ಚಿಕ್ಕಮಗಳೂರು(ಆ.17): ಬಾಳೆಹೊನ್ನೂರಿನಲ್ಲಿ ನೆರೆ ಹಾವಳಿಗೆ ತುತ್ತಾಗಿ ಸಂತ್ರಸ್ತರಾದ ಕುಟುಂಬಗಳಿಗೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ 3 ಲಕ್ಷಕ್ಕೂ ಅಧಿಕ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಶುಕ್ರವಾರ ನೆರೆ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರ ಕುಟುಂಬಗಳಿಗೆ ಹಸ್ತಾಂತರಿಸಲಾಯಿತು.

200 ಗ್ಯಾಸ್ ಸ್ಟೌ:

ಪಟ್ಟಣದ ವೈದ್ಯರಾದ ಡಾ. ಎಂ.ಬಿ. ರಮೇಶ್‌, ಡಾ.ಸುನೀಲ್‌ ಕುಮಾರ್‌ ರೈ ಸಂಯೋಜನೆಯಲ್ಲಿ ಗೃಹೋಪಯೋಗಿ ವಸ್ತುಗಳ ವಿತರಣಾ ಕಾರ್ಯಕ್ರಮ ಆಯೋಜಿಸಿದ್ದು, ಪಟ್ಟಣದ ಭದ್ರಾ ಸ್ಪೋಟ್ಸ್‌ರ್‍ ಕ್ಲಬ್‌, ಡಾ.ರೋಷನ್‌, ಡಾ.ಪುರುಷೋತ್ತಮ್‌ ಭಂಡಾರಿ, ಡಾ.ಸುನೀಲ್‌ ರೈ, ಡಾ.ರಮೇಶ್‌ ಹಾಗೂ ರಯಾನ್‌ ಅರಾನ್ಹ ಅವರ ಸಹಕಾರದಲ್ಲಿ 200 ಗ್ಯಾಸ್‌ ಸ್ಟೌಗಳನ್ನು ಖರೀದಿಸಿದ್ದು, ಬಾಳೆಹೊನ್ನೂರಿನ 110, ಮಾಗುಂಡಿಯ 70 ಹಾಗೂ ಸಂಗಮೇಶ್ವರಪೇಟೆಯ 20 ಸಂತ್ರಸ್ತರ ಕುಟುಂಬಗಳಿಗೆ ನೀಡಲಾಯಿತು.

ಇಂಡಿಯನ್‌ ಮೆಡಿಕಲ್‌ ಅಸೋಸಿಯೇಷನ್‌, ಕೊಪ್ಪ ಲಯನ್ಸ್‌ ಕ್ಲಬ್‌, ಬಾಳೆಹೊನ್ನೂರು ರೋಟರಿ ಕ್ಲಬ್‌, ಕೊಪ್ಪ ರೋಟರಿ ಕ್ಲಬ್‌, ಆಯುಷ್‌ ವೈದ್ಯರ ಸಂಘ ಚಿಕ್ಕಮಗಳೂರು, ಬಂಟರ ಯಾನೆ ನಾಡವರ ಸಂಘ, ಡಾ. ಕೆ.ಜಿ. ಭಟ್‌ ಅವರ ಸಹಕಾರದಲ್ಲಿ 180 ಸೆಟ್‌ ಅಡುಗೆ ಪಾತ್ರೆ ಪರಿಕರಗಳನ್ನು ಖರೀದಿಸಿ ಬಾಳೆಹೊನ್ನೂರಿನ 110 ಹಾಗೂ ಮಾಗುಂಡಿಯ 70 ಕುಟುಂಬಗಳಿಗೆ ವಿತರಿಸಲಾಯಿತು. ಪಾತ್ರೆ ಸೆಟ್‌ನಲ್ಲಿ ತಲಾ 2 ಪಾತ್ರೆ, ಮುಚ್ಚಳ, ತಟ್ಟೆ, ಲೋಟ, ಬೌಲ್‌ ಹಾಗೂ ಸೌಟುಗಳು ಇದ್ದವು.

ಚಿಕ್ಕಮಗಳೂರು: ಜಿಲ್ಲೆ ಹಲವೆಡೆ ವಾಹನ ಸಂಚಾರಕ್ಕೆ ನಿರ್ಬಂಧ

ಡಾ. ಎಂ.ಬಿ. ರಮೇಶ್‌, ಡಾ.ರಾಮಚಂದ್ರ, ಡಾ.ಉದಯಶಂಕರ್‌, ಡಾ.ಅನಿತ ರಾವ್‌, ಡಾ.ನಾಗೇಶ್‌ ಪೈ, ಡಾ.ಸುನೀಲ್‌ ಕುಮಾರ್‌ ರೈ, ಭದ್ರಾ ಸ್ಪೋಟ್ಸ್‌ರ್‍ ಕ್ಲಬ್‌ನ ದಿವಿನ್‌ರಾಜ್‌, ಸಂತ್ರಸ್ತರ ಕೇಂದ್ರದ ನೋಡಲ್‌ ಅಧಿಕಾರಿ ನಾಗರಾಜ್‌, ಕಂದಾಯ ನಿರೀಕ್ಷಕ ನಾಗೇಂದ್ರ, ಗ್ರಾಪಂ ಅಧ್ಯಕ್ಷ ಮಹಮ್ಮದ್‌ ಹನೀಫ್‌, ತಾಲೂಕು ಬಿಜೆಪಿ ಅಧ್ಯಕ್ಷ ಭಾಸ್ಕರ್‌ ವೆನಿಲ್ಲಾ, ತಾಪಂ ಉಪಾಧ್ಯಕ್ಷ ಹೊಳೆಬಾಗಿಲು ಮಂಜು, ಎಂಎಡಿಬಿ ಮಾಜಿ ಅಧ್ಯಕ್ಷೆ ಬಿ.ಸಿ.ಗೀತಾ, ರೋಟರಿ ಅಧ್ಯಕ್ಷ ಯೋಗೀಶ್‌, ಕೊಪ್ಪ ಲಯನ್ಸ್‌ ಅಧ್ಯಕ್ಷ ಶಂಕರಪ್ಪ, ಕೊಪ್ಪ ರೋಟರಿ ಅಧ್ಯಕ್ಷ ರಮೇಶ್‌, ಎಚ್‌.ಆರ್‌. ರೋಹಿತ್‌, ದೀಪಕ್‌, ರೆನ್ನಿ ದೇವಯ್ಯ ಮತ್ತಿತರರು ಉಪಸ್ಥಿತರಿದ್ದರು.