ಚಿಕ್ಕಮಗಳೂರು(ಆ.17): ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ ಮತ್ತು ಎನ್‌.ಆರ್‌.ಪುರ ತಾಲೂಕುಗಳಲ್ಲಿ ಕಳೆದ ಒಂದು ವಾರದಲ್ಲಿ ಬಿದ್ದಂತಹ ಭಾರೀ ಮಳೆಯಿಂದಾಗಿ ಭಾರಿ ಪ್ರಮಾಣದ ಭೂ ಕುಸಿತ ಉಂಟಾಗಿ ರಸ್ತೆ, ಸೇತುವೆ, ಮೋರಿಗಳು ಹಾನಿಯಾಗಿವೆ.

ವಾಹನ ಸಂಚಾರಿಸಲು ಕಷ್ಟಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯಲ್ಲಿ ಬರುವ ರಸ್ತೆಗಳ ಪುನರ್‌ ಸ್ಥಾಪನಾ ಕಾರ್ಯ ಪ್ರಗತಿಯಲ್ಲಿರುವ ಕಾರಣ ಈ ಕೆಳಕಂಡ ರಸ್ತೆಗಳಲ್ಲಿ ವಾಹನಗಳ ಸಂಚಾರವನ್ನು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಅವರು ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.

ಮೂಡಿಗೆರೆಯಲ್ಲಿ ಎಲ್ಲೆಲ್ಲಿ ಮಾರ್ಗ ಬದಲಾವಣೆ:

ಮೂಡಿಗೆರೆ ತಾಲೂಕಿನ ಗಂಗಾ ಮೂಲ, ಕೊಟ್ಟಿಗೆಹಾರ ರಾಜ್ಯ ಹೆದ್ದಾರಿ 66 ಕೊಟ್ಟಿಗೆಹಾರ- ಬಾಳೂರು- ನಿಡುವಾಳೆ- ಮಾಗುಂಡಿ- ಬಾಳೆಹೊಳೆ, ಕಳಸ- ಸಂಸ- ಕುದುರೆಮುಖ 91.31 ಕಿ.ಮೀ. ವ್ಯಾಪ್ತಿಯಲ್ಲಿ ಆ.17 ರವರೆಗೆ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಬದಲಿ ಮಾರ್ಗವಾಗಿ ಚಿಕ್ಕಮಗಳೂರಿನಿಂದ ಹೊರನಾಡಿಗೆ ಹೋಗುವ ವಾಹನಗಳು ಚಿಕ್ಕಮಗಳೂರು- ಆಲ್ದೂರು- ಬಾಳೆಹೊನ್ನೂರು- ಮಾಗುಂಡಿ- ಬಾಳೆಹೊಳೆ- ಕಳಸ ಮಾರ್ಗವಾಗಿ ಸಂಚರಿಸಬೇಕು.

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬಿಡುವು ಕೊಟ್ಟ ಮಳೆ

ಮೂಡಿಗೆರೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ- 106ರ ಹೊರನಾಡು- ಕಳಸ- ಹೆಬ್ಬಾಳೆ ಸೇತುವೆ- ಮರಸಣಿಗೆ- ಹಿರೇಬೈಲು- ಅಬ್ಬರಗುಡಿಗೆ- ಮಾಸ್ತಿಖಾನ್‌ ಎಸ್ಟೇಟ್‌- ಸುಂಕಸಾಲೆ- ಕೆಳಗೂರು- ಜಾವಳಿ- ಬಾಳೂರು ಹ್ಯಾಂಡ್‌ ಪೋಸ್ಟ್‌, 41.70 ಕಿ.ಮೀ. ವ್ಯಾಪ್ತಿಯಲ್ಲಿ ಆ.17ರವರೆಗೆ ಎಲ್ಲ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಿದೆ. ಬದಲಿ ಮಾರ್ಗವಾಗಿ ಮೂಡಿಗೆರೆ- ಆಲ್ದೂರು- ಬಾಳೆಹೊನ್ನೂರು- ಮಾಗುಂಡಿ-ಬಾಳೆಹೊಳೆ -ಕಳಸ ಮಾರ್ಗವಾಗಿ ಸಂಚರಿಸಬೇಕು.

ಮೂಡಿಗೆರೆ ತಾಲೂಕಿನ ಹುಳುವಳ್ಳಿ ಹೊರನಾಡು ಜಿಲ್ಲಾ ಮುಖ್ಯ ರಸ್ತೆಯ 6.70 ಕಿ.ಮೀ, ವ್ಯಾಪ್ತಿಯಲ್ಲಿ ಆ. 19 ರವರೆಗೆ ಎಲ್ಲ ರೀತಿಯ ವಾಹನಗಳನ್ನು ನಿರ್ಬಂಧಿಸಲಾಗಿದೆ. ಬದಲಿ ಮಾರ್ಗವಾಗಿ ಮೂಡಿಗೆರೆ- ಆಲ್ದೂರು- ಬಾಳೆಹೊನ್ನೂರು-ಮಾಗುಂಡಿ-ಬಾಳೆಹೊಳೆ-ಕಳಸ ಮಾರ್ಗವಾಗಿ ಸಂಚರಿಸಬೇಕು. ತಾಲ್ಲೂಕಿನ ಬಾಳೆಹೊಳೆ-ಹಿರೇಬೈಲು ಮುಖ್ಯ ರಸ್ತೆಯ ಬೂದಿಗುಂಡಿ- ಚಿನ್ನಹಡ್ಲು -ಮಲ್ಲೇಶನಗುಡ್ಡ- ಬಾಳಹೊಳೆಯ 16 ಕಿ.ಮೀ, ವ್ಯಾಪ್ತಿಯಲ್ಲಿ ಆ.19 ರವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿದ್ದು, ಬದಲಿ ಮಾರ್ಗವಾಗಿ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ.

ಸುಂಕಸಾಲೆ, ಮರಸೆಣಿಗೆ ಜಿಲ್ಲಾ ಮುಖ್ಯರಸ್ತೆಯ ಬಲಿಗೆ, ಮೈದಾಡಿ ಕಿರುಗಲಮನೆ-ಮರಸಣಿಗೆ 13.80 ಕಿ.ಮೀ. ವ್ಯಾಪ್ತಿಯಲ್ಲಿ ಸೆ. 15 ರವರೆಗೆ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಲಾಗಿದೆ. ಬದಲಿ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಮೂಡಿಗೆರೆ ತಾಲೂಕಿನ ಕೆ.ಕೆಳಗೂರು, ಮರಸಣಿಗೆ ಜಿಲ್ಲಾ ಮುಖ್ಯರಸ್ತೆಯ 8 ಕಿ.ಮೀ. ವ್ಯಾಪ್ತಿಯಲ್ಲಿ ಆ.17ರವರೆಗೆ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಿದ್ದು, ಬದಲಿ ಮಾರ್ಗವಾಗಿ ಸಂಚರಿಸಲು ಅವಕಾಶ ಇರುವುದಿಲ್ಲ.

'ನಾನು MBA ಓದಿದ್ದೇನೆ, ನನ್ನಂಥ ಕ್ವಾಲಿಫೈಡ್ ಬಿಜೆಪಿಯಲ್ಲಿ ವಿರಳ, ಮಂತ್ರಿಗಿರಿ ಕೊಟ್ರೆ ಮಾಡ್ತೀನಿ'

ಮೂಡಿಗೆರೆ ತಾಲೂಕಿನ ಕೂವೆ ಮಾಲಿಂಗನಾಡು, ನೇರಂಕಿ ಜಿಲ್ಲಾ ಮುಖ್ಯರಸ್ತೆಯ ಕೂವೆ ಮಾಲಿಂಗನಾಡು -ಬಿಳಗಲಿ- ನೇರಂಕಿ 16.60 ಕಿ.ಮೀ. ವ್ಯಾಪ್ತಿಯಲ್ಲಿ ಆ.19 ರವರೆಗೆ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಿದ್ದು, ಬದಲಿ ಮಾರ್ಗವಾಗಿ ಸಂಚರಿಸಲು ಅವಕಾಶವಿಲ್ಲ. ಕೊಪ್ಪ ತಾಲೂಕಿನ ಕಚಿಗೆ ಮೇಗೂರು ಜಿಲ್ಲಾ ಮುಖ್ಯರಸ್ತೆಯ ಗಡಿಗಲ್ಲು- ಹೆಗ್ಗಾರುಕೊಡಿಗೆ -ಕೊಗ್ರೆಯ 19.90 ಕಿ.ಮೀ. ವ್ಯಾಪ್ತಿಯಲ್ಲಿ ಆ.30 ರವರೆಗೆ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಿದೆ. ಬದಲಿ ಮಾರ್ಗವಾಗಿ ಗಡಿಗಲ್ಲು- ಹೆಗ್ಗಾರುಕೊಡಿಗೆ- ಕೊಗ್ರೆ ಮಾರ್ಗವಾಗಿ ಸಂಚರಿಸಬಹುದು.

ಕೊಪ್ಪ ತಾಲೂಕಿನ ಹೊರನಾಡು -ಬಲಿಗೆ- ಮೆಣಸಿನಹಾಡ್ಯ ಜಿಲ್ಲಾ ಮುಖ್ಯರಸ್ತೆಯ 8 ಕಿ.ಮೀ. ವ್ಯಾಪ್ತಿಯಲ್ಲಿ ಸೆ.15 ರವರೆಗೆ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಿದ್ದು, ಬದಲಿ ಮಾರ್ಗವಾಗಿ ಜಯಪುರ- ಬಸರೀಕಟ್ಟೆ- ಬಾಳೆಹೊಳೆ- ಕಳಸ- ಹೊರನಾಡು ಮಾರ್ಗವಾಗಿ ಸಂಚರಿಸಬಹುದು ಎಂದು ತಿಳಿಸಿದ್ದಾರೆ.