Corona Crisis: 200 ವರ್ಷಗಳ ಐತಿಹಾಸಿಕ ಗವಿಸಿದ್ದೇಶ್ವರ ಜಾತ್ರೆಗೆ ಬ್ರೇಕ್ ಹಾಕಿದ ವೈರಸ್
* ಧಾರ್ಮಿಕ ವಿಧಿ-ವಿಧಾನಗಳಿಗೆ ಸೀಮಿತವಾದ ಜಾತ್ರೆ
* ಸಾರ್ವಜನಿಕವಾಗಿ ನಡೆಯುತ್ತಿದ್ದ ಆಚರಣೆಗಳೆಲ್ಲಕ್ಕೂ ಬ್ರೇಕ್
* 200 ವರ್ಷದಲ್ಲೇ ಮೊದಲ ಸಲ ಗವಿಸಿದ್ದೇಶ್ವರ ಜಾತ್ರೆ ರದ್ದು
ಕೊಪ್ಪಳ(ಜ.14): ಕೋವಿಡ್(Covid-19) ಹೆಚ್ಚಾಗುತ್ತಿರುವುದರಿಂದ ಜ. 19ರಿಂದ ಮೂರು ದಿನ ನಡೆಯಬೇಕಿದ್ದ ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಕೊಪ್ಪಳದ(Koppal) ಶ್ರೀಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ(Gavisiddeshwara Fair) ಎಲ್ಲ ಕಾರ್ಯಕ್ರಮಗಳನ್ನು ಸಂಪೂರ್ಣ ರದ್ದುಗೊಳಿಸಿ ಗವಿಮಠ(Gavimatha)ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದೆ.
ಶ್ರೀಮಠದ ಭಕ್ತರು(Devotees), ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ಶ್ರೀಮಠ ತಿಳಿಸಿದೆ. ಸಂಪ್ರದಾಯ ಮುರಿಯದಂತೆ ಸರಳವಾಗಿ ಶ್ರೀಮಠದ ಧಾರ್ಮಿಕ ವಿಧಿ-ವಿಧಾನಗಳನ್ನು(Religious Rituals) ಮಾತ್ರ ಆಚರಿಸಿ ಹಾಗೂ ಕತುೃ ಗದ್ದುಗೆಯ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿ, ಉಳಿದೆಲ್ಲ ಕಾರ್ಯಕ್ರಮ ರದ್ದು ಪಡೆಸಿದ್ದು ಸೋಂಕು ಮತ್ತಷ್ಟು ಉಲ್ಬಣವಾದರೆ ಶ್ರೀಮಠದ ಪ್ರವೇಶವನ್ನು ಸಹ ನಿರ್ಬಂಧಿಸಲಾಗುವುದು ಎಂದು ತಿಳಿಸಿದೆ. ಭಕ್ತರು ಇದಕ್ಕೆ ಸಹಕರಿಸುವಂತೆ ಕೋರಲಾಗಿದೆ.
Kumbh Mela of South India: ಕೊಪ್ಪಳದ ಗವಿಸಿದ್ಧೇಶ್ವರ ಮಹಾರಥೋತ್ಸವಕ್ಕೆ ದಿನಗಣನೆ
ಮೊದಲ ಬಾರಿಗೆ ರದ್ದು:
ಗವಿಮಠದ 11ನೇ ಪೀಠಾಧಿಪತಿಗಳಾದ ಶ್ರೀಗವಿಸಿದ್ಧೇಶ್ವರ ಶ್ರೀಗಳು(Gavisiddeshwara Swamiji) ಜೀವಂತ ಸಮಾಧಿಯಾದ ಪ್ರತೀಕವಾಗಿ ಅರಾಧನೆಯ ಮಹೋತ್ಸವದ ಅಂಗವಾಗಿ ಜಾತ್ರೆ ನಡೆಸಲಾಗುತ್ತಿದೆ. 1816ರಲ್ಲಿ ಪ್ರಾರಂಭವಾಗಿರುವ ಜಾತ್ರಾ ಮಹೋತ್ಸವ ವರ್ಷದಿಂದ ವರ್ಷಕ್ಕೆ ವಿಜೃಂಭಣೆಯಿಂದ ನಡೆದು ದಕ್ಷಿಣ ಭಾರತದ ಕುಂಭಮೇಳ(Kumbh Mela of South India) ಖ್ಯಾತಿ ಪಡೆದಿತ್ತು. 206 ವರ್ಷಗಳ ಸುದೀರ್ಘ ಇತಿಹಾಸವಿರುವ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ ಇದುವರೆಗೂ ರದ್ದಾಗಿರುವ ಉದಾಹರಣೆ ಇಲ್ಲ. ಇದೇ ಮೊದಲ ಬಾರಿಗೆ ಕೊರೋನಾ(Coronavirus) ಹಿನ್ನೆಲೆ ರದ್ದುಪಡಿಸಲಾಗಿದೆ.
ಈ ಹಿಂದೆ ಭೀಕರ ಬರ(Drought) ಬಂದಾಗಲೂ ಮತ್ತು ಮಾರಕ ಕಾಯಿಲೆಯ ಸಂದರ್ಭದಲ್ಲಿಯೂ ಸರಳವಾಗಿ ಶ್ರೀಗವಿಸಿದ್ಧೇಶ್ವರ ಮಹಾರಥೋತ್ಸವವನ್ನು ನಡೆಸಿಕೊಂಡು ಬರಲಾಗಿದೆ.
ನೂರಾರು ಕೋಟಿ ಹಾನಿ:
ಗವಿಸಿದ್ಧೇಶ್ವರ ಜಾತ್ರೆಯ ನೆಪದಲ್ಲಿ ಕೊಪ್ಪಳದಲ್ಲಿ ತಿಂಗಳ ಕಾಲಾವಧಿಯಲ್ಲಿಯೇ ನೂರಾರು ಕೋಟಿ ರುಪಾಯಿ ವಹಿವಾಟು ನಡೆಯುತ್ತಿತ್ತು. ಇದೀಗ ಇದಕ್ಕೂ ಬ್ರೇಕ್ ಬಿದ್ದಿದೆ. ಕಳೆದ ವರ್ಷ ಕೋವಿಡ್ ಇದ್ದರೂ ಸಂಜೆ ನಡೆಯುತ್ತಿದ್ದ ಮಹಾರಥೋತ್ಸವನ್ನು ಬೆಳಗ್ಗೆಯೇ ಎಳೆಯಲಾಯಿತು. ಈ ಬಾರಿ ಮಹಾರಥೋತ್ಸವ ನಡೆಯುವ ಕುರಿತು ಪ್ರಕಟಣೆಯಲ್ಲಿ ಯಾವುದೇ ಮಾಹಿತಿ ಇಲ್ಲ. ಜಾತ್ರೆಯ ಎಲ್ಲ ಕಾರ್ಯಕ್ರಮಗಳನ್ನು ಸಂಪೂರ್ಣ ರದ್ದುಪಡಿಸಲಾಗಿದೆ ಎಂದು ಹೇಳಿರುವುದರಿಂದ ರಥೋತ್ಸವವನ್ನೂ ರದ್ದು ಮಾಡಲಾಗಿದೆಯಾ? ಅಥವಾ ಸಾಂಕೇತಿಕವಾಗಿಯಾದರೂ ಪರಂಪರೆಯಂತೆ ಮಹಾರಥೋತ್ಸವ ನಡೆಸಲಾಗುತ್ತದೆಯೇ ಕಾದು ನೋಡಬೇಕಿದೆ.
ಶ್ರೀಮಠದ ಭಕ್ತರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಂಪ್ರದಾಯ ಮುರಿಯದಂತೆ ಸರಳವಾಗಿ ಶ್ರೀಮಠದ ಧಾರ್ಮಿಕ ವಿಧಿವಿಧಾನಗಳನ್ನು ಮಾತ್ರ ಆಚರಿಸಿ ಹಾಗೂ ಕತುೃ ಗದ್ದುಗೆಯ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿ, ಉಳಿದೆಲ್ಲ ಕಾರ್ಯಕ್ರಮ ರದ್ದುಪಡಿಸಲಾಗಿದೆ ಅಂತ ಗವಿಸಿದ್ಧೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.
Shri Gavisiddeshwara Swamiji: ಕೊಪ್ಪಳದ ಜಲಋಷಿ ಪಟ್ಟಾಭಿಷೇಕಕ್ಕೆ 19 ವರ್ಷ..!
1816ರಿಂದ ಪ್ರಾರಂಭವಾಗಿರುವ ಶ್ರೀಗವಿಸಿದ್ಧೇಶ್ವರ ಜಾತ್ರೆಮಹೋತ್ಸವ ಈ ವರೆಗೂ ರದ್ಧಾಗಿರುವ ಉದಾಹರಣೆ ಇಲ್ಲ. ಇದೇ ಮೊದಲ ಬಾರಿಗೆ ರದ್ದಾಗುತ್ತಿದೆ. ಆದರೂ ಸಂಪ್ರದಾಯ ಮುರಿಯಬಾರದು ಅಂತ ನಿವೃತ್ತ ಶಿಕ್ಷಕ ಎಸ್.ಎಂ. ಕಂಬಾಳಿಮಠ ತಿಳಿಸಿದ್ದಾರೆ.
ಗವಿಮಠ ಶ್ರೀಗಳ ಪಾದುಕೆ ತಲೆ ಮೇಲಿಟ್ಟುಕೊಂಡು ಅಚ್ಚರಿ ಮೂಡಿಸಿದ ವಿನಯ ಗುರೂಜಿ
ಅವಧೂತ ವಿನಯ ಗುರೂಜಿ ಅವರು ಆ.30ರಂದು ಗವಿಮಠಕ್ಕೆ ಭೇಟಿ ನೀಡಿದ್ದ ವೇಳೆ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಪಾದುಕೆಗಳನ್ನು ತಮ್ಮ ತಲೆಯ ಮೇಲಿಟ್ಟುಕೊಂಡು ಅಚ್ಚರಿ ಮೂಡಿಸಿದ್ದರು. ಕರ್ತೃ ಗದ್ದುಗೆಗೆ ಬಿಲ್ವಾರ್ಚನೆಯ ಪೂಜೆ ನೆರವೇರಿಸಿ, ಸುಮಾರು ಹೊತ್ತು ಕರ್ತೃ ಗದ್ದುಗೆಯ ಪಕ್ಕದಲ್ಲಿಯೇ ಕುಳಿತು ಧ್ಯಾನ ಮಾಡಿದ್ದರು.
ಬಳಿಕ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಭಕ್ತರಿಗೆ ದರ್ಶನ ನೀಡುತ್ತಿದ್ದ ಸ್ಥಳಕ್ಕೆ ಹೋಗಿ, ಅಲ್ಲಿ ಏಕಾಏಕಿ ಗವಿಮಠ ಶ್ರೀಗಳ ಪಾದುಕೆಗಳನ್ನು ತಲೆಯ ಮೇಲಿಟ್ಟುಕೊಂಡು, ಕೆಲಹೊತ್ತು ಧ್ಯಾನ ಮಾಡಿದ್ದರು. ಗವಿಮಠ ಶ್ರೀಗಳು ಬೇಡವೆನ್ನುತ್ತಿರುವಾಗಲೇ ಅವರು ಪಾದುಕೆಗಳನ್ನು ತೆಗೆದುಕೊಂಡು ತಲೆಯ ಮೇಲೆ ಇಟ್ಟುಕೊಂಡಿದ್ದು ಅಚ್ಚರಿಗೆ ಕಾರಣವಾಗಿದೆ. ಇದಾದ ಮೇಲೆ ಶ್ರೀಗಳೊಂದಿಗೆ ಕುಶಲೋಪರಿ ಮಾತುಗಳನ್ನಾಡಿದ್ದರು.