ಬೆಂಗಳೂರು, (ಆ.24): ರಾಜ್ಯದಲ್ಲಿ ಇಂದು (ಸೋಮವಾರ) 5,851 ಮಂದಿ ಕೊರೋನಾ ಪಾಸಿಟಿವ್ ಕೇಸ್ ಪತ್ತಯಾಗಿದ್ದು,  130 ಮಂದಿ  ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,83,665ಕ್ಕೆ ಏರಿಕೆಯಾಗಿದ್ದು,  4,810 ಜನರು ಕೊರೋನಾಗೆ ಬಲಿಯಾಗಿದ್ದಾರೆ. 

ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಆಕ್ರೋಶ, ಬಿಜೆಪಿ ಸೇರ್ತಾರ ಬಿಸಿಸಿಐ ಅಧ್ಯಕ್ಷ?ಆ.24ರ ಟಾಪ್ 10 ಸುದ್ದಿ!

ಇನ್ನು ಕಳೆದ 24 ಗಂಟೆಗಳಲ್ಲಿ ಸೋಂಕಿನಿಂದ ರಾಜ್ಯದಾದ್ಯಂತ 8,061 ಮಂದಿ ಗುಣಮುಖರಾಗಿದ್ದಾರೆ. ಈ ಮೂಲಕ ಸೋಮವಾರ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದ್ದು, ಇದು ಉತ್ತಮ ಬೆಳವಣಿಗೆಯಾಗಿದೆ.

ಇದುವರಗೆ 1,97,625 ಮಂದಿ ಗುಣಮುಖರಾಗಿದ್ದು, 82,677 ಸಕ್ರೀಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಿನ ಅಂಕಿ-ಸಂಖ್ಯೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೋಮವಾರ 1918 ಕೊರೋನಾ ಕೇಸ್ ಪತ್ತೆಯಾಗಿದ್ದು, 26 ಮಂದಿ ಬಲಿಯಾಗಿದ್ದಾರೆ.  ಇನ್ನು ಇವತ್ತು 2034 ಜನರು ಗುಣಮುರಾಗಿದ್ದು, 34,224 ಸಕ್ರೀಯ ಪ್ರಕರಣಗಳಿವೆ.