ಅಕ್ರಮ ಆಸ್ತಿ ವರ್ಗಾವಣೆ ಕೇಸ್, ಗದಗ ಬೆಟಗೇರಿ ನಗರಸಭೆ ಪೌರಾಯುಕ್ತ ಅಮಾನತು
ಅನಧಿಕೃತ ನಿವೇಶನಗಳ ಆಸ್ತಿಯ ಹಕ್ಕನ್ನ ವರ್ಗಾವಣೆ ಮಾಡಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೌರಾಯುಕ್ತ ರಮೇಶ ಸುಣಗಾರ ಅವರನ್ನ ತಕ್ಷಣಕ್ಕೆ ಜಾರಿಯಾಗುವಂತೆ ಸೇವೆಯಿಂದ ಅಮಾನತ್ತು ಮಾಡಿ ಪೌರಾಡಳಿತ ನಿರ್ದೇಶನಾಲಯ ಆದೇಶ ಹೊರಡಿಸಿದೆ.
ಗದಗ (ಜ.7): ಅನಧಿಕೃತ ನಿವೇಶನಗಳ ಆಸ್ತಿಯ ಹಕ್ಕನ್ನ ವರ್ಗಾವಣೆ ಮಾಡಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೌರಾಯುಕ್ತ ರಮೇಶ ಸುಣಗಾರ ಅವರನ್ನ ತಕ್ಷಣಕ್ಕೆ ಜಾರಿಯಾಗುವಂತೆ ಸೇವೆಯಿಂದ ಅಮಾನತ್ತು ಮಾಡಿ ಪೌರಾಡಳಿತ ನಿರ್ದೇಶನಾಲಯ ಆದೇಶ ಹೊರಡಿಸಿದೆ. ರಮೇಶ್ ಸುಣಗಾರ ಈ ಹಿಂದೆ ದೊಡ್ಡಬಳ್ಳಾಪುರ ಪೌರಾಯುಕ್ತರಾಗಿದ್ದ ವೇಳೆ, ಡೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ವಾರ್ಡ್ ನಂಬರ್ 11 ರಲ್ಲಿ 39 ಅನಧಿಕೃತ ನಿವೇಶನಗಳ ಆಸ್ತಿ ಹಕ್ಕನ್ನ ವರ್ಗಾಯಿಸಿದ್ರು. ಈ ಬಗ್ಗೆ ಪೌರಾಡಳಿತ ಸಚಿವರಿಗೆ ದೂರು ಸಲ್ಲಿಸಲಾಗಿತ್ತು. ತನಿಖೆ ನಡೆಸಿದ್ದ ಬೆಂಗಳೂರು ಗ್ರಾಮಾಂತರ ನಗರಾಭಿವೃದ್ಧಿ ಕೋಶ ತಂಡ, ನಗರಯೋಜನೆ ಪ್ರಾಧಿಕಾರದ ಅನುಮತಿ ಪಡೆಯದೇ 39 ಆಸ್ತಿಯನ್ನ ಎನ್ ರಾಮರೆಡ್ಡಿ ಅಲಿಯಾಸ್ ನಾರಾಯಣ ರೆಡ್ಡಿ ಅನ್ನೋರಿಗೆ ಆಸ್ತಿ ವರ್ಗಾಯಿಸಲು ರಮೇಶ್ ಸುಣಗಾರ ಸಹಾಯ ಮಾಡಿದ್ರು ಅಂತಾ ವರದಿ ನೀಡಿತ್ತು. ಅಲ್ದೆ, ನಂತರದಲ್ಲಿ ಎನ್ ರಾಮರೆಡ್ಡಿ ಅವರ ಪತ್ನಿ ಸುಜಾತಾ ರೆಡ್ಡಿ, ಮಗನಾದ ಶ್ರೀನಿವಾಸ ರೆಡ್ಡಿ ಅವರಿಗೆ ಆಸ್ತಿ ವರ್ಗಾವಣೆಯಾಗುವಂತೆ ಮಾಡಿದ್ದರು.. ವರದಿ ಆಧರಿಸಿ ಪೌರಾಯುಕ್ತರಾಗಿದ್ದ ರಮೇಶ ಸುಣಗಾರ, ಕಂದಾಯಾಧಿಕಾರಿ ರವೀಂದ್ರ ಜಾಯಗೊಂಡ ಅವರನ್ನ ಅಮಾನತು ಗೊಳಿಸಿ ಇಲಾಖಾ ವಿಚಾರಣೆಗೆ ಪೌರಾಡಳಿತ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
Gadag: ಮೆಣಸಿನಕಾಯಿಗೆ ಬಂಗಾರದ ಬೆಲೆ: ರೈತನಿಗೆ ನ್ಯೂ ಇಯರ್ 'ಬಂಪರ್ ಗಿಫ್ಟ್'
ಅರ್ಜಿ ಆಹ್ವಾನ: ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಗೆ ಬರುವ ಡೇ-ನಲ್ಮ ಯೋಜನೆಯ ಈಡಿಯಲ್ಲಿ 2022-23ನೇ ಸಾಲಿಗೆ ತರಬೇತಿ ಮತ್ತು ಮೂಲಸೌಕರ್ಯ ಘಟಕದ ಅಡಿಯಲ್ಲಿ (ಇಎಸ್‌ಟಿಪಿ) ಪ್ರಕಾರ ಡೋಮೆಸ್ಟಿಕ್ ಡಾಟಾ ಎಂಟ್ರಿ ಆಪರೇಟರ್, ಡೊಮೆಸ್ಟಿಕ್ ಐಟಿ ಹೆಲ್ಪ ಡೆಸ್‌್ಕ ಅಟೆಂಡೆಂಟ್‌ಗಳಿಗೆ ಗುರಿ ನಿಗದಿಪಡಿಸಲಾಗಿದೆ. ಅರ್ಹ ಅರ್ಜಿದಾರರು ಜ. 8ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಗದಗ- ಬೆಟಗೇರಿ ನಗರಸಭೆ ಕಾರ್ಯಾಲಯ ದೂ: 08372-278265 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
Gadag: ಅನ್ನದಾತ ಬಾಳಲ್ಲಿ ಬಂಗಾರವಾಗಬೇಕಿದ್ದ ಬಾಳೆ ಬೆಂಕಿಗಾಹುತಿ!
ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನ
ಗದಗ:ನ್ಯಾಷನಲ್ ಟ್ರಸ್ಟ್ ಆ್ಯಕ್ಟ್-1999ರಡಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಯೋಜನೆಯ ಅನುಷ್ಠಾನಕ್ಕಾಗಿ ಜಿಲ್ಲಾ ಮಟ್ಟದ ನೋಡಲ್ ಸಂಸ್ಥೆಯ ಆಯ್ಕೆಗಾಗಿ ಜಿಲ್ಲೆಯಲ್ಲಿ ಅಂಗವಿಕಲರ ಕ್ಷೇತ್ರದಲ್ಲಿ (ಬುದ್ಧಿಮಾಂದ್ಯ ಮಕ್ಕಳ ವಿಶೇಷ ಶಾಲೆ ನಡೆಸುತ್ತಿರುವ ಸಂಸ್ಥೆಗಳು) ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯ ಅರ್ಹ ಸ್ವಯಂ ಸೇವಾ ಸಂಸ್ಥೆಯವರು ಜ. 16 ರೊಳಗಾಗಿ ಪ್ರಸ್ತಾವನೆಯನ್ನು ಜಿಲ್ಲಾ ಕಚೇರಿಗೆ ಸಲ್ಲಿಸಲು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ದೂ: 08372-220419ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ. ಮಹಾಂತೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.