ಕೊರೋನಾ ಸೋಂಕಿನಿಂದ ಮೃತಪಟ್ಟ ಮಹಿಳೆಯೋರ್ವಳ ಶವದಲ್ಲಿದ್ದ ಚಿನ್ನದ ಸರ ಮಾಯವಾಗಿದ್ದು, ಈ ಸಂಬಂಧ ಕುಟುಂಬಸ್ಥರು ದೂರು ನೀಡಿದ್ದರು. ಬಳಿ ಈ ಬಗ್ಗೆ ತನಿಖೆಯನ್ನು ನಡೆಸಲಾಗಿದೆ.

ಚಿಕ್ಕಮಗಳೂರು (ಆ.25): ಕೋರೋನಾ ಸೋಂಕಿತೆಯ ಶವದಿಂದ 50 ಗ್ರಾಂ ತೂಕದ ಮಾಂಗಲ್ಯ ನಾಪತ್ತೆಯಾಗಿದ್ದು, ಕುಟುಂಬದವರ ದೂರಿನ ಮೇರೆಗೆ ತನಿಖೆ ನಡೆಸಿದ ವೇಳೆ ಶೌಚಾಲಯದಲ್ಲಿ ಪತ್ತೆಯಾದ ಘಟನೆ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತೇಗೂರು ಗ್ರಾಮದ ಪ್ರೇಮಕುಮಾರಿ ಆ.11ರ ರಾತ್ರಿ ಕೊರೋನಾಗೆ ಬಲಿಯಾಗಿದ್ದರು. ಅವರ ಕತ್ತಿನಲ್ಲಿದ್ದ 2 ಲಕ್ಷ ಮೌಲ್ಯದ ಮಾಂಗಲ್ಯ ಸರ ನಾಪತ್ತೆಯಾಗಿದೆ ಎಂದು ಕುಟುಂಬಸ್ಥರು ಲಿಖಿತ ದೂರು ನೀಡಿ, ಆಕೆಯ ಭಾವಚಿತ್ರಗಳನ್ನೂ ಸಲ್ಲಿಸಿದ್ದರು. 

ಸಿಬ್ಬಂದಿಯ ತನಿಖೆ ನಡೆಸಿದ್ದರೂ ಸರ ಪತ್ತೆಯಾಗಿರಲಿಲ್ಲ. ಆ.24ರ ಸೋಮವಾರ ಈ ವಿಷಯ ಮಾಧ್ಯಮಗಳಲ್ಲಿ ಬರುತ್ತಿದ್ದಂತೆ ಸರವನ್ನು ಕದ್ದವರು ಆಸ್ಪತ್ರೆಯ ಶೌಚಾಲಯದ ಚೇಂಬರ್‌ ಮೇಲೆ ಇರಿಸಿದ್ದಾರೆ. 

ಗುಡ್ ನ್ಯೂಸ್: ಸೋಮವಾರ ಕೊರೋನಾ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚು..!..

ಈ ಮೂಲಕ ಮಾಂಗಲ್ಯ ಸರ ಪತ್ತೆಯಾಗಿದೆ. ಆದರೆ, ಕದ್ದವರಾರು ಎಂಬುದು ಇನ್ನೂ ಗೊತ್ತಾಗಿಲ್ಲ.

ಈ ರೀತಿಯ ಪ್ರಕರಣಗಳು ಈ ಹಿಂದೆಯೂ ಅನೇಕ ಬಾರಿ ನಡೆದಿವೆ. ಮೃತದೇಹದ ಮೇಲಿನ ಚಿನ್ನವನ್ನು ಕದ್ದ ಪ್ರಕರಣಗಳು ವರದಿಯಾಗವೆ. ಇದೀಗ ಸೋಂಕಿತೆ ಚಿನ್ನವೂ ಕಳುವಾಗಿ ಬಳಿಕ ಪತ್ತೆ ಮಾಡಲಾಗಿದೆ.

ಕಲಬುರಗಿ: ಸಂಸದ ಡಾ.ಜಾಧವ್‌ ಕುಟುಂಬದ ಬಹುತೇಕರಿಗೆ ಕೊರೋನಾ ಸೋಂಕು...

ಇನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಕೊರೋನಾ ಸೋಂಕಿತರ ಸಂಖ್ಯೆ ದಿನದಿನಕ್ಕೂ ಏರಿಕೆಯಾಗುತ್ತಿದೆ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 3 ಸಾವಿರದ ಗಡಿ ದಾಟಿದೆ.