ಕಲಬುರಗಿ: ಸಂಸದ ಡಾ.ಜಾಧವ್‌ ಕುಟುಂಬದ ಬಹುತೇಕರಿಗೆ ಕೊರೋನಾ ಸೋಂಕು

ಸಂಸದ ಡಾ.ಉಮೇಶ ಜಾಧವ್‌ ಪತ್ನಿ, ಪುತ್ರಿ, ಸೊಸೆ (ಡಾ. ಅವಿನಾಶ ಪತ್ನಿ), ಕಾರ್‌ಗಳ ಚಾಲಕರು, ಇಬ್ಬರು ಆಪ್ತ ಸಹಾಯಕರು, ಕಚೇರಿ ಸಿಬ್ಬಂದಿ ಸೇರಿದಂತೆ 12 ಮಂದಿಗೆ ಕೋವಿಡ್‌ ಪಾಸಿಟಿವ್‌| ಈ ಕುರಿತು ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡ ಡಾ.ಉಮೇಶ ಜಾಧವ್‌| 

12 People Infected Coronavirus of MP Umesh Jadhav Family

ಕಲಬುರಗಿ(ಆ.24): ಕೊರೋನಾ ಸೋಂಕಿನಿಂದ ಈಗಾಗಲೇ ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಗೊಳಗಾಗಿರುವ ಕಲಬುರಗಿ ಸಂಸದ ಡಾ.ಉಮೇಶ ಜಾಧವ್‌, ಚಿಂಚೋಳಿ ಶಾಸಕ, ಹಾಗೂ ಜಾಧವ್‌ ಪುತ್ರ ಡಾ. ಅವಿನಾಶ್‌ ಇವರಿಬ್ಬರ ಕುಟುಂಬ ವರ್ಗದ ಬಹುತೇಕ ಸದಸ್ಯರಿಗೆ ಕೊರೋನಾ ಸೋಂಕು ಧೃಢಪಟ್ಟಿದೆ. 

ಈ ವಿಚಾರವನ್ನು ಸಂಸದ ಡಾ.ಜಾಧವ್‌ ಅವರೇ ಟ್ವಿಟ್‌ನಲ್ಲಿ ಖಡಿತಪಡಿಸಿದ್ದಾರೆ. ತಮ್ಮ ಪತ್ನಿ, ಪುತ್ರಿ, ಸೊಸೆ (ಡಾ. ಅವಿನಾಶ ಪತ್ನಿ), ಕಾರ್‌ಗಳ ಚಾಲಕರು, ಇಬ್ಬರು ಆಪ್ತ ಸಹಾಯಕರು, ಕಚೇರಿ ಸಿಬ್ಬಂದಿ ಸೇರಿದಂತೆ 12 ಮಂದಿಗೆ ಕೋವಿಡ್‌ ಪಾಸಿಟಿವ್‌ ಖಚಿತವಾಗಿದೆ. 

ಕಲಬುರಗಿ: ಸಂಸದ ಉಮೇಶ ಜಾಧವ್‌ ಪುತ್ರ, ಶಾಸಕ ಅವಿನಾಶ್‌ ಇಬ್ಬರಿಗೂ ಕೊರೋನಾ

ಡಾ. ಅವಿನಾಶ್‌ ಜಾಧವ್‌ ಇವರ ಚಾಲಕ, ಪಿಎ ಹಾಗೂ ಇತರೆ ಸಿಬ್ಬಂದಿಗಳನ್ನೂ ಕ್ವಾರಂಟೈನ್‌ ಆಗುವಂತೆ ಕೋರಿದ್ದೇವೆ ಎಂದು ಡಾ. ಜಾಧವ್‌ ಟ್ವೀಟರ್‌ನಲ್ಲಿ ಹೇಳಿದ್ದಾರೆ. ಕಳೆದ 5 ತಿಂಗಳಿಂದ ಕೊರೋನಾ ಪಿಡುಗಿನಲ್ಲೇ ತಮ್ಮ ಜೊತೆ ಹಗಲು- ರಾತ್ರಿ ಎನ್ನದೆ ಇವರೆಲ್ಲರು ಸಿಬ್ಬಂದಿ ವರ್ಗ ಓಡಾಡಿಕೊಂಡಿರೋದರಿಂದ ಸೋಂಕು ತಗುಲಿದೆ. ಇವೆರಲ್ಲರ ಜನಮುಖಿ ಸೇವೆಗೆ ತಾವು ಚಿರಋುಣಿ ಎಂದು ಡಾ. ಜಾಧವ್‌ ಟ್ವೀಟ್‌ ಮಾಡಿದ್ದಾರೆ.
 

Latest Videos
Follow Us:
Download App:
  • android
  • ios