Kumbh Mela of South India: ಕೊಪ್ಪಳದ ಗವಿಸಿದ್ಧೇಶ್ವರ ಮಹಾರಥೋತ್ಸವಕ್ಕೆ ದಿನಗಣನೆ

*  ಜ. 19ರಂದು ನಡೆಯಲಿರುವ ರಥೋತ್ಸವ
*  ಜಾತ್ರಾ ಸಿದ್ಧತೆಗಳು ಅಷ್ಟಾಗಿ ಕಾಣುತ್ತಿಲ್ಲ
*  ಗವಿಮಠ ಜಾತ್ರೆಯಲ್ಲಿಯೂ ಸರ್ಕಾರದ ನಿಯಮಾವಳಿ ಪಾಲನೆ 
 

Days Countdown to Gavisiddeshwara Fair in Koppal grg

ಸೋಮರಡ್ಡಿ ಅಳವಂಡಿ

ಕೊಪ್ಪಳ(ಜ.06):  ಸುಪ್ರಸಿದ್ಧ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವಕ್ಕೆ(Gavisiddeshwara Fair) ದಿನಗಣನೆ ಆರಂಭವಾಗಿದೆ. ಆದರೆ, ಕೊರೋನಾ(Coronavirus) ಹೆಚ್ಚಳದಿಂದ ಸರ್ಕಾರ(Government of Karnataka) ಎರಡು ವಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ ಜಾತ್ರಾ ಮಹೋತ್ಸವ ನೆರವೇರಲಿದೆಯೇ ಎಂಬ ಪ್ರಶ್ನೆ ಭಕ್ತರಲ್ಲಿ ಮೂಡಿದೆ.

ಜ. 19ರಂದು ಮಹಾರಥೋತ್ಸವ ಇದ್ದರೂ ವಾರಕ್ಕೂ ಮೊದಲೆ ಜಾತ್ರಾ ಕಾರ್ಯಕ್ರಮಗಳು ನಡೆಯುತ್ತವೆ. ಸಿದ್ಧತೆಗಳು ತಿಂಗಳ ಮೊದಲೇ ಆಗಬೇಕಾಗುತ್ತದೆ. ಆದರೆ, ಈ ಬಾರಿ ಕೋವಿಡ್‌(Covid19) ಹೆಚ್ಚಳದ ಹಿನ್ನೆಲೆ ಈ ವರೆಗೂ ಜಾತ್ರಾ ಸಿದ್ಧತೆಗಳು ಅಷ್ಟಾಗಿ ಕಾಣುತ್ತಿಲ್ಲ. ಈ ನಡುವೆ ಕೊರೋನಾ ತಡೆಗೆ ಕಟ್ಟುನಿಟ್ಟು ಕ್ರಮಕೈಗೊಳ್ಳುವ ಜತೆಗೆ ವಿಕೇಂಡ್‌ ಕರ್ಫ್ಯೂ(Weekend Curfew) ಜಾರಿಗೊಳಿಸಿರುವುದು ಜಾತ್ರಾ ಸಿದ್ಧತೆಗೆ ಹಿನ್ನಡೆಯಾಗಿದೆ.

ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆ: ಸರಳತೆಯಲ್ಲೂ ಉಕ್ಕುತ್ತಿದೆ ಭಕ್ತಿ..!

ಕಳೆದ ವರ್ಷದಂತೆ ಈ ವರ್ಷವೂ ಸರಳವಾಗಿ ಆಚರಣೆ ಮಾಡಲಾಗುತ್ತದೆಯೇ, ಮಹಾರಥೋತ್ಸವ ಹೇಗೆ ನಡೆಯುತ್ತದೆ ಎನ್ನುವ ಚರ್ಚೆಗಳು ಶುರುವಾಗಿವೆ. ಜಾತ್ರೆ ನಡೆಸಬೇಕು ಎಂದು ಅಪಾರ ಭಕ್ತ(Devotees) ಸಮೂಹ ಹೇಳುತ್ತಿದ್ದರೂ ಜನರ ಆರೋಗ್ಯ(Health) ದೃಷ್ಟಿಯಿಂದ ಜಾತ್ರೆಯನ್ನು ಕೈಬಿಡುವ ಸಾಧ್ಯತೆ ಅಧಿಕ ಎನ್ನಲಾಗುತ್ತಿದೆ. ಆದರೆ, ಶ್ರೀಮಠ ಈ ಕುರಿತು ಇದುವರೆಗೆ ಯಾವುದೇ ಅಧಿಕೃತ ಪ್ರಕಟಣೆ ಬಿಡುಗಡೆಯಾಗಿಲ್ಲ.

ಕಳೆದ ವರ್ಷ ಕೊರೋನಾ ಹೆಚ್ಚಳದಿಂದ ಸರಳವಾಗಿ ರಥೋತ್ಸವ ನಡೆಸಿ ಸಂಪ್ರದಾಯಕ್ಕೆ ಸೀಮಿತಗೊಳಿಸಲಾಗಿತ್ತು. ಆದರೆ, ‘ಸರಳ ಜಾತ್ರೆ ಸಮಾಜಮುಖಿ ಸೇವೆಗೆ’ ಅರ್ಪಣೆ ಎನ್ನುವ ತತ್ವ ಘೋಷಿಸಿದ್ದ ಗವಿಸಿದ್ಧೇಶ್ವರ ಶ್ರೀಗಳು ಮೂರು ಮಹತ್ವದ ಸಮಾಜಮುಖಿ ಕಾರ್ಯಕ್ರಮ ಕೈಗೊಂಡಿದ್ದರು. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಗ್ರಂಥಾಲಯ, ಗಿಣಿಗೇರಿ ಕೆರೆ ಪುನಶ್ಚೇತನ ಕಾಮಗಾರಿಗೆ ಚಾಲನೆ, ಕುಕನೂರು ತಾಲೂಕಿನ ಅಡವಿಹಳ್ಳಿಯ ಅಭಿವೃದ್ಧಿ ಕೈಗೆತ್ತಿಕೊಂಡಿದ್ದರು. ಈಗ ಅವುಗಳೆಲ್ಲ ಬಹುತೇಕ ಪೂರ್ಣಗೊಂಡಿವೆ.

ಈ ವರ್ಷವೇನು?:

ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ ಪ್ರಸಕ್ತ ವರ್ಷ ಹೇಗೆ ಆಚರಿಸಲಾಗುತ್ತದೆ ಎಂಬ ಮಾತು ಬೇರೆ. ಜಾತ್ರೆಯ ನಿಮಿತ್ತ ಸಮಾಜಮುಖಿ ಕಾರ್ಯಕ್ರಮಗಳು ಏನು ಎನ್ನುವ ಕುತೂಹಲ ಜನರಲ್ಲಿದೆ. ಜಾತ್ರೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವುದರಿಂದ ಈ ವರ್ಷದ ಜಾತ್ರೆ ಏನಾಗುತ್ತದೆ? ಹೇಗೆ ಆಚರಿಸಲಾಗುತ್ತದೆ? ಎನ್ನುವ ಕುರಿತು ಚರ್ಚೆ ನಡೆಯುತ್ತಿದ್ದು ಗವಿಮಠವೆ ಉತ್ತರಿಸಬೇಕಿದೆ.

ಗವಿಮಠ ಜಾತ್ರೆಯಲ್ಲಿಯೂ ಸರ್ಕಾರದ ನಿಯಮಾವಳಿ ಪಾಲಿಸಲಾಗುವುದು. ಕೋವಿಡ್‌ ನಿಯಂತ್ರಕ್ಕಾಗಿ ಸರ್ಕಾರದ ಗೈಡ್‌ಲೈನ್‌ನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುವುದು ಅಂತ ಕೊಪ್ಪಳ ಡಿಸಿ ವಿಕಾಸ ಕಿಶೋರ ಸುರಳ್ಕರ್‌ ತಿಳಿಸಿದ್ದಾರೆ.

ಕೊಪ್ಪಳ: ಈ ವರ್ಷ ‘ಪರಿಸ್ಥಿತಿ ಸ್ನೇಹಿ’ ಗವಿಮಠ ಜಾತ್ರೆ

ಜಾತ್ರೆಗೆ ಒಮಿಕ್ರೋನ್‌ ಕರಿನೆರಳು

ನಾಡಿನ ಸುಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಕೊಪ್ಪಳದ(Koppal) ಗವಿಸಿದ್ಧೇಶ್ವರ ಜಾತ್ರಾಮಹೋತ್ಸವಕ್ಕೆ(Gavisiddeshwara Fair) ಈ ವರ್ಷವೂ ಕೋವಿಡ್‌ ರೂಪಾಂತರಿ ವೈರಸ್‌ ಒಮಿಕ್ರೋನ್‌(Omicron) ಕರಿನೆರಳು ಬೀಳುವ ಸಾಧ್ಯತೆ ಇದ್ದು ತಯಾರಿಗೆ ಹಿನ್ನಡೆಯಾಗಿದೆ. ಜ. 19ರಂದು ಮಹಾರಥೋತ್ಸವ ನಡೆಯಬೇಕಿದ್ದು ಅಂದಿನಿಂದ ಜಾತ್ರೆ ಹದಿನೈದು ದಿನಗಳ ಕಾಲ ನಿರಂತರವಾಗಿ ನಡೆಯಬೇಕಾಗಿತ್ತು. ನಿತ್ಯವೂ ಲಕ್ಷಾಂತರ ಭಕ್ತರಿಗೆ(Devotees) ಪ್ರಸಾದ ಕಲ್ಪಿಸಲಾಗುತ್ತಿತ್ತು. ರಥೋತ್ಸವ ದಿನದಂದು ಐದಾರು ಲಕ್ಷ ಜನರು ಸೇರುವ ದೊಡ್ಡ ಜಾತ್ರೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರಮಟ್ಟದಲ್ಲಿಯೇ ಸದ್ದು ಮಾಡುತ್ತಿದೆ. ಆದರೆ, ಈಗಾಗಲೇ ನಡೆಯಬೇಕಾಗಿದ್ದ ಸಿದ್ಧತೆಗೆ ಒಮಿಕ್ರೋನ್‌ ಅಬ್ಬರದ ಆತಂಕ ಹಿನ್ನಡೆ ಮಾಡಿದೆ.

ತಜ್ಞರ ವರದಿಯ ಪ್ರಕಾರ ಜನವರಿ ವೇಳೆಗೆ ಪ್ರತಿ ನಿತ್ಯವೂ ಲಕ್ಷ ಒಮಿಕ್ರೋನ್‌ ಕೇಸ್‌ಗಳು ಪತ್ತೆಯಾಗುತ್ತವೆ ಎಂದು ಹೇಳಿರುವ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ ಸರ್ಕಾರ(Government of Karnataka) ಮುನ್ನೆಚ್ಚರಿಕೆ ಕ್ರಮಕೈಗೊಂಡು ನಿರ್ಬಂಧಗಳನ್ನು ಹೇರಿದೆ. ಅಲ್ಲದೆ ಹೊಸ ವರ್ಷ ಆಚರಣೆಗೂ ನಿರ್ಬಂಧ ಹೇರಲು ಮುಂದಾಗಿರುವುದರಿಂದ ಸಹಜವಾಗಿಯೇ ಗವಿಸಿದ್ಧೇಶ್ವರ ಜಾತ್ರೆ ಈ ವರ್ಷವೂ ನಡೆಯುವುದಿಲ್ಲವೇ ಎನ್ನುವ ಆತಂಕ ಎದುರಾಗಿದೆ.
 

Latest Videos
Follow Us:
Download App:
  • android
  • ios