ಮದುವೆಗೆಂದು ವರನ ಕುಟುಂಬ ತೆರಳುತ್ತಿದ್ದ ಮಿನಿ ಬಸ್ ಅಪಘಾತಕ್ಕೆ ಈಡಾಗಿ ವರ ಹಾಗೂ ಕುಟುಂಬದ 13 ಮಂದಿ ಮೃತಪಟ್ಟಿರುವ ಭೀಕರ ದುರ್ಘಟನೆ ನಡೆದಿದೆ. 

ವಿಯೇಟ್ನಾಂ : ಮದುವೆಗೆಂದು ತೆರಳುತ್ತಿದ್ದ ಮಿನಿ ಬಸ್ ಒಂದು ಕಂಟೈನರ್ ಗೆ ಡಿಕ್ಕಿಯಾಗಿ ವರ ಸೇರಿ 13 ಮಂದಿ ಸಾವನ್ನಪ್ಪಿರುವ ಘಟನೆ ಕೇಂದ್ರೀಯ ವಿಯೇಟ್ನಾಂನಲ್ಲಿ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಸ್ ನಲ್ಲಿ ವರ ಹಾಗೂ ಆತನ ಕುಟುಂಬಸ್ಥರು ಪ್ರಯಾಣಿಸುತ್ತಿದ್ದರು ಈ ವೇಳೆ ಕ್ವಾಂಗ್ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ. 

10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಮೂವರು ಆಸ್ಪತ್ರೆಗೆ ಸಾದಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಈ ವೇಳೆ ಡ್ರೈವರ್ ಸೇರಿದಂತೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ವಿಯೆಟ್ನಾಂನಲ್ಲಿ ಇಂತಹ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಇದಕ್ಕೆ ರಸ್ತೆ ಸುರಕ್ಷತಾ ನಿಯಮಗಳ ಕಟ್ಟು ನಿಟ್ಟಾಗಿಲ್ಲದಿರುವುದೇ ಕಾರಣವಾಗಿದೆ ಎನ್ನಲಾಗಿದೆ.