ಸೋಂಕಿನಿಂದ ಮೃತಪಟ್ಟವರ ಬಗ್ಗೆ ಸರ್ಕಾರಕ್ಕೆ ಸುಳ್ಳು ವರದಿ ಕೋವಿಡ್‌ ಸೋಂಕಿನಿಂದ ಮೃತಪಟ್ಟ ಕುಟುಂಬಗಳು ಪರಿಹಾರದಿಂದ ವಂಚಿತ ಶಿಸ್ತುಕ್ರಮವಾಗಲಿ ಎಂದು ಗ್ರಾಪಂ ಅಧ್ಯಕ್ಷೆ ಮೊಹಸಿನ್‌ತಾಜ್ ಒತ್ತಾಯ

 ಭೇರ್ಯ (ಜೂ.15): ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿನಿಂದ ಮೃತಪಟ್ಟವರ ಬಗ್ಗೆ ಸರ್ಕಾರಕ್ಕೆ ಸುಳ್ಳು ವರದಿ ನೀಡಿ, ಕೋವಿಡ್‌ ಸೋಂಕಿನಿಂದ ಮೃತಪಟ್ಟ ಕುಟುಂಬಗಳು ಪರಿಹಾರದಿಂದ ವಂಚಿತರಾಗಿದ್ದು, ಇದರ ಹೊಣೆಯನ್ನು ರೋಹಿಣಿ ಅವರೇ ಹೊರಬೇಕು, ಇವರ ವಿರುದ್ಧ ಶಿಸ್ತುಕ್ರಮವಾಗಲಿ ಎಂದು ಗ್ರಾಪಂ ಅಧ್ಯಕ್ಷೆ ಮೊಹಸಿನ್‌ತಾಜ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಈ ರೀತಿಯ ಘಟನೆಗಳು ಸಂಭವಿಸುತ್ತವೆ ಎಂದೇ ಶಾಸಕ ಸಾ.ರಾ. ಮಹೇಶ್‌ ಅವರು ಕೋವಿಡ್‌ ಸೋಂಕಿನಿಂದ ಮೃತರಾದವರ ಪಟ್ಟಿಯನ್ನು ಪಡೆದುಕೊಂಡು ಹೋರಾಟ ಮಾಡುತ್ತಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರೋಹಿಣಿ ಸಿಂಧೂರಿ ಅಮಾನತು ಮಾಡಿ ಕ್ರಿಮಿನಲ್ ಕೇಸ್ ಹಾಕಿ ಎಂದ ಬಿಜೆಪಿ ಮುಖಂಡ ..

ರೋಹಿಣಿ ಸಿಂಧೂರಿ ವಾಪಸ್‌ ಬನ್ನಿ ಎಂದು ಸಹಿ ಮಾಡುತ್ತಿರುವ ಬೆಂಬಲಿಗರು ಇದಕ್ಕೆ ತಕ್ಕ ಉತ್ತರ ನೀಡಿ, ನಿಮ್ಮ ಕುಟುಂಬದವರಿಗೆ ಅನ್ಯಾಯವಾದರೆ ನೀವು ಸುಮ್ಮನಿರುತ್ತಿದ್ದರ ಎಂದು ಪ್ರಶ್ನೆ ಮಾಡಿದ ಅವರು, ಇಂತಹ ನಿರ್ಲಕ್ಷ್ಯ, ಬೇಜವಬ್ದಾರಿ ಅಧಿಕಾರಿ ಯಾವ ಜಿಲ್ಲೆಗೂ ಹಾಕಬಾರದು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಪರಿಹಾರ ಸಿಗದ ಕುಟುಂಬಗಳಿಗೆ ಯಾರು ಒಂದು ಲಕ್ಷ ಕೊಡುತ್ತಾರೆ, ಸಿಂಧೂರಿ ಕೈಯಿಂದ ಕೊಡಿಸಿ, ಇಷ್ಟೆಲಾ ಸಮಸ್ಯೆಗಳು ಮೈಸೂರು ಜಿಲ್ಲೆಯಲ್ಲಿ ನಡೆಯುತ್ತಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ, ಯಾರನ್ನು ಪ್ರಶ್ನೆ ಮಾಡುವುದು?. ಒಬ್ಬ ಅಧಿಕಾರಿ ಸಮೂಹ ಮಾಧ್ಯಮಗಳಿಗೆ ಒಬ್ಬ ಜನಪ್ರತಿನಿಧಿ ಬಗ್ಗೆ ಹೇಳಿಕೆಯನ್ನು ಕೊಡುತ್ತಾರೆ ಎಂದರೆ, ಈ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಉಪಾಧ್ಯಕ್ಷ ಮತ್ತು ದಲಿತ ಮುಖಂಡ ಬಿ.ಕೆ. ಶಿವಕುಮಾರ್‌ ಮಾತನಾಡಿ, ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರು ತಮ್ಮ ಆಸ್ತಿಯನ್ನು ಘೋಷಣೆ ಮಾಡಿದ್ದಾರೆ. ಆದರೆ ತಮ್ಮ ಪತಿಯ ಆಸ್ತಿಯನ್ನು ಏಕೆ ಘೋಷಣೆ ಮಾಡಿಕೊಂಡಿಲ್ಲ, ಮಾಜಿ ಸಚಿವ ಸಾ.ರಾ. ಮಹೇಶ್‌ ಅವರು ಕಳೆದ ವರ್ಷ ಕೋವಿಡ್‌ನಿಂದ ಲಾಕ್‌ಡೌನ್‌ ಆಗಿದ್ದಾಗ ಹಸಿವಿನಿಂದ ತಾಲೂಕಿನ ಜನರು ಇರಬಾರದು ಎಂದು 80,000 ಕುಟುಂಬಗಳಿಗೆ ಪಡಿತರ ಕಿಟ್‌ ನೀಡಿದರು.

ದೂರು ಆಧರಿಸಿ ಸಾರಾ ವಿರುದ್ಧ ಕ್ರಮಕ್ಕೆ ಸೂಚನೆ : ಟ್ರಾನ್ಸ್‌ಫರ್‌ಗೂ ಮುನ್ನ ರೋಹಿಣಿ ಕ್ರಮ ..

ರೈತರ ತರಕಾರಿ ಖರೀದಿ ಮಾಡಿದರು, ಕೋವಿಡ್‌ ಎರಡನೇ ರೂಪಾಂತರಿ ಅಲೆಯಲ್ಲಿ ಕೋವಿಡ್‌ ಕೇರ್‌ ಕೇಂದ್ರವನ್ನೆ ತೆರೆದರು. ಇದನ್ನು ಸಹ ಸಹಿಸಲಿಲ್ಲ ನೀವು, ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್‌.ಟಿ. ಸೋಮಶೇಖರ್‌ ಹಾಗೂ ಸಂಸದ ಪ್ರತಾಪ್‌ ಸಿಂಹ ಕೋವಿಡ್‌ ಕೇರ್‌ ಕೇಂದ್ರಕ್ಕೆ ಭೇಟಿ ನೀಡಿ ಜಿಲ್ಲೆಯ 11 ಶಾಸಕರ ಪೈಕಿ ಶಾಸಕ ಸಾ.ರಾ. ಮಹೇಶ್‌ ಉತ್ತಮವಾದ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಹೊಗಳಿದರು. ಇದನ್ನು ಸಹ ನೀವು ಸಹಿಸದೇ ಭೂ ಒತ್ತುವರಿ ಆರೋಪ ಮಾಡಿದ ನೀವು, ಕ್ರಮ ಏಕೆ ಕೈಗೊಳ್ಳಲಿಲ್ಲ, ಇದರಲ್ಲಿಯೇ ಗೊತ್ತಾಗುತ್ತದೆ ಸತ್ಯಾಂಶ ಏನೆಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಪಂ ಸದಸ್ಯ ಬಿ.ಕೆ. ಕುಮಾರ್‌, ಜೆಡಿಎಸ್‌ ಮುಖಂಡ ತನು, ಲೋಕೇಶ್‌, ದಲಿತ ಮುಖಂಡ ರಾಜಯ್ಯ, ಬಿ.ಪಿ. ಯೋಗೇಶ್ ಇದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona