್ರಚಾರ ಮಾಡಿದರು.

ಈ ವೇಳೆ ರಾಜ್ಯದ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿ ಎಚ್‌.ಡಿ.ಕುಮಾರಸ್ವಾಮಿ, ಬಿ.ಎಸ್‌.ಯಡಿ​ಯೂ​ರಪ್ಪ ಈಗಾ​ಗಲೇ ಬಿಜೆಪಿ ಗೆದ್ದಿದೆ ಎಂದಿ​ದ್ದಾರೆ. ಆದರೆ ಸುಮಾರು .6 ಕೋಟಿ ಹಣ​ವನ್ನು ಶಿರಾಗೆ ತಂದಿ​ದ್ದಾರೆ ಎಂಬ ಮಾಹಿತಿ ನನಗೆ ತಿಳಿ​ದಿದೆ. ಹಣದ ತೈಲಿ ಹಿಡಿದುಕೊಂಡು ಬಂದು ಉಪಚುನಾವಣೆ ಮಾಡುತ್ತಿದ್ದಾರೆ. ನೆರೆ ಸಂತ್ರಸ್ತರಿಗೆ ಸರಿಯಾದ ಸೂಕ್ತ ವ್ಯವಸ್ಥೆ ಕಲ್ಪಿಸಲು ಆಗಿಲ್ಲ. ಬಹುಶಃ ಇಂತಹ ಕ್ಷೇತ್ರವನ್ನು ಎಲ್ಲಿಯೂ ನೋಡಲು ಸಾಧ್ಯವಿಲ್ಲ. ಕ್ಷೇತ್ರದ ಜನರು ಹಣಕ್ಕೆ ತಮ್ಮನ್ನು ಮಾಡಿಕೊಂಡಿಲ್ಲ ಎಂದರು.