ಮೈಸೂರು( ನ. 08)  ಕಾವೇರಿ ನದಿಯಲ್ಲಿ ಫೋಟೋ ಶೂಟ್ ಮಾಡುತ್ತಿದ್ದ ವಧು-ವರ ನೀರು ಪಾಲಾಗಿದ್ದಾರೆ.  ಮುಡುಕುತೊರೆ ನಿಸರ್ಗಧಾಮ ರೆಸಾರ್ಟ್ ಬಳಿ ಅವಘಡ ನಡೆದಿದೆ.  ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಮುಡುಕುತೊರೆಯಲ್ಲಿ  ಅವಘಡ ನಡೆದಿದೆ.

ಕಾವೇರಿ ನದಿಯಲ್ಲಿ ತೆಪ್ಪದ ಮೇಲೆ ನಿಂತು ಪೋಟೋ ಶೂಟ್ ಮಾಡಲಾಗುತ್ತಿತ್ತು.  ಈ ವೇಳೆ ಆಯತಪ್ಪಿ ಹುಡುಗಿ ಆಯತಪ್ಪಿ ನದಿಗೆ ಬಿದ್ದಿದ್ದಾರೆ. ಹುಡುಗಿ ಹಿಡಿಯಲು ಹೋಗಿ ಹುಡುಗ ಸಹ ನದಿಗೆ ಬಿದ್ದಿದ್ದೇನೆ. ಚಂದ್ರು (28), ಶಶಿಕಲಾ (20) ನೀರುಪಾಲಾಗಿದ್ದಾರೆ.

ಕೆಸರು ಗದ್ದೆಗೆ ಇಳಿದ ನವಜೋಡಿ.. ಪ್ರೀ ವೆಡ್ಡಿಂಗ್ ಶೂಟ್ ಅಂತೆ!

ಇಬ್ಬರೂ ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳು. ಇಬ್ಬರಿಗಾಗಿ ನದಿಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ.  ಪ್ರಿವೆಡ್ಡಿಂಗ್ ಶೂಟಿಂಗ್ ವೇಳೆ ‌ಮುಡುಕುತೊರೆ ಬಳಿ‌ ತೆಪ್ಪ ಮಗುಚಿ ವಧು, ವರ ಸಾವು.  ನ.22ರಂದು ಚಂದ್ರು, ಶಶಿಕಲಾ ಮದುವೆ ನಿಶ್ಚಯವಾಗಿತ್ತು.  ತಲಕಾಡು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದ್ದು ಶವ ಪತ್ತೆಯಾಗಿದೆ