ಮದುವೆ ದಿನವೇ ಮಸಣ ಸೇರಿದ ವರ; ದೇವರೇ ಇದೆಂಥ ಸಾವು!
- ಮದುವೆ ದಿನವೇ ವರನ ಧಾರುಣ ಸಾವು
- ಆರತಕ್ಷತೆಯ ಮಧ್ಯೆಯೇ ಕುಸಿದು ಬಿದ್ದ ಯುವಕ ಸಾವು
- ವಿಧಿಯೇ ಈ ಸಾವು ನ್ಯಾಯವೇ ಎನ್ನುತ್ತಿರೋ ಗ್ರಾಮಸ್ಥರು
- ಮದುವೆ ಮನೆಯಲ್ಲೀಗ ಸ್ಮಶಾನ ಮೌನ
ವರದಿ : ನರಸಿಂಹ ಮೂರ್ತಿ ಕುಲಕರ್ಣಿ
ವಿಜಯನಗರ (ಜು.21): ಮನುಷ್ಯನ ಸಾವು ಯಾವಾಗ ಯಾವ ರೂಪದಲ್ಲಿ ಬರುತ್ತದೆ ಎಂದು ಯಾರಿಗೂ ಗೊತ್ತಿರೋದಿಲ್ಲ. ಇದಕ್ಕೊಂದು ಉದಾಹರಣೆಯೇ ಈ ಸಾವು.. ಹೌದು, ಇಲ್ಲೊಬ್ಬ ವ್ಯಕ್ತಿಯ ಸಾವು ತನ್ನ ಮದುವೆಯ ಆರತಕ್ಷತೆ ವೇಳೆ ನಡೆದಿದೆ. ಅರತಕ್ಷತೆ ನಡೆಯುತ್ತಿರೋ ವೇಳೆಯೇ ದಿಡೀರನೆ ಕುಸಿದು ಬಿದ್ದು ಸಾವನ್ನಪ್ಪಿರೋದು ಮಾತ್ರ ಮದುವೆ ಮನೆಯ ಬೆಳಕನ್ನು ಕತ್ತಲಾಗಿಸಿದೆ. ಇಂತಾಹದ್ದೊಂದು ಘಟನೆ ನಡೆದಿರೋದು ಹೊಸಪೇಟೆ ತಾಲೂಕಿನ ಪಾಪಿನಾಯಕನ ಹಳ್ಳಿಯಲ್ಲಿ. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸ್ಮಶಾನ ಮೌನ ಆವರಸಿದೆ. ವಧುವರರ ಜೀವನದಲ್ಲಿ ಅಪರೂಪದ ಕ್ಷಣವಾಗಬೇಕಿದ್ದ ಜೀವನದ ಮಹತ್ವದ ಘಟ್ಟವೇ ಕೆಟ್ಟದಾಗಿ ನಡೆದಿರೋದು ಗ್ರಾಮಸ್ಥರೆಲ್ಲರೂ ಕಣ್ಣಿರುಡುವಂತೆ ಮಾಡಿದೆ.
ಹೃದಯಾಘಾತದಿಂದ ಮೃತಪಟ್ಟ ಮಧುಮಗ:
ವಿಜಯನಗ(Vijayanagar)ರ ಜಿಲ್ಲೆ ಹೊಸಪೇಟೆ(Hospete) ತಾಲೂಕಿನ ಪಾಪಿನಾಯಕನ ಹಳ್ಳಿ(Papinayakanahallli) ಗ್ರಾಮದ ಹೊನ್ನೂರ ಸ್ವಾಮಿ(Honnur swamy)ಗೆ ಬುಧವಾರ ಗ್ರಾಮದಲ್ಲಿರೋ ಸುಡುಗಾಡಪ್ಪ ತಾತಾನ ದೇವಸ್ಥಾನದಲ್ಲಿ ಮದುವೆಯಾಗಿದೆ. ಮದುವೆ(Marrage)ಯಾದ ಸಂತಸದಲ್ಲಿಯೇ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾನೆ. ಆದ್ರೇ, ಕ್ರೂರ ವಿಧಿಗೆ ಹೊನ್ನೂರ ಸ್ವಾಮಿಯ ಸಂತಸ ನೋಡೋಕೆ ಹೊಟ್ಟೆ ಕಿಚ್ಚಾಗಿತ್ತು ಅನಿಸುತ್ತದೆ.ಅರತಕ್ಷತೆ ವೇಳೆಯೇ ಎದೆನೋವಿನ ರೂಪದಲ್ಲಿ ಬಂದ ಹೃದಾಯಘಾತ(Heart attack) ಹೊನ್ನೂರ ಸ್ವಾಮಿಯನ್ನು ಸಾವಿನ ದಡ ಸೇರಿಸಿದೆ. ಆರತಕ್ಷತೆ ವೇಳೆ ಹೊನ್ನೂರಸ್ವಾಮಿಗೆ ಎದೆನೋವು ಕಾಣಿಸಿಕೊಂಡಿದೆ. ಆಗ ವೇದಿಕೆ ತುಂಬೆಲ್ಲ ಎದೆನೋವು ತಾಳೆದೆ ಓಡಾಡಿದ್ದಾನೆ. ಇದನ್ನು ಕಂಡ ಸಂಬಂಧಿಕರು ಹಾಗೂ ಸ್ನೇಹಿತರು ಹೀಗ್ಯಾಕೆ ಓಡಾಡುತ್ತಿದ್ದಿಯಾ ಎಂದು ಕೇಳಿದ್ದಾರೆ. ಕೆಲವರು ತಮಾಷೆಯೂ ಮಾಡಿದ್ದಾರೆ. ಆಗ ಹೊನ್ನೂರಸ್ವಾಮಿ ತನ್ನ ತಮ್ಮನ ಬಳಿ, ನನಗ್ಯಾಕೋ ಎದೆನೋವಾಗುತ್ತಿದೆ ಎಂದು ಹೇಳಿಕೊಂಡಿದ್ದಾನೆ. ಕೂಡಲೇ ಸೋಡಾ ತಂದು ಕೊಟ್ಟಿದ್ದಾರೆ. ಸೋಡಾ ಕುಡಿದ ಬಳಿಕ ವಾಂತಿಯಾಗಿದೆ. ಅಲ್ಲಿದ್ದವರು ಸಮೀಪದಲ್ಲಿಯೇ ಇರೋ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ಅದಾಗಲೇ ಹೊನ್ನೂರ ಸ್ವಾಮಿ ಅವರಿಗೆ ಲೋಬಿಪಿಯಾಗಿದ್ದು, ಎಚ್ಚರ ತಪ್ಪಿರೋದ್ರಿಂದ ಹೊಸಪೇಟೆಯಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಸಲಹೆ ನೀಡಿದ್ದಾರೆ. ಆದ್ರೆ ಅಲ್ಲಿಗೋಗೋವಷ್ಟರಲ್ಲಿಯೇ ಹೊನ್ನೂರಸ್ವಾಮಿ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ಸ್ನೇಹಿತ ರಾದ ತಾಯಪ್ಪ ಮತ್ತು ವಿನೋದ್ ಕಣ್ಣಿರಿಡುತ್ತಲೇ ಘಟನೆಯನ್ನು ವಿವರಿಸಿದ್ರು.
ಮೈಸೂರು; ಪ್ರಿ ವೆಡ್ಡಿಂಗ್ ಪೋಟೋ ಶೂಟ್ ವೇಳೆ ತೆಪ್ಪ ಮಗುಚಿ ವಧು-ವರ ಸಾವು
ಏನಾಯ್ತು ಅನ್ನೋದೆ ಗೊತ್ತಾಗಲಿಲ್ಲ:
ಬಡವಾರಾದ್ರೂ ಇದ್ದದ್ರಲ್ಲಿ ಉತ್ತಮ ಸ್ಥಿಯಲ್ಲಿರೋ ಕುಟುಂಬ ಮದುವೆಗಾಗಿ ಮನೆಯಲ್ಲಿ ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಂಡಿದ್ರು.ಎರಡು ದಿನದ ಮದುವೆ ಸಂಭ್ರಮಕ್ಕೆ ಇಡೀ ಊರ ಮಂದಿಯನ್ನೇ ಕರೆದು ಅದ್ದೂರಿಯಾಗಿ ಮದುವೆ ಮಾಡಲು ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ರು. ರಾತ್ರಿಯ ದೇವರ ಕಾರ್ಯ ಮುಗಿಸಿ ಬೆಳಿಗ್ಗೆ ಮದುವೆಯ ಎಲ್ಲ ಶಾಸ್ತ್ರ ಮುಗಿಸಿದ್ರು. ಆದ್ರೇ ಆರತಕ್ಷತೆ ವೇಳೆ ಸಣ್ಣದಾಗಿ ಕಾಣಿಸಿಕೊಂಡ ಎದೆನೋವು ಲೋಬಿಪಿಯಾಗಿ ಹೃದಯಾಘಾತವಾಗೋ ಲೇವಲ್ ಹೋಗಿ ಪ್ರಾಣ ಪಕ್ಷಿಯೇ ಹಾರಿ ಹೋಗಿತ್ತು. ಇಷ್ಟೇಲ್ಲ ನಡೆಯುತ್ತಿದ್ರು. ಗ್ರಾಮಸ್ಥರಿಗೆ ಏನಾಯ್ತೋ ಅನ್ನೋದು ತಿಳಿದು ಕೊಳ್ಳೊದ್ರಳೊಗೆ ಸಾವಿನ ವಿಚಾರ ಬರಸಿಡಿಲಿನಂತೆ ಬಡಿದಿತ್ತು.
ಭೀಕರ ಅಪಘಾತ : ವರ ಸೇರಿ 13 ಮಂದಿ ಸಾವು
ಮುಗಿಲು ಮುಟ್ಟಿದ ಕುಟುಂಸ್ತರ ಆಕ್ರಂಧನ:
ಇನ್ನೂ ಹೊಸಪೇಟೆಯ ಆಸ್ಪತ್ರೆ ಯಿಂದ ವಾಪಾಸ್ ಗ್ರಾಮಕ್ಕೆ ಹೊನ್ನೂರ ಸ್ವಾಮಿ ಅವರ ಮೃತದೇಹ ತಂದಾಗಲಂತೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ನೆರೆದಿದ್ದ ಪ್ರತಿಯೊಬ್ಬರ ಕಣ್ಣಾಲಿಗಳೂ ತೇವವಾಗಿದ್ವು. ಇಡೀ ಊರ ಜನರೇ ತಮ್ಮ ಮನೆ ಮಗನನ್ನು ಕಳೆದುಕೊಂಡಿದ್ದೇವೆ ಎನ್ನುವ ಭಾವನೆಯೊಂದಿಗೆ ಅಂತಿಮ ವಿಧಿವಿಧಾನವನ್ನು ನೆರವೇರಿಸಿದ್ರು. ಜೀವನದ ಮಹತ್ವದ ಘಟ್ಟವಾಗಬೇಕಿದ್ದ ದಿನವೇ ಈ ರೀತಿಯ ದುರ್ಘಟನೆ ನಡೆದಿರೋದು ಮಾತ್ರ ನಿಜಕ್ಕೂ ದುರ್ದೈವದ ಸಂಗತಿಯಾಗಿದೆ.