ನಗರದ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಆವರಣದ ವೇದಿಕೆಯಲ್ಲಿ ಸಾಧಕರಾದ ಖಾಜಾಬಿ ಅಲ್ಲಾಸಾಬ್ ಮತ್ತು ಭರಮಪ್ಪ ಕುಂಬಾರ ಅವರಿಗೆ ಕಾಯಕಶೀಲ ಪ್ರಶಸ್ತಿ, ನಗದು, ಫಲಫುಷ್ಪಗಳನ್ನು ನೀಡಿ ಗೌರವಿಸಲಾಯಿತು.
ಗಂಗಾವತಿ (ಮೇ.03): ನಗರದ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಆವರಣದ ವೇದಿಕೆಯಲ್ಲಿ ಸಾಧಕರಾದ ಖಾಜಾಬಿ ಅಲ್ಲಾಸಾಬ್ ಮತ್ತು ಭರಮಪ್ಪ ಕುಂಬಾರ ಅವರಿಗೆ ಕಾಯಕಶೀಲ ಪ್ರಶಸ್ತಿಯನ್ನು ನೀಡಲಾಯಿತು. ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರ 71ನೇ ವರ್ಷದ ಜನ್ಮ ದಿನಾಚರಣೆ ಸಂದರ್ಭದಲ್ಲಿ ಇಬ್ಬರು ಸಾಧಕರಿಗೆ ಪ್ರಶಸ್ತಿ ಮತ್ತು 2500 ರು ನಗದು, ಫಲಫುಷ್ಪಗಳನ್ನು ನೀಡಿ ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ವಹಿಸಿದ್ದ ಅ.ಭಾ.ಶ. ರಾಜ್ಯ ಉಪಾದ್ಯಕ್ಷ ಅಪ್ಪರಾವ್ ಅಕ್ಕೋನಿ ಮಾತನಾಡಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರು ಪ್ರತಿ ವರ್ಷ ಜನ್ಮ ದಿನಾಚರಣೆಯನ್ನು ಆಡಂಬರವಾಗಿ ಆಚರಿಸದೇ ಇಬ್ಬರು ಸಾಧಕರಿಗೆ ಕಾಯಕಶೀಲ ಪ್ರಶಸ್ತಿ ನೀಡುತ್ತಿರುವದು ಪ್ರಶಂಸನೀಯವಾಗಿದೆ. ಇದಕ್ಕಾಗಿ 2 ಲಕ್ಷ ರುಪಾಯಿಗಳನ್ನು ದತ್ತಿ ನಿಧಿ ಮೀಸಲಿಟ್ಟಿದ್ದಾರೆ.
ಜನ ಸೇವೆಯೆ ಜನಾರ್ದನ ಸೇವೆ
ಪ್ರತಿ ವರ್ಷ ಇಂತಹ ಕಾರ್ಯಗಳನ್ನು ಸಂಘಟಕರು ಮಾಡುತ್ತಾ ಬಂದಿದ್ದಾರೆ ಎಂದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ ಜನ ಸೇವೆಯೆ ಜನಾರ್ದನ ಸೇವೆ ಎನ್ನುವ ಮಾತಿನಂತೆ ನಡೆಯುತ್ತಿದ್ದೇನೆ. ಭಗವಂತ ಕಲ್ಪಿಸಿದ ಅವಕಾಶದಲ್ಲಿ ಹಿರಿಯ ಜೀವಿಗಳಿಗೆ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿರುವುದಾಗಿ ಹೇಳಿದರು.
ಈ ಹಿಂದೆ ಶಾಸಕರಾಗಿದ ಸಂದರ್ಭದಲ್ಲಿ ಹಲವಾರು ಜನಪರ ಕಾರ್ಯಗಳನ್ನು ಮಾಡಿದ್ದು, ಮುಂಬರುವ ದಿನಗಳಲ್ಲಿ ತಮ್ಮ ಆಶೀರ್ವಾದಿಂದ ಜನಸೇವೆ ಮಾಡಲು ಅವಕಾಶ ನೀಡ ಬೇಕೆಂದರು. ಈ ವೇಳೆ ಮಾಜಿ ಸಂಸದ ಶಿವರಾಮಗೌಡ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು. ಮಾಲಾಶ್ರೀ ಪ್ರಾರ್ಥಿಸಿದರು, ಶಿವಕುಮಾರ ಕುಕನೂರು ಪ್ರಾಸ್ತಾವಿಕವಾಗಿ ಮಾತನಾಡಿದರು.


