ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ ಐಎಎಸ್  ರೋಹಿಣಿ ಸಿಂಧೂರಿ ಅಮಾನತು ಮಾಡಿ ಎಂದ ಮುಖಂಡ  ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದ ಬಿಜೆಪಿ ನಾಯಕ 

ಚಾಮರಾಜನಗರ (ಜೂ.13):ಚಾಮರಾಜನಗರಕ್ಕೆ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಅಮಾನತು ಮಾಡಬೇಕು ಎಂದು ಬಿಜೆಪಿ ರೈತ ಮುಖಂಡ ಮಲ್ಲೇಶ್ ಹೇಳಿದ್ದಾರೆ. 

ಚಾಮರಾಜನಗರದಲ್ಲಿಂದು ಮಾತನಾಡಿದ ಮಲ್ಲೇಶ್ ಹಿಂದಿನ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯನ್ನು ಅಮಾನತು ಪಡಿಸಬೇಕು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಹೇಳಿದರು.

'ಶಿಲ್ಪಾ ನಾಗ್‌ ಹೆಗಲ ಮೇಲೆ ಬಂದೂಕು ಇಟ್ಟು ರೋಹಿಣಿ ಸಿಂಧೂರಿಗೆ ಶೂಟ್‌'

ಚಾಮರಾಜ‌ಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಗೆ ರೋಹಿಣಿ ಸಿಂಧೂರಿಯೇ ಕಾರಣ. ಅಕ್ಕಪಕ್ಕದ ಜಿಲ್ಲೆಗಳಿಗೆ ಆಕ್ಸಿಜನ್ ಪೂರೈಸಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳೇ ಸೂಚನೆ ಕೊಟ್ಟಿದ್ದರು. ತಾಯಿಯಂತೆ ನಡೆದು ಕೊಳ್ಳ ಬೇಕೆಂದು ಹೇಳಿದ್ದರು. ಆದರೆ ರೋಹಿಣಿ ಸಿಂಧೂರಿ ತಾಯಿಯಂತೆ ನಡೆದುಕೊಳ್ಳದೆ ಮಾರಿಯಂತೆ ನಡೆದುಕೊಂಡರು ವಾಕ್ ಪ್ರಹಾರ ನಡೆಸಿದರು.

ಕಾಡುಗಳ್ಳ ವೀರಪ್ಪನ್ ಹಂತಹಂತವಾಗಿ 25 ಜನರನ್ನು ಕೊಂದಿದ್ದರೆ ರೋಹಿಣಿ ಸಿಂಧೂರಿ ಒಂದೇ ಬಾರಿಗೆ 36 ಜನರ ಹತ್ಯಾಕಾಂಡ ನಡೆಸಿದರು ಎಂದು ಬಿಜೆಪಿ ರೈತ ಮುಖಂಡ ಮಲ್ಲೇಶ್ ವಾಗ್ಧಾಳಿ ನಡೆಸಿದರು.

ಹಾಸನ, ಮಂಡ್ಯ, ಮೈಸೂರು ಹೀಗೆ ಎಲ್ಲಾ ಕಡೆ ಜಗಳ ಮಾಡಿಕೊಂಡೆ ಹೋಗಿದ್ದಾರೆ. ಅಹಂಕಾರ, ದರ್ಪ ದವಲತ್ತು ಪ್ರದರ್ಶಿಸಿದ್ದಾರೆ. ಹೋದ ಕಡೆಯೆಲ್ಲಾ ಈ ರೀತಿಯ ನಡೆಯನ್ನೇ ಪ್ರದರ್ಶಿಸಿದ್ದಾರೆ ಎಂದು ಮಲ್ಲೇಶ್ ವಾಗ್ದಾಳಿ ನಡೆಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona