ಗಂಗಾವತಿಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಕುರುಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಲೆ ನಡೆದ 19 ದಿನಗಳ ಬಳಿಕ ಪೊಲೀಸರು ಪ್ರಮುಖ ಸೂತ್ರಧಾರಿಗಳಾದ ರವಿ ಹಾಗೂ ಗೌಳಿ ಗಂಗಾಧರ ಅವರನ್ನು ಬಂಧಿಸಿದ್ದಾರೆ. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ನಡೆದ ಈ ಕೊಲೆಗೆ ಸಂಚು ರೂಪಿಸಿದ್ದರು

ಕೊಪ್ಪಳ (ಅ.26): ಹಳೇ ವೈಷಮ್ಯ ಹಿನ್ನೆಲೆ ಗಂಗಾವತಿ ಪಟ್ಟಣದಲ್ಲಿ ನಡೆದಿದ್ದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಕುರುಬರ ಹತ್ಯೆ ಪ್ರಕರಣದ ಕೇಸಿನ ಮಾಸ್ತರ್ ಮೈಂಡ್ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರವಿ ಹಾಗೂ ಗೌಳಿ ಗಂಗಾಧರ ಬಂಧಿತ ಆರೋಪಿಗಳು. ಕೊಲೆ ನಡೆದು ಬರೋಬ್ಬರಿ 19 ದಿನಗಳ ಬಳಿಕ ಸೆರೆಸಿಕ್ಕ ಆರೋಪಿಗಳು.

ಇದನ್ನೂ ಓದಿ: Gangavati BJP Leader Murder Case: ಕೊಂದು ಪೊಲೀಸರಿಗೆ ಶರಣಾದ ನಾಲ್ವರು ಆರೋಪಿಗಳು

ಘಟನೆ ಹಿನ್ನೆಲೆ

ವೆಂಕಟೇಶ್ ಕುರುಬರ ಕೊಲೆ ಕೇಸ್‌ನ ಎ1 ಆರೋಪಿಯಾಗಿದ್ದ ರವಿ ಅಕ್ಟೋಬರ್ 8 ರಂದು ಗಂಗಾವತಿ ನಗರದಲ್ಲಿ ನಡೆದ ಕೊಲೆಗೆ ಸಂಚು ರೂಪಿಸಿದ್ದ. ಹಳೇ ವೈಷಮ್ಯಕ್ಕೆ ವೆಂಕಟೇಶ್‌ನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು.ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಏಳು ಜನರನ್ನು ಬಂಧಿಸಿದ್ದ ಪೊಲೀಸರು, ಇದೀಗ ಪ್ರಮುಖ ಆರೋಪಿ ರವಿ ಹಾಗೂ ಗೌಳಿ ಗಂಗಾಧರ್ ಅವರನ್ನು ಬಂಧಿಸಿದ್ದಾರೆ.

ರವಿ ಬಂಧನಕ್ಕೆ ಕೊಪ್ಪಳ ಎಸ್‌ಪಿ ವಿಶೇಷ ತಂಡ ರಚಿಸಿದ್ದರು. ರವಿಗಾಗಿ ಹೊರ ರಾಜ್ಯದಲ್ಲಿ ಹುಡುಕಾಡಿದ್ದ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.