Asianet Suvarna News Asianet Suvarna News

‘ಸರಕಾರದ ತಾರತಮ್ಯ ಧೋರಣೆಯೇ ಪ್ರತ್ಯೇಕ ರಾಜ್ಯದ ಕೂಗು’

ಪ್ರತ್ಯೇಕ ರಾಜ್ಯ ಕೂಗು ಕರ್ನಾಟಕ ಬಂದ್ ವರೆಗೆ ಬಂದು ನಿಂತಿದೆ. ಅತ್ತ ಉತ್ತರ ಕರ್ನಾಟಕ ಇತ್ತ ತುಳುನಾಡು ಪ್ರತ್ಯೇಕ ರಾಜ್ಯ. ಇನ್ನೊಂದೆಡೆ ಅಖಂಡ ಕರ್ನಾಟಕ ಚಿಂತನೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಸ್ವಾಮೀಜಿಗಳು ಧ್ವನಿ ಎತ್ತಿದ್ದಾರೆ.

Govt Discrimination Method turns Separate statehood : Dingaleshwar Swami
Author
Bengaluru, First Published Jul 30, 2018, 8:08 PM IST

ಹುಬ್ಬಳ್ಳಿ[ಜು.30]   ಆಡಳಿತರೂಢ ಸರ್ಕಾರದ ಮಲತಾಯಿ ಧೋರಣೆಯೇ ಪ್ರತ್ಯೇಕ ರಾಜ್ಯದ ಕೂಗಾಗಿದೆ ಎಂದು ಹುಬ್ಬಳ್ಳಿಯಲ್ಲಿ ಬಾಲೇಹೊಸುರಿನ ಪೀಠಾಧ್ಯಕ್ಷ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ. 

ಸಮ್ಮಿಶ್ರ ಸರ್ಕಾರ ಉತ್ತರ ಕರ್ನಾಟಕಕ್ಕೆ ಆಧ್ಯತೆ ನೀಡಿದ್ದರೆ ಇವತ್ತು ಪ್ರತ್ಯೇಕತೆಯ ಕೂಗು ಕೇಳುತ್ತಿರಲಿಲ್ಲ. ಈ ಕೂಗು ಈ ಭಾಗದ ಜನರ ಕೂಗು.ಪ್ರಾಂತ್ಯವಾರು ಭೇದ ತೋರದೇ ಸಮಗ್ರ ಕರ್ನಾಟಕದ ಅಭಿವೃದ್ಧಿ ಮಾಡಬೇಕಿತ್ತು ಎಂದು ಹೇಳಿದ್ದಾರೆ.

ಪ್ರತ್ಯೇಕ ರಾಜ್ಯ: ಯಾಕೆ ಬೇಕು? ಯಾಕೆ ಬೇಡ

ರಾಜ್ಯ ವಿಭಜನೆ ವಿಚಾರವಾಗಿ ಕುಮಾರಸ್ವಾಮಿಯವರು ಮಾಧ್ಯಮಗಳ ಮೇಲೆ ಗೂಬೆ ಕೂಡಿಸುವುದು ಸಲ್ಲ. ಯಾವ ಸಂದರ್ಭದಲ್ಲಿ ಯಾವ ಹೇಳಿಕೆ ನೀಡಬೇಕು ಎಂಬುದನ್ನು ಅರಿತುಕೊಳ್ಳಬೇಕು ಎಂದಿದ್ದಾರೆ.
 

Follow Us:
Download App:
  • android
  • ios