Asianet Suvarna News Asianet Suvarna News

ಡ್ರಗ್ಸ್ ಮಾಫಿಯಾ ಗದ್ದಲದ ಮಧ್ಯೆ ಸಂಚಲನ ಮೂಡಿಸಿದ ಸಿದ್ದರಾಮಯ್ಯ ಪತ್ರ

ಕರ್ನಾಟಕಲ್ಲಿ ಡ್ರಗ್ಸ್‌ ಮಾಫಿಯಾ ಗದ್ದಲ ಜೋರಾಗಿದ್ದು, ದಿನೇ-ದನೇ ಹೊಸ ತಿರುವು ಪಡೆದುಕೊಳ್ಳಿತ್ತಿದೆ. ಇದರ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪತ್ರ ಸಂಚಲನ ಮೂಡಿಸಿದೆ.

Siddaramaiah writes to Home Minister basavaraj bommai for asking Drugs Mafia Inflammations
Author
Bengaluru, First Published Sep 5, 2020, 7:58 PM IST
  • Facebook
  • Twitter
  • Whatsapp

ಬೆಂಗಳೂರು, (ಸೆ.05): 62 ಬಿಜೆಪಿ ಮುಖಂಡರ ಮೇಲಿನ ಪ್ರಕರಣಗಳನ್ನು ಹಿಂಪಡೆದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ವಾಪಸ್ ಪಡೆದಿರುವ ಬಗ್ಗೆ ಸಮಗ್ರ ವಿವರಗಳನ್ನ ನೀಡುವಂತೆ ವಿರೋಧ ಪಕ್ಷದ ನಾಯಕ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹೊಸ ದಾಳ ಉರುಳಿಸಿದ ಟ್ರಂಪ್, ಡಗ್ರ್ಸ್ ಪಾರ್ಟಿ ವಿಡಿಯೋ ರಿಲೀಸ್; ಸೆ.5ರ ಟಾಪ್ 10 ಸುದ್ದಿ!

ಎನ್ ಡಿಪಿಎಸ್ ಕಾಯ್ದೆಯಡಿ ಕಳೆದ 10 ವರ್ಷದಿಂದ ತೆಗೆದುಕೊಂಡ ಕ್ರಮದ ಬಗ್ಗೆ ವಿವರ ನೀಡುವಂತೆ ಪತ್ರ ಬರೆದಿದ್ದು. ಎಷ್ಟು ಜನರ ಮೇಲೆ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿವೆ..? ನ್ಯಾಯಾಲಯದಲ್ಲಿರುವ ಪ್ರಕರಣಗಳು ಯಾವ ಸ್ಥಿತಿಯಲ್ಲಿವೆ..?
ನ್ಯಾಯಾಲಯದಲ್ಲಿ ಖುಲಾಷೆಯಾದ ಪ್ರಕರಣಗಳೆಷ್ಟು ಎನ್ನುವ ಬಗ್ಗೆ ಉತ್ತರಿಸುವಂತೆ ಸಿದ್ದರಾಮಯ್ಯ ಪತ್ರದ ಮೂಲಕ ಆಗ್ರಹಿಸಿದ್ದಾರೆ.

ಪೊಲೀಸ್ ಅಧಿಕಾರಿಗಳ ಸಹಕಾರವಿಲ್ಲದೇ ಗಾಂಜಾ ದಂಧೆ ನಡೆಯಲು ಸಾಧ್ಯವೇ..? ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ಮೆಲೆ ಯಾವ ಕ್ರಮ ಕೈಗೊಳ್ಳಲಾಗಿದೆ. ವ್ಯಸನಿಗಳ ಪೋಷಕರಿಂದ ಗುಪ್ತವಾಗಿ ಮಾಹಿತಿ ಪಡೆಯುವ ವ್ಯವಸ್ಥೆ ರಾಜ್ಯದಲ್ಲಿದೆಯಾ.?

ಡ್ರಗ್ಸ್ ಎಲ್ಲಿಂದ ಸರಬರಾಜಾಗುತ್ತಿದೆ..? ಸರಬರಾಜುದಾರರ ಎಷ್ಟು ಆಸ್ತಿಗಳನ್ನು ಮುಟ್ಟುಗೋಲು ಹಾಕಲಾಗಿದೆ..? ಎಷ್ಟು ಮಂದಿ ಡ್ರಗ್ ವ್ಯಸನಿಗಳನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ದೀರಿ..? ಡ್ರಗ್ ವ್ಯಸನದಿಂದ ಮರಣ ಹೊಂದಿದ ವ್ಯಕ್ತಿಗಳೇಷ್ಟು ಎಂದು  ಸಿದ್ಧರಾಮಯ್ಯ ವಿವರ ಕೇಳಿದ್ದಾರೆ.

ಇದಕ್ಕೆ ಗೃಹ ಸಚಿವ ಯಾವ ರೀತಿಯಾಗಿ ಸ್ಪಂದಿಸುತ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ.

Follow Us:
Download App:
  • android
  • ios