ಹಾಸನ (ನ.04): ಪ್ರತಿವರ್ಷದಂತೆ ಈ ವರ್ಷವೂ ಅದಿ ದೇವಿ ಹಾಸನಾಂಬೆ ಉತ್ಸವದ ಸಿದ್ಧತೆಗಳು ನಡೆಯುತ್ತಿದೆ. 

ನ.5ರಂದು ದೇವಿ ದರ್ಶನಕ್ಕೆ ಬಾಗಿಲು ತೆರೆಯುವ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಬಣ್ಣ ಬಳೆಯುತ್ತಿದ್ದು, ರಸ್ತೆ ಉದ್ದಕ್ಕೂ ವಿದ್ಯುತ್‌ ದೀಪಗಳ ಅಲಂಕಾರ, ಬ್ಯಾರಿಕೇಡ್‌ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯುತ್ತಿವೆ.

ಹಾಸನಾಂಬೆ ದೇಗುಲ ಓಪನ್ ಎಂದು : ದೇಗುಲಕ್ಕೆ ಬಾರದೆ ದರ್ಶನ ಪಡೆಯಲು ಇದೆ ಅವಕಾಶ ...

 ಈ ಬಾರಿ ಕೋವಿಡ್‌-19 ಮುನ್ನೆಚ್ಚರಿಕೆಯಾಗಿ ಸಾರ್ವಜನಿಕರಿಗೆ ದೇವಾಲಯದ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಆದರೆ ದೇವಾಲಯದ ಅವರಣ ಹಾಗೂ ನಗರದ ಪ್ರಮುಖ ಸ್ಥಳಗಳಲ್ಲಿ ಎಲ್‌ಇಡಿ ಪರದೆ ಅಳವಡಿಸಿ 12 ದಿನಗಳ ಕಾಲ ನೇರ ಪ್ರಸಾರ ಮತ್ತು ಸಾಮಾಜಿಕ ಜಾಲತಾಣಗಳಲ್ಲೂ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. 

ಮೊದಲ ಹಾಗೂ ಕಡೆಯ ದಿನ ಕೇವಲ ಗಣ್ಯರಿಗೆ ಮಾತ್ರ ಹಾಸನಾಂಬೆ ದರ್ಶನಕ್ಕೆ ಅವಕಾಶ ನೀಡಲಾಗಿದೆ.