ಮುಂದಿನ MLA ಜಿಎಸ್ ಪಾಟೀಲ, 2023 ರ ಮುಖ್ಯಮಂತ್ರಿ ಸಿದ್ದರಾಮಯ್ಯ!

 Next MLA ಜಿಎಸ್ ಪಾಟೀಲ, 2023 ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಾ ಬರೆದ ಬಾಳೆ ಹಣ್ಣನ್ನು ರಥದ ಮೇಲೆ ಎಸೆಯುವ ಮೂಲಕ ತಿಮ್ಮಾಪುರ ಗ್ರಾಮದ ಯುವಕರು ಹರಿಕೆ ಕಟ್ಟಿಕೊಂಡಿದ್ದಾರೆ.  

Siddaramaiah to be the next CM youths pray at Marutheshwara Rathotsava in Gadag  gow

ಗದಗ(ಎ.6): ತಾಲೂಕಿನ ತಿಮ್ಮಾಪುರ ಗ್ರಾಮದ (Thimmapura village ) ಮಾರುತೇಶ್ವರ ಜಾತ್ರಾ ಮಹೋತ್ಸವದ (Marutheshwara Jatra mahotsava) ಅಂಗವಾಗಿ ನಡೆದ ರಥೋತ್ಸದಲ್ಲಿ (Rathotsava) ಗ್ರಾಮದ ಯುವಕರು ವಿಶಿಷ್ಠವಾಗಿ ಹರಕೆ ಕಟ್ಟಿಕೊಂಡಿದ್ದಾರೆ. ತಿಮ್ಮಾಪುರ ಗ್ರಾಮದ ಯುವಕ ಸುರೇಶ್ ಆಲೂರು ಮತ್ತು ತಂಡ ರಥದ ಕಲಶಕ್ಕೆ ಹಣ್ಣು ಎಸೆದು ಮನೋಕಾಮನೆ ಸಿದ್ಧಿಯಾಗುವಂತೆ ಹನುಮದೇವರಲ್ಲಿ ಮೊರೆ ಇಟ್ಟಿದ್ದಾರೆ‌. ರಥದ ಕಲಶಕ್ಕೆ ಈ ರೀತಿ ಹಣ್ಣು ಎಸೆದರೆ ಇಷ್ಟಾರ್ಥಗಳು ಸಿದ್ಧಿಯಾಗುತ್ತೆ ಅನ್ನೋ ನಂಬಿಕೆ ಗ್ರಾಮಸ್ಥರದ್ದು. ಹೀಗಾಗಿ, ಮಾಜಿ ಸಿಎಮ್ ಸಿದ್ದರಾಮಯ್ಯ, ಮಾಜಿ ಶಾಸಕ ಜಿಎಸ್ ಪಾಟೀಲರ (GS Patil) ಹೆಸರನ್ನ ಬರೆದ ಗ್ರಾಮದ ಯುವಕರು ರಥಕ್ಕೆ ಅರ್ಪಿಸಿದ್ದಾರೆ. 

ನೆಚ್ಚಿನ ನಾಯಕ ಜಿಎಸ್ ಪಾಟೀಲರ ಹೆಸರಲ್ಲೂ ರಥಕ್ಕೆ ಹಣ್ಣು ಅರ್ಪಿಸಿದ ಯುವಕರು: ರಾಜ್ಯದ ವಿವಿಧ ಜಾತ್ರಾ ಮಹೋತ್ಸವದಲ್ಲಿ ಸಿದ್ದರಾಮಯ್ಯ ಅವರ ಹೆಸರಲ್ಲಿ ಬಾಳೆ ಹಣ್ಣು ಎಸೆಯಲಾಗಿದೆ. ಈ ಬಾರಿಯ ತಿಮ್ಮಾಪುರ ಗ್ರಾಮದಲ್ಲೂ ಸಿದ್ದರಾಮಯ್ಯ ಅವರ ಹೆಸರು ಬರೆದು ರಥದ ಕಳಸಕ್ಕೆ ಎಸೆಯಲಾಗಿದೆ. ಜೊತೆಗೆ ಗದಗ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ರೋಣ ಮತ ಕ್ಷೇತ್ರದ ಕಾಂಗ್ರೆಸ್ ನಾಯಕ ಜಿಎಸ್ ಪಾಟೀಲ ಅವರು ಮುಂದಿನ ಎಮ್ ಎಲ್ ಎ ಅಂತ ಬರೆದಿರುವ ಫೋಟೋಗಳು ವೈರಲ್ ಆಗಿವೆ. ವಿಧಾನಸಭಾ ಚುನಾವಣೆಯಲ್ಲಿ ಕಳೆದಬಾರಿ 4 ಸಾವಿರ ಮತಗಳ ಅಲ್ಪ ಅಂತರದಿಂದ ಬಿಜೆಪಿಯ ಕಳಕಪ್ಪ ಬಂಡಿ ಗೆದ್ದಿದ್ದರು.. ಈ ಬಾರಿ ಬಹುಮತದಿಂದ ಜಿಎಸ್ ಪಿ ಗೆಲ್ಲಬೇಕು ಅಂತಾ ಗ್ರಾಮದ ಕಾಂಗ್ರೆಸ್ ಸಮರ್ಥಕರು ಪ್ರಾರ್ಥನೆ ಸಲ್ಲಿಸಿದ್ದಾರೆ. 

ಹಲಾಲ್ ಕಟ್ ಮಾಡಿದ್ದೆ ನಾವು ತಿನ್ನೋದು, ಮಾಂಸ ತಿನ್ನದವರಿಂದ ವಿವಾದ ಸೃಷ್ಟಿ

ಜಾತ್ರೆಯಲ್ಲಿ ರಾರಾಜಿಸಿದ ಯುವರತ್ನ ಪುನೀತ್ ರಾಜ್ಕುಮಾರ್ ಫೋಟೋ!: ಫ್ಯಾನ್ಸ್ ಮನಸ್ಸಲ್ಲಿ ಅಮರವಾಗಿರೋ ಅಭಿಮಾನಿಗಳ ಪಾಲಿನ ಆರಾಧ್ಯದೈವ ಪುನೀತ್ ರಾಜ್ ಕುಮಾರ್ ಭಾವ ಚಿತ್ರಗಳು ಜಾತ್ರೆಯಲ್ಲಿ ರಾರಾಜಿಸಿದ್ವು. ರಥ ಬೀದಿಯಲ್ಲಿ ತೇರು ಸಾಗ್ತಿದ್ದಂತೆ ಕೆಲ ಯುವಕರು ಅಪ್ಪು ಫೋಟೋ ಹಿಡಿದು ಡ್ಯಾನ್ಸ್ ಮಾಡಿದ್ರು.. ಅಲ್ದೆ ನೆಚ್ಚನ ನಟನ ಫೋಟೋ ಹಿಡಿದು ಸೆಲ್ಪಿ ಪೋಸ್ ಕೂಡ ನೀಡಿದ್ರು. 

ಐದು ದಿನಗಳ ಕಾಲ ನಡೆಯುವ  ಅದ್ಧೂರಿ ಜಾತ್ರೆ: ಹನುಮ ದೇವರಿಗೆ ಯುಗಾದಿಯಂದು ಪೂಜೆ ಸಲ್ಲಿಸುವ ಮೂಲಕ ಜಾತ್ರೆ ಆರಂಭವಾಗುತ್ತೆ‌‌.. ಏಪ್ರಿಲ್ ಮೂರಕ್ಕೆ ಅಂದ್ರೆ ಮರುದಿನ ಗೋಪಾಳ ತುಂಬಿಸುವ ಕಾರ್ಯಕ್ರಮ ನಡೆಯುತ್ತದೆ‌‌.. ಕಾರ್ಯಕ್ರಮದ ನಿಮಿತ್ತ ಊರ ಜನರು ಗೋದಿ ಹುಗ್ಗಿ ತಯಾರು  ಮಾಡುವ ಮೂಲಕ ಹಂಚಿ ಊಟ ಮಾಡಿ ಸಂಭ್ರಮಿಸುತ್ತಾರೆ.. ಸೋಮವಾರ ಗರುಡ ಗಂಬಕ್ಕೆ ಅಭಿಷೇಕ ಮಾಡುವ ಮೂಲಕ ಹೋಮ ಹವನ ಮಾಡಲಾಗಿದೆ.. ಜೊತೆಗೆ ಹನುಮ ದೇವರು ಹೊಂಡ ತುಳುಕಿಸುವ ಅದ್ದೂರಿ ಆಚರಣೆ ನಡೆಯುತ್ತೆ. ಹೊಂಡದಲ್ಲಿ ಬಣ್ಣದ ನೀರು ಮಿಶ್ರಣ ಮಾಡಿ ಊರ ಯುವಕರು ಆಟವಾಡ್ತಾರೆ.. ಹೀಗೆ ಮಾಡಿದ್ರೆ ಊರಲ್ಲಿ ಸಮೃದ್ಧಿ ಮನೆ ಮಾಡುತ್ತೆ ಅನ್ನೋದು ಗ್ರಾಮಸ್ಥರ ನಂಬಿಕೆ. 

Vijayapura ಕೆಂಡ ಹಾಯ್ದ ನಾಲ್ಕು ರಾಜ್ಯಗಳ 3 ಸಾವಿರ ಭಕ್ತರು!

ಕೊರೊನಾ ಕಾಲದ ನಂತ್ರ ಮತ್ತೊಮ್ಮೆ ಅದ್ದೂರಿ ಜಾತ್ರೆ ನಡೆದಿದ್ದು. ಭಕ್ತರು ತಮ್ಮ ಮನೋಕಾಮನೆಗಳನ್ನ ದೇವರೆದುರು ಮನಸ್ಸು ಬಿಚ್ಚಿ ಬೇಡಿಕೊಂಡಿದ್ದಾರೆ.  ಗ್ರಾಮಸ್ಥರ ಪೂಜೆಗೆ ಫಲ ಸಿಕ್ಕುತ್ತಾ ಅನ್ನೋದನ್ನ  ಕಾಲವೇ ನಿರ್ಧಾರ ಮಡಲಿದೆ.

Latest Videos
Follow Us:
Download App:
  • android
  • ios