ಕೆಲವು ಮುಸ್ಲಿಂ ಗೂಂಡಾಗಳು ಶಿವಮೊಗ್ಗವನ್ನು ಗೂಂಡಾ ರಾಜ್ಯ ಮಾಡಲು ಹೊರಟ್ಟಿದ್ದಾರೆ: ಈಶ್ವರಪ್ಪ
* ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದವರಿಗೆ ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ
* ಚಾಕು ಇರಿತಕ್ಕೆ ಒಳಗಾಗಿ ಗಾಯಗೊಂಡಿದ್ದ ಕಾನ್ಸ್‌ಟೇಬಲ್ ಆರೋಗ್ಯ ಸುಧಾರಿಸುತ್ತಿದೆ
* ಕಾಂಗ್ರೆಸ್ ಮುಟ್ಟಿದವರೆಲ್ಲಾ ನಾಶ ಆಗ್ತಿದ್ದಾರೆ
ಶಿವಮೊಗ್ಗ(ಜೂ.22): ಜನ ಸಾಮಾನ್ಯರಿಗೆ ರಕ್ಷಣೆ ಮಾಡುವ ಪೊಲೀಸರ ಮೇಲೆಯೇ ಮುಸ್ಲಿಂ ಗೂಂಡಾಗಳು ಚಾಕು ಹಾಕಿದ್ದಾರೆ. ಚಾಕು ಹಾಕಿ ತಪ್ಪಿಸಿಕೊಂಡು ಹೋಗುವ ಪ್ರಯತ್ನ ಇಲಾಖೆಗೂ ಅಪಮಾನ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾನೂನು ಬಾಹಿರ ಚಟುವಟಿಕೆಗಳನ್ನು ಆರೋಪಿಗಳು ಧೈರ್ಯವಾಗಿ ಮಾಡ್ತಿದ್ದಾರೆ ಅಂದ್ರೆ ಶಾಸಕನಾಗಿ ನನಗೇ ನಾಚಿಕೆಯಾಗುತ್ತಿದೆ. ಕೆಲವರು ಯಾವ ಭಯ ಇಲ್ಲದೇ ಗೂಂಡಾಗಿರಿ ಮಾಡ್ತಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದವರಿಗೆ ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ ಅಂತ ತಿಳಿಸಿದ್ದಾರೆ.
ಚಾಕು ಇರಿತಕ್ಕೆ ಒಳಗಾಗಿ ಗಾಯಗೊಂಡಿದ್ದ ಕಾನ್ಸ್‌ಟೇಬಲ್ ಆರೋಗ್ಯ ಸುಧಾರಿಸುತ್ತಿದೆ. ಜೀವಕ್ಕೆ ಯಾವುದೇ ತೊಂದರೆ ಇಲ್ಲ. ಪೊಲೀಸರು ಆರೋಪಿಗೆ ಗುಂಡು ಹೊಡೆದಿದ್ದಾರೆ. ಪೊಲೀಸರ ಕ್ರಮವನ್ನು ಸ್ವಾಗತಿಸುತ್ತೇನೆ. ಪೊಲೀಸರ ಬಗ್ಗೆ ಭಯ ಇದೆ. ಆದರೆ ಪೊಲೀಸರು ಆರೋಪಿಗಳಿಗೆ ಇನ್ನು ಭಯ ಹುಟ್ಟಿಸುವ ಅಗತ್ಯವಿದೆ. ಕೆಲವು ಮುಸ್ಲಿಂ ಗೂಂಡಾಗಳು ಶಿವಮೊಗ್ಗವನ್ನು ಗೂಂಡಾ ರಾಜ್ಯ ಮಾಡಲು ಹೊರಟ್ಟಿದ್ದಾರೆ. ಇಂತಹವರ ವಿರುದ್ಧ ಪೊಲೀಸರು ಬಿಗಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಅಂತ ಈಶ್ವರಪ್ಪ ತಿಳಿಸಿದ್ದಾರೆ.
ಕುದುರಿದ ಪ್ರೀತಿಗೆ ಕುಜನ ಕಾಟ, 6 ವರ್ಷದ ಪ್ರೀತಿಗೆ ಪ್ರಿಯಕರನೇ ಇಟ್ಟನಾ ಕೊಳ್ಳಿ!
ಸಿದ್ದುಗೆ ಹಿಡಿದ ಹುಚ್ಚಿಗೆ ಈ ಪ್ರಪಂಚದಲ್ಲಿ ಯಾವುದೇ ಔಷಧಿ ಇಲ್ಲ
ಸಿದ್ದರಾಮಯ್ಯನಿಗೆ ಹಿಡಿದಿರುವ ಹುಚ್ಚು ಬಿಡಿಸಲು ಈ ಪ್ರಪಂಚದಲ್ಲಿ ಯಾವುದೇ ಔಷಧಿ ಇಲ್ಲ ಅಂತ ಸಿದ್ದು ವಿರುದ್ಧ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆಗೆ ತಿರುಗೇಟು ನೀಡಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಎಂತೆಂಹ ಸಂದರ್ಭದಲ್ಲಿ ಪ್ರಧಾನಿ ಮೋದಿ ಇಡೀ ದೇಶಕ್ಕೆ ಮಾಡಿರುವ ಸೇವೆ ಮೆಚ್ಚಿಕೊಳ್ಳಬೇಕು. ಪ್ರತಿಯೊಬ್ಬ ವ್ಯಕ್ತಿಗೂ ಉಚಿತ ವ್ಯಾಕ್ಸಿನ್ ಕೊಟ್ಟಿದ್ದು ಮೋದಿ. ಇದನ್ನು ಬೇರೆ ದೇಶದವರೇ ಮೆಚ್ಚಿಕೊಂಡಿದ್ದಾರೆ. ಆದರೆ ಸಿದ್ದರಾಮಯ್ಯ ಟೀಕೆ ಮಾಡಲು ಬೆಲೆ ಇಲ್ಲ. ಟೀಕೆ ಮಾಡುವುದೇ ಇವರ ಕೆಲಸವಾಗಿದೆ. ಕೋವಿಡ್ ಸಂದರ್ಭದಲ್ಲಿ ಬಡವರಿಗೆ ಎಷ್ಟೆಷ್ಟು ಕೆಜಿ ಅಕ್ಕಿ ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಅವರಿಗೆ ನೆನಪು ಇದೆಯಾ?. ಟೀಕೆ ಮಾಡುವ ಸಲುವಾಗಿಯೇ ಟೀಕೆ ಮಾಡಿದರೆ ನಮ್ಮ ದೇಶದಲ್ಲಿ ಅದಕ್ಕೆ ಔಷಧಿ ಇಲ್ಲ. ಜನನೇ ಕಾಂಗ್ರೆಸ್‌ನವರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ. ಮಹಾರಾಷ್ಟ್ರದಲ್ಲೂ ಜನ ಕಾಂಗ್ರೆಸ್‌ಗೆ ಔಷಧಿ ಕೊಟ್ಟಿದ್ದಾರೆ. ಕಾಂಗ್ರೆಸ್ ಮುಟ್ಟಿದವರೆಲ್ಲಾ ನಾಶ ಆಗ್ತಿದ್ದಾರೆ. ಯುಪಿಯಲ್ಲಿ ಕಾಂಗ್ರೆಸ್ ಎಲ್ಲಿದೆ ಅಂತ ಹುಡುಕಬೇಕು ಎಂದು ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಸರ್ಕಾರ ಪಥನ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಮಹಾರಾಷ್ಟ್ರದಲ್ಲಿ ಸರ್ಕಾರ ಬಿದ್ದು ಹೋಗ್ತಿದೆ. ಈಗಿನ ಸರ್ಕಾರ ದಲ್ಲಿ ಎಷ್ಟು ಪಕ್ಷ ಇದೆಯೋ ಗೊತ್ತಿಲ್ಲ. ಒಬ್ಬರಿಗೊಬ್ಬರಿಗೆ ನಂಬಿಕೆ ಇಲ್ಲ. ಮಹಾರಾಷ್ಟ್ರದಲ್ಲಿ ಹಿಂದುತ್ವದ ಬಗ್ಗೆ ಬಾಳಠಾಕ್ರೆ ಹುಲಿ ಇದ್ದ ರೀತಿ ಇದ್ದರು. ಆದರೆ ಉದ್ಬವ್ ಠಾಕ್ರೆ ಇಲಿ ಇದ್ದಂಗೆ ಇದ್ದಾರೆ ಎಂದು ಈಶ್ವರಪ್ಪ ಲೇವಡಿ ಮಾಡಿದ್ದಾರೆ.