ಮೈಸೂರು (ಸೆ.06) : ನಶೆಯ ಅಮಲಿನಲ್ಲಿ ಇದ್ದವರು ಎಚ್‌.ಡಿ.ಕುಮಾರಸ್ವಾಮಿ, ಅವರು ಅಧಿಕಾರದ ಡ್ರಗ್ಸ್‌ ತೆಗೆದುಕೊಂಡಿದ್ದರು ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ತಿರುಗೇಟು ನೀಡಿದ್ದಾರೆ. 

‘ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಬೀಳಲು ಡ್ರಗ್ಸ್‌ ಕಾರಣ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಇಷ್ಟುದಿನ ಕುಮಾರಸ್ವಾಮಿ ಏನು ಮಾಡುತ್ತಿದ್ದರು? ಮಲಗಿದ್ದರಾ? ಸರ್ಕಾರ ರಚನೆಯಾಗಿ ಒಂದು ವರ್ಷವಾಗಿದೆ. 

ಡ್ರಗ್ಸ್ ಮಾಫಿಯಾ ಗದ್ದಲದ ಮಧ್ಯೆ ಸಂಚಲನ ಮೂಡಿಸಿದ ಸಿದ್ದರಾಮಯ್ಯ ಪತ್ರ .

ಈಗ ಯಾಕೆ ಈ ವಿಚಾರ ಪ್ರಸ್ತಾಪಿಸುತ್ತಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ. ‘ಅಧಿಕಾರದ ನಶೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಇದ್ದರು. ಅವರ ನಶೆಯಿಂದ ಸರ್ಕಾರ ಬಿದ್ದಿದ್ದು’ ಎಂದು ವ್ಯಂಗ್ಯವಾಡಿದ್ದಾರೆ.

 ಇಡೀ ರಾಷ್ಟ್ರಕ್ಕೆ ಸಂದೇಶ ರವಾನೆಯಾಗುತ್ತೆ:

ನಾಡಹಬ್ಬ ದಸರಾ ಅಚರಣೆಯನ್ನು ಈ ಬಾರಿಯ ಕೊರೋನಾ ವಾರಿಯರ್‌ಗಳಿಂದಲೇ ಉದ್ಘಾಟಿಸಲಿ. ಪೌರ ಕಾರ್ಮಿಕರ ಕೈಯಲ್ಲಿ ದಸರಾ ಉದ್ಘಾಟನೆಯಾಗಲಿ. ಇಡೀ ರಾಷ್ಟ್ರಕ್ಕೆ ಒಂದು ಸಂದೇಶ ರವಾನೆಯಾಗುತ್ತೆ. ನಾನು ಕೂಡ ದಸರಾ ಉನ್ನತ ಮಟ್ಟದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸುತ್ತೇನೆ ಎಂದು ಹೇಳಿದರು.