Asianet Suvarna News Asianet Suvarna News

ಮೂಡುಬಿದಿರೆ: ಹಸಿದವರಿಗಾಗಿ ‘ಫ್ರೀ ಫುಡ್‌ ಸ್ಟ್ಯಾಂಡ್‌’

ಲಾಕ್‌​ಡೌನ್‌ ಅವ​ಧಿ​ಯ​ಲ್ಲಿ ಹಸಿವಿನ ಸಮಸ್ಯೆಗೆ ಮೂಡುಬಿದಿರೆಯಲ್ಲಿ ಸೌಹಾರ್ದ ಫೋರಂ ಸದಸ್ಯರು ನೀಡಿದ ಕೊಡುಗೆಯೇ ಫ್ರೀ ಫುಡ್‌ ಸ್ಟ್ಯಾಂಡ್. ವಲಸೆ ಕಾರ್ಮಿಕರೂ ಬಂಧುಗ​ಳಿಗೆ ಆಹಾರ ನೀಡಲು ಮಾಡಿ​ರುವ ವ್ಯವಸ್ಥೆ ಇದು.

 

Free food stand for people in mangalore
Author
Bangalore, First Published Apr 19, 2020, 9:35 AM IST

ಮೂಡುಬಿದಿರೆ(ಏ.19): ಲಾಕ್‌​ಡೌನ್‌ ಅವ​ಧಿ​ಯ​ಲ್ಲಿ ಹಸಿವಿನ ಸಮಸ್ಯೆಗೆ ಮೂಡುಬಿದಿರೆಯಲ್ಲಿ ಸೌಹಾರ್ದ ಫೋರಂ ಸದಸ್ಯರು ನೀಡಿದ ಕೊಡುಗೆಯೇ ಫ್ರೀ ಫುಡ್‌ ಸ್ಟ್ಯಾಂಡ್. ವಲಸೆ ಕಾರ್ಮಿಕರೂ ಬಂಧುಗ​ಳಿಗೆ ಆಹಾರ ನೀಡಲು ಮಾಡಿ​ರುವ ವ್ಯವಸ್ಥೆ ಇದು.

ಪೇಟೆಯ ಮುಖ್ಯ ರಸ್ತೆಯ ಕೃಷ್ಣ ಕಟ್ಟೆಬಳಿ ಇರುವ ಈ ಸ್ಟಾ್ಯಂಡ್‌ನಿಂದ ಹಸಿದಿರುವ ಯಾರು ಬೇಕಾದರೂ ಹಣ್ಣು, ನೀರು, ಬಿಸ್ಕಿಟ್‌ ತೆಗೆದು ತಿನ್ನಬಹುದು. ಇದಕ್ಕೆ ಯಾರ ಅನುಮತಿಯೂ ಬೇಡ. ಆದರೆ ವೇಸ್ಟ್‌ ಮಾಡುವಂತಿಲ್ಲ. ಅಂದ ಹಾಗೆ ಈ ಸ್ಟಾ್ಯಂಡ್‌ನಲ್ಲಿ ಉಳ್ಳವರು, ಆಸಕ್ತರು ಆಹಾರ ತಂದಿಡಬಹುದು.

ಹಸಿದವರ ಹೊಟ್ಟೆ ತುಂಬಿಸುತ್ತಿದೆ ನೆಲಮಂಗಲ 'ಕರುಣೆಯ ಗೋಡೆ'

ದಾನಿಗಳು ಅವರವರ ಸಾಮರ್ಥ್ಯಕ್ಕನುಸಾರವಾಗಿ ವಸ್ತುಗಳನ್ನು ನೀಡಬಹುದು. ಇವೆಲ್ಲವೂ ಹಸಿದವರಿಗೆ, ಬಡವರಿಗೆ ಮೀಸಲು. ಎರಡು ದಿನಗಳಿಂದ ಈ ಸೇವೆ ಆರಂಭಗೊಂಡಿದ್ದು, ಶನಿವಾರ ಕೈತೊಳೆಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಕುಡಿಯುವ ನೀರಿನ ವ್ಯವಸ್ಥೆಯನ್ನೂ ಕೂಡಲೇ ಮಾಡಲಾಗುತ್ತದೆ ಎಂದು ಸೌಹಾರ್ದ ಫೋರಂ ತಿಳಿಸಿದೆ.

ದೇಶದಲ್ಲೇ ಮೊದಲ ಕೊರೋನಾ ಕೇಸ್‌ ಕೇರಳದಲ್ಲಿ ಪತ್ತೆ; ಈಗ ಅಲ್ಲೇ ಸೋಂಕು ಕಡಿಮೆ

ಈಗಾಗಲೇ ಮೂಡುಬಿದಿರೆಯ ಸಾಮಾಜಿಕ ಸಂಘ, ಸಂಸ್ಥೆಗಳಲ್ಲಿ ಗುರುತಿಸಿಕೊಂಡ ಮುಸ್ಲಿಂ ಸಮಾಜ ಬಾಂಧವರು ಸೌಹಾರ್ದ ಫೋರಂ ಹೆಸರಲ್ಲಿ ಹೀಗೊಂದು ಮಾದರಿ ಸೇವೆಗೆ ತೆರೆದುಕೊಂಡು ಗಮನ ಸೆಳೆದಿದ್ದಾರೆ.

Follow Us:
Download App:
  • android
  • ios