ಎರಡು ತಿಂಗಳ ಪರಿಶ್ರಮಕ್ಕೆ ಸಂದ ಜಯ: ಗ್ರಾಮ ಪಂಚಾಯಿತಿ ಗ್ರಾಮಗಳ ಒಗ್ಗಟ್ಟಿಗೆ ಕ್ರೀಡೆ ಸಹಕಾರಿ
ಯುವ ಸಮುದಾಯ ಹೆಚ್ಚು ದೈಹಿಕ ಕಸರತ್ತಿನಿಂದ, ಕ್ರೀಡಾ ಚುಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿದಾಗ ಮಾತ್ರ ದೈಹಿಕ ಮತ್ತು ಮಾನಸಿಕವಾಗಿ ಬೆಳೆಯಲು ಸಹಕಾರಿಯಾಗುತ್ತದೆ. ತಾಳೇಕೆರೆ ಗ್ರಾಮದ ಯುವಕರ ಎರಡು ತಿಂಗಳ ಪರಿಶ್ರಮಕ್ಕೆ ಟೂರ್ನಿಯಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಇದಕ್ಕೆ ನಿದರ್ಶನ ಎಂದು ಅರೇ ಬೊಮ್ಮನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಶೈಲೇಂದ್ರ ಹೇಳಿದರು.
ವರದಿ: ಟಿ.ಮಂಜುನಾಥ್, ಹೆಬ್ಬಗೋಡಿ, ಬೆಂಗಳೂರು ಗ್ರಾಮಾಂತರ
ನೆಲಮಂಗಲ (ಜು.17): ಯುವ ಸಮುದಾಯ ಹೆಚ್ಚು ದೈಹಿಕ ಕಸರತ್ತಿನಿಂದ, ಕ್ರೀಡಾ ಚುಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿದಾಗ ಮಾತ್ರ ದೈಹಿಕ ಮತ್ತು ಮಾನಸಿಕವಾಗಿ ಬೆಳೆಯಲು ಸಹಕಾರಿಯಾಗುತ್ತದೆ. ತಾಳೇಕೆರೆ ಗ್ರಾಮದ ಯುವಕರ ಎರಡು ತಿಂಗಳ ಪರಿಶ್ರಮಕ್ಕೆ ಟೂರ್ನಿಯಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಇದಕ್ಕೆ ನಿದರ್ಶನ ಎಂದು ಅರೇ ಬೊಮ್ಮನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಶೈಲೇಂದ್ರ ಹೇಳಿದರು. ತಾಲೂಕಿನ ಅರೇ ಬೊಮ್ಮನಹಳ್ಳಿ ಗ್ರಾಮದ ಕ್ರೀಡಾಂಗಣದಲ್ಲಿ ಭಾನುವಾರ ಹಳ್ಳಿ ಕ್ರಿಕೆಟ್ ಕಲರವ, ಅರೇಬೊಮ್ಮನಹಳ್ಳಿ ಪಂಚಾಯತಿ ಪ್ರಿಮಿಯರ್ ಲೀಗ್‌ನ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ವಿಜೇತ ತಂಡಗಳಿಗೆ ಮತ್ತು ಆಟಗಾರರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಪಂಚಾಯತಿಯ 09 ತಂಡಗಳು ಲೀಗ್‌ನಲ್ಲಿ ಭಾಗವಹಿಸಿದ್ದರು.ಮಳೆಯಿಂದಾಗಿ ಟೂನ್೯ಮೆಂಟ್ ಎರಡು ದಿನಗಳ ಬದಲು ನಾಲ್ಕು ದಿನಗಳು ನಡೆಯಿತು. ಇಂದಿನ ಯುವ ಸಮುದಾಯ ಹೆಚ್ಚು ಮೊಬೈಲ್ ಗೇಮ್ಸ್‌ನತ್ತ ಜೋತು ಬಿದ್ದು, ದೈಹಿಕ ಶ್ರಮವಿಲ್ಲದೇ, ಮಾನಸಿಕವಾಗಿ ಖಿನ್ನರಾಗುತ್ತಿದ್ದಾರೆ, ಯುವಕರು ಹೆಚ್ಚು ಕ್ರಿಕೆಟ್‌ನತ್ತ ವಾಲುತ್ತಿರುವುದು ಒಳ್ಳೇಯ ಬೆಳವಣಿಗೆಯೇ, ಆದರೆ ದೇಶೀಯ ಕ್ರೀಡೆಗಳಾದ ಕಬ್ಬಡ್ಡಿ, ಈಜು, ವಾಲಿಬಾಲ್, ಲಗೋರಿ, ಚಿಣ್ಣಿದಾಂಡು, ಇತ್ಯಾದಿಗಳನ್ನು ಮರೆಯಬಾರದು. ಅರೇಬೊಮ್ಮನಹಳ್ಳಿ ಸೇರಿದಂತೆ ಪ್ರತಿ ಪಂಚಾಯತಿ ವ್ಯಾಪ್ತಿಯಲ್ಲೂ ಇಂತಹ ಟೂನ್೯ಮೆಂಟ್ ನಡೆಯುತ್ತಿದೆ. ಭಾನುವಾರ ಫೈನಲ್‌ನಲ್ಲಿ ರಾಯಲ್ ಫೈಟಸ್೯ ತಾಳೇಕೆರೆ ಜಯದ ನಗೆ ಬೀರಿದರೆ, ಬ್ಯಾಡರಹಳ್ಳಿ ಹನುಮಾನ್ ಫೈಟಸ್೯ ರನ್ನರಪ್ ಪ್ರಶಸ್ತಿ ಪಡೆದಿದೆ, ವಿಜೇತ ತಂಡಕ್ಕೆ ಬಹುಮಾನ ಮತ್ತು 50 ಸಾವಿರ ನಗದು ನೀಡಿದ್ದೇವೆ, ಎಂದು ಸಂತಸ ವ್ಯಕ್ತಪಡಿಸಿದರು.
Ramanagara ವಾಸವಿ ಭೋಜನ ಸಂತೆ, ಶೆಟ್ಟರ ಮನೆಯ ವೈವಿಧ್ಯಮಯ ಮನೆತಿಂಡಿಗಳು ಬೊಂಬಾಟ್
ಗ್ರಾಮೀಣ ಕ್ರೀಡಾ ಪ್ರತಿಭೆಗಳ ಪ್ರೋತ್ಸಾಹಿಸಿ: ಕಾಂಗ್ರೇಸ್ ವೀಕ್ಷಕ ಎನ್. ಶ್ರೀನಿವಾಸ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಹಲವಾರು ಉದಯೋನ್ಮುಖ ಕ್ರೀಡಾ ಪಟುಗಳಿಗೆ ಉತ್ತಮ ವೇದಿಕೆ ಅವಶ್ಯಕತೆ ಇತ್ತು, ಪಂಚಾಯತಿ ಕ್ರಿಕೆಟ್ ಲೀಗ್‌ಗಳು ಆ ಕೊರತೆ ತುಂಬಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ದೊರೆತಾಗ ನಾವೇಲ್ಲರೂ ಸಹಕಾರ ನೀಡುತ್ತೇವೆ. ಯುವಕರಲ್ಲಿ ಕ್ರೀಡಾ ಮನೋಭಾವ ಬೆಳೆಯಲೂ ಹೋಬಳಿಗೊಂದು ಉತ್ತಮ ಕ್ರೀಡಾಂಗಣ ನಿರ್ಮಾಣ ಕೂಡ ಅವಶ್ಯಕತೆ ಇದೆ.
ಇಂದಿನ ಯುವಕರೆ ಭಾರತದ ಭವಿಷ್ಯ, ಇಂತಹ ಕ್ರೀಡಾ ಚಟುವಟಿಕೆ ಪಕ್ಷಾತೀತವಾಗಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದರು. ಆಟೋಟದಲ್ಲಿ ಸರಣಿ ಶ್ರೇಷ್ಠ ಮಧು, ಉತ್ತಮ ಬ್ಯಾಟ್ಸ್‌ಮನ್ ಗಂಗೇಗೌಡ, ಉತ್ತಮ ಬೌಲರ್ ಆಗಿ ದರ್ಶನ್ ಹಾಗೂ ಅತಿಥೇಯ ತಂಡ ಅರೇಬೊಮ್ಮನಹಳ್ಳಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಸಮಾರೋಪ ಸಮಾರಂಭದಲ್ಲಿ ಬೂದಿಹಾಳ್ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ನಾಗರಾಜು, ವಿ.ಎಸ್.ಎಸ್.ಎನ್. ಸದಸ್ಯ ಲಕ್ಕಸಂದ್ರ ಗಂಗರಾಜು, ಮಾಜಿ ಅಧ್ಯಕ್ಷ ಹೊನ್ನರಾಯನಹಳ್ಳಿ ಮಂಜುನಾಥ್, ಗ್ರಾಮ ಪಂಚಾಯತಿ ಸದಸ್ಯ ಬ್ಯಾಡರಹಳ್ಳಿ ಅರುಣ್ ಕುಮಾರ್.
ಮಲೆನಾಡಿನಲ್ಲಿ ಕೊಂಚ ವಿರಾಮ ನೀಡಿದ ಮಳೆ, ಆದರೂ ನಿಂತಿಲ್ಲ ಸರಣಿ ಅನಾಹುತಗಳು
ರಂಗಸ್ವಾಮಿ, ಲಕ್ಷ್ಮಣ್, ನವೀನ್, ಮೆಳೇಕತ್ತಿಗನೂರು ಶ್ರೀನಿವಾಸ್, ತಾಳೇಕೆರೆ ಗಂಗಾಧರ್, ರವಿಕುಮಾರ್, ಮೋಟಗಾನಹಳ್ಳಿ ಜಗದೀಶ್, ಆಯೋಜಕರಾಗಿ ಚೇತನ್ ಕುಮಾರ್, ರಘು, ಕಿಟ್ಟಿ, ಚೇತನ್, ಸೇರಿದಂತೆ ಗ್ರಾಮ ಪಂಚಾಯತಿಯ ಎಲ್ಲಾ ಗ್ರಾಮಗಳ ನೂರಾರು ಮಂದಿ ಪ್ರೇಕ್ಷಕರು ಇದ್ದರು. ತಾಲೂಕಿನ ಅರೇಬೊಮ್ಮನಹಳ್ಳಿ ಗ್ರಾಮ ಪಂಚಾಯತಿ ಕ್ರೀಡಾಂಗಣದಲ್ಲಿ ಪಂಚಾಯತಿ ಪ್ರೀಮಿಯರ್ ಲೀಗ್ ಕ್ರಿಕೆಟ್ ವಿಜೇತರಾದ ತಾಳೇಕೆರೆ ತಂಡಕ್ಕೆ ಕಾಂಗ್ರೇಸ್ ಪಕ್ಷದ ವೀಕ್ಷಕ ಶ್ರೀನಿವಾಸ್ ಹಾಗೂ ಗ್ರಾ.ಪಂ. ಮಾಜಿ ಅಧ್ಯಕ್ಷ ಶೈಲೇಂದ್ರ, ಬೂದಿಹಾಳ್ ನಾಗರಾಜು, ಲಕ್ಕಸಂದ್ರ ಗಂಗರಾಜು ಬೃಹತ್ ಟ್ರೋಫಿ ಹಾಗೂ ನಗದು ಬಹುಮಾನ ನೀಡಿ ಆಟಗಾರರಿಗೆ ಅಭಿನಂದಿಸಿದರು.