ಪರಿಸರ ಜಾಗೃತಿಗಾಗಿ ಗದಗದ 52ರ ವೃದ್ಧನಿಂದ 300 ಕಿ.ಮೀ ಸೈಕಲ್ ಜಾಥಾ!

  • ಪರಿಸರ ಜಾಗೃತಿಗಾಗಿ ಪರಿಸರ ಪ್ರೇಮಿಯ ಸೈಕಲ್ ಯಾತ್ರೆ
  • ಪರಿಸರಕ್ಕಾಗಿ 52 ರ ವೃದ್ಧನಿಂದ ಸೈಕಲ್ ಜಾಥಾ
  • 300 ಕಿ.ಮೀ ಸೈಕಲ್ ನಲ್ಲಿಯೇ ಮುತ್ತಣ್ಣನ ಪಯಣ
     
Gadag based 52-year-old man Muttanna  300 KM bicycle Jatha for environmental awareness gow

ವರದಿ: ಪರಶುರಾಮ್ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್  

ಯಾದಗಿರಿ(ಎ.6): ಉತ್ತರ ಕರ್ನಾಟಕ (Uttara Karnataka) ಭಾಗದಲ್ಲಿ ಬೇಸಿಗೆ ಕಾಲ ಬಂದ್ರೆ ಸಾಕು ಜ‌ನರು ಹೊರಬರುವುದಕ್ಕೆ ಹೆದರ್ತಾರೆ. ಅಂತದ್ರಲ್ಲಿ 52 ವಯಸ್ಸಿನ ವೃದ್ಧ ಪರಿಸರ ಜಾಗೃತಿಗಾಗಿ (environmental awareness) 300 ಕಿ‌.ಮೀ ಸೈಕಲ್ ನಲ್ಲಿಯೇ ಪ್ರಯಾಣ ಮಾಡಿದ್ದಾನೆ. ಇಂತಹ ಸುಡು ಬಿಸಿಲಿನಲ್ಲಿಯೇ ಸೈಕಲ್ ಜಾಥಾ ನಡೆಸಿರುವ ಈ ವೃದ್ಧನ ಹೆಸರು ಮುತ್ತಣ್ಣ ತೀರ್ಲಾಪುರ. ಪರಿಸರ ಪ್ರೇಮಿ ಮುತ್ತಣ್ಣ ಗದಗ (Gadag) ಜಿಲ್ಲೆಯ ರೋಣ ತಾಲೂಕಿನ ಕರ್ಕಿಕಟ್ಟೆ ನಿವಾಸಿಯಾಗಿದ್ದಾನೆ.

ಮರ, ಉಳಿಸಿ, ಬೆಳೆಸಲು ಸೈಕಲ್ ಯಾತ್ರೆ ಮೂಲಕ ಜಾಗೃತಿ: ಪರಿಸರ ಉಳಿಯಬೇಕೆಂದರೆ ಪ್ರಮುಖವಾಗಿ ಗೀಡ-ಮರಗಳನ್ನು ಬೆಳೆಸಬೇಕು, ಜೊತೆಗೆ ಅವುಗಳನ್ನು ಪೋಷಿಸಬೇಕು. ಹಾಗಾಗಿ ಎಲ್ಲರೂ ಕೂಡ ಪರಿಸರ ಕಾಳಜಿ ಹೊಂದಬೇಕು, ಪರಿಸರದ ಬಗ್ಗೆ ಅರಿವಿರಬೇಕು. ಮನುಷ್ಯನ ಜೀವನಕ್ಕೆ ಪರಿಸರ ಬಹಳ ಮುಖ್ಯ, ಅದಕ್ಕಾಗಿ ಪರಿಸರ ಪ್ರೀತಿ ಎಲ್ಲರಿಗೂ ಇರಬೇಕು. ಪರಿಸರ ಪ್ರೇಮಿ ಮುತ್ತಣ್ಣ ಯಾದಗಿರಿ ನಗರದ ವಿವಿಧ ಕಡೆ ಸೈಕಲ್ ಜಾಥಾ ನಡೆಸಿ, ಜನರಿಗೆ ಪರಿಸರ ದ ಕುರಿತು ಜಾಗೃತಿ ಮೂಡಸಿದರು.

ಮುಂದಿನ MLA ಜಿಎಸ್ ಪಾಟೀಲ, 2023 ರ ಮುಖ್ಯಮಂತ್ರಿ ಸಿದ್ದರಾಮಯ್ಯ!

ಹಸಿರು ಬಟ್ಟೆ, ಸೈಕಲ್ ಗೆ ಹಸಿರು ಬಣ್ಣದ ಲೇಪನ: ಪರಿಸರ ಪ್ರೇಮಿ ಮುತ್ತಣ್ಣ ಗದಗನಿಂದ ಯಾದಗಿರಿ ವರೆಗೆ ಸುಮಾರು 300 ಕಿ.ಮೀ ಸೈಕಲ್ ಜಾಥಾ ಹಮ್ಮಿಕೊಂಡಿದ್ದು, ಈಗ ಯಾದಗಿರಿಗೆ ಬಂದು ತಲುಪಿದ್ದಾರೆ. ಮುತ್ತಣ್ಣನ ಬಟ್ಟೆ ಸಂಪೂರ್ಣ ಹಸಿರುಯವಾಗಿದ್ದು, ಉಡುವ ಬಟ್ಟೆಯ ಮೇಲೆಯೂ ಪರಿಸರ ಜಾಗೃತಿಯ ನುಡಿಗಳನ್ನ ಬರೆದುಕೊಂಡಿದ್ದು, ಜೊತೆಗೆ ತಾನು ಸಂಚರಿಸು ಸೈಕಲ್ ಗೆ ಸಂಪೂರ್ಣವಾಗಿ ಹಸಿರು ಲೇಪನಗೊಳಿಸಿದ್ದಾನೆ. ಇದರಿಂದ ತನ್ನ ಜೀವನವೆಲ್ಲಾ ಹಸಿರು ಅಂದ್ರೆ ಪರಿಸರಕ್ಕಾಗಿ ಮುಡಿಪಾಗಿಟ್ಟಿದ್ದಾನೆ. ಮುತ್ತಣ್ಣ ಪರಿಸರ ಹಸಿರಾಗಿಸಲು ಸಂದೇಶ ನೀಡಿದ್ದಾನೆ.

ಸುಡುವ ಬಿಸಿಲಿನಲ್ಲೇ 300 ಕಿ.ಮೀ ಸೈಕಲಾ ಪ್ರಯಾಣ: ಉತ್ತರ ಕರ್ನಾಟಕ ಭಾಗದಲ್ಲಿ ಬೇಸಿಗೆಯ ಸಂದರ್ಭದಲ್ಲಿ ಹೆಚ್ಚಿನ ತಾಪ ಇರುತ್ತದೆ. ಉರಿ ಬಿಸಿಲಿಗೆ ಎಂತಹ ಯುವಕರೇ ಆತಂಕಗೊಳ್ತಾರೆ . ಅಂತದ್ರಲ್ಲಿ ಮುತ್ತಣ್ಣ 52 ವಯಸ್ಸಿನಲ್ಲಿಯೂ ಸೈಕಲ್ ನಡೆಸಿಕೊಂಡೇ ಬಂದಿರುವುದು ಗ್ರೇಟ್. ಇಳಿವಯಸ್ಸಿನಲ್ಲಿಯೂ ಸಹ ಸೈಕಲ್ ಜಾಥಾ ನಡೆಸಿರುವ ಮುತ್ತಣ್ಣನ ಸಾಹಸ ಮೆಚ್ಚಲೆಬೇಕಾದದ್ದು. ಉತ್ತರ ಕರ್ನಾಟಕದ ಜಿಲ್ಲೆಗಳಾದ ಗದಗ, ಬಾಗಲಕೋಟೆ, ಕೊಪ್ಪಳ, ರಾಯಚೂರು, ಯಾದಗಿರಿ ಸೇರಿದಂತೆ ಹಲವು ಕಡೆ ಭೇಟಿ ನೀಡಿ ಪರಿಸರದ ಜಾಗೃತಿ ಮೂಡಿಸಿದ್ದಾನೆ.

ಬೆಳಗಾವಿ ಖಾಸಗಿ ಕಂಪನಿಗೆ 4.41 ಕೋಟಿ ವಂಚಿಸಿದ್ದ ಫೈನಾನ್ಸಿಯಲ್ ಕಂಟ್ರೋಲರ್!

ಸೈಕಲ್ ಯಾತ್ರಿಗೆ ಯಾದಗಿರಿ ಎಡಿಸಿ ಶಂಕರಗೌಡ ಸೋಮನಾಳ್ ಶಹಬ್ಬಾಷ್ ಗಿರಿ: ಇನ್ನು ಸೈಕಲ್ ಯಾತ್ರಿ ಮುತ್ತಣ್ಣ ಗದಗ ನಿಂದ ಯಾದಗಿರಿಗೆ ಬಂದಿದ್ದು, ನಗರದ ಹಲವು ಸಾರ್ವಜನಿಕರಿಗೆ ಪರಿಸರದ ಮಹತ್ವ ಮತ್ತು ಕಾಳಜಿ ಬಗ್ಗೆ ಹೇಳಿದ್ದಾರೆ. ನಂತರ ಯಾದಗಿರಿ ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ ಅವರು ಮುತ್ತಣ್ಣನ ಪರಿಸರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪರಿಸರ ಬೆಳೆಸಿ, ಪರಿಸರ ಉಳಿಸಿ ಎಂಬ ಪರಿಸರ ಜಾಗೃತಿ ಅಭಿಯಾನ ಮಾಡುವವುದರಿಂದ ಜನರಿಗೆ ಪರಿಸರ ಬಗ್ಗೆ ಅರಿವು ಮೂಡದೆ ಎಂದರು.

Latest Videos
Follow Us:
Download App:
  • android
  • ios