MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಶಿವರಾತ್ರಿಗೆ ಅನ್ಯಕೋಮಿನವರಿಂದ ಶಿವಲಿಂಗಕ್ಕೆ ಪುಷ್ಪಾಲಂಕಾರ; ಗೋಮೂತ್ರದಿಂದ ಮಂದಿರ 'ಶುದ್ಧೀಕರಿಸಿದ' ಹಿಂದೂ ಸೇನೆ!

ಶಿವರಾತ್ರಿಗೆ ಅನ್ಯಕೋಮಿನವರಿಂದ ಶಿವಲಿಂಗಕ್ಕೆ ಪುಷ್ಪಾಲಂಕಾರ; ಗೋಮೂತ್ರದಿಂದ ಮಂದಿರ 'ಶುದ್ಧೀಕರಿಸಿದ' ಹಿಂದೂ ಸೇನೆ!

ಕಲಬುರಗಿಯ ರಾಮತೀರ್ಥ ಶಿವ ಮಂದಿರದಲ್ಲಿ ಮಹಾಶಿವರಾತ್ರಿಯಂದು ಅನ್ಯಕೋಮಿನ ಯುವಕರಿಂದ ಶಿವಲಿಂಗಕ್ಕೆ ಪುಷ್ಪಾಲಂಕಾರ ಮಾಡಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಕ್ರಮವನ್ನು ಖಂಡಿಸಿದ ಹಿಂದೂ ಜಾಗೃತಿ ಸೇನೆಯ ಕಾರ್ಯಕರ್ತರು, ದೇವಸ್ಥಾನದ ಆವರಣವನ್ನು ಗೋಮೂತ್ರದಿಂದ ಶುದ್ಧೀಕರಣ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

1 Min read
Author : Sathish Kumar KH
Published : Feb 16 2026, 02:18 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : Asianet News

ಕಲಬುರಗಿ (ಫೆ.16): ಮಹಾಶಿವರಾತ್ರಿಯ ಸಂಭ್ರಮದ ನಡುವೆಯೇ ಕಲಬುರಗಿ ನಗರದ ರಾಮತೀರ್ಥದಲ್ಲಿರುವ ಪುರಾತನ ಶಿವನ ಮಂದಿರದಲ್ಲಿ ಹೊಸ ವಿವಾದವೊಂದು ಭುಗಿಲೆದ್ದಿದೆ. ಶಿವಲಿಂಗಕ್ಕೆ ಅನ್ಯಕೋಮಿನ ಯುವಕರಿಂದ ಪುಷ್ಪಾಲಂಕಾರ ಮಾಡಿಸಿದ ದೇವಸ್ಥಾನದ ಟ್ರಸ್ಟ್‌ನ ಕ್ರಮವನ್ನು ಖಂಡಿಸಿರುವ ಹಿಂದೂ ಜಾಗೃತಿ ಸೇನೆಯ ಕಾರ್ಯಕರ್ತರು, ಇಂದು ದೇವಸ್ಥಾನದ ಆವರಣವನ್ನು ಗೋಮೂತ್ರದಿಂದ ಶುದ್ಧೀಕರಣ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

25
Image Credit : Asianet News

ನಿನ್ನೆ ರಾಜ್ಯಾದ್ಯಂತ ಶ್ರದ್ಧಾಭಕ್ತಿಯಿಂದ ಮಹಾಶಿವರಾತ್ರಿಯನ್ನು ಆಚರಿಸಲಾಯಿತು. ಕಲಬುರಗಿ ನಗರದ ರಾಮತೀರ್ಥದಲ್ಲಿರುವ ಪ್ರಸಿದ್ಧ ಶಿವನ ಮಂದಿರದಲ್ಲಿಯೂ ವಿಶೇಷ ಪೂಜೆ ಹಾಗೂ ಅಲಂಕಾರಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದೇವಸ್ಥಾನದ ಟ್ರಸ್ಟ್ ವತಿಯಿಂದ ಶಿವಲಿಂಗಕ್ಕೆ ಮಾಡಲಾಗುವ ಪುಷ್ಪಾಲಂಕಾರದ ಜವಾಬ್ದಾರಿಯನ್ನು ಅನ್ಯಕೋಮಿನ ಕೆಲ ಯುವಕರಿಗೆ ವಹಿಸಲಾಗಿತ್ತು ಎನ್ನಲಾಗಿದೆ. ಶಿವಲಿಂಗವನ್ನು ಅನ್ಯಕೋಮಿನವರು ಸ್ಪರ್ಶಿಸಿ ಅಲಂಕಾರ ಮಾಡಿರುವುದು ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿತ್ತು.

Related Articles

Related image1
Gadag: ಶಿವರಾತ್ರಿ ದಿನವೇ ರಾಮಲಿಂಗೇಶ್ವರ ಮೂರ್ತಿ ಭಗ್ನಗೊಳಿಸಿದ ದುಷ್ಕರ್ಮಿಗಳು! (ಫೋಟೋ)
Related image2
ಇಡೀ ಊರೇ ಇಂಡಿಯಾ-ಪಾಕ್ ಪಂದ್ಯದಲ್ಲಿ ಮುಳುಗಿತ್ತು, ಆ ಮನೆಯವ್ರು ಶಿವರಾತ್ರಿ ಜಾಗರಣೆಗೆ ಹೋದ್ರು, ಕಳ್ಳರು ಬಂದ್ರು ಚಿನ್ನ ದೋಚಿದ್ರು!
35
Image Credit : Asianet News

ದೇವಸ್ಥಾನದ ಟ್ರಸ್ಟ್‌ನ ಈ ನಿರ್ಧಾರದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಕೆಂಡಾಮಂಡಲವಾದ ಹಿಂದೂ ಜಾಗೃತಿ ಸೇನೆಯ ಕಾರ್ಯಕರ್ತರು ಇಂದು ಬೆಳಿಗ್ಗೆ ದೇವಸ್ಥಾನಕ್ಕೆ ಲಗ್ಗೆ ಇಟ್ಟರು. ಅನ್ಯಕೋಮಿನವರಿಂದ ಪವಿತ್ರ ಶಿವಲಿಂಗಕ್ಕೆ ಅಲಂಕಾರ ಮಾಡಿಸಿದ್ದು ಧಾರ್ಮಿಕ ನಿಯಮಗಳಿಗೆ ವಿರುದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ತಮ್ಮೊಂದಿಗೆ ತಂದಿದ್ದ ಗೋಮೂತ್ರವನ್ನು ದೇವಸ್ಥಾನದ ಆವರಣ ಹಾಗೂ ಗರ್ಭಗುಡಿಯ ಸುತ್ತಲೂ ಸಿಂಪಡಿಸಿ 'ಶುದ್ಧೀಕರಣ' ಕಾರ್ಯ ನೆರವೇರಿಸಿದರು.

45
Image Credit : Asianet News

ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಜಾಗೃತಿ ಸೇನೆಯ ಮುಖಂಡ ಲಕ್ಷ್ಮೀಕಾಂತ ಸ್ವಾದಿ, 'ಶಿವನ ಮಂದಿರದ ಪವಿತ್ರತೆಯನ್ನು ಕಾಪಾಡುವುದು ಟ್ರಸ್ಟ್‌ನ ಕರ್ತವ್ಯ. ಆದರೆ ರಾಮತೀರ್ಥ ಟ್ರಸ್ಟ್‌ನವರು ಉದ್ದೇಶಪೂರ್ವಕವಾಗಿ ಅನ್ಯಕೋಮಿನವರಿಂದ ಶಿವಲಿಂಗಕ್ಕೆ ಪುಷ್ಪಾಲಂಕಾರ ಮಾಡಿಸಿ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ಹಿಂದೂ ದೇವಸ್ಥಾನಗಳಲ್ಲಿ ಸನಾತನ ಧರ್ಮದ ವಿಧಿವಿಧಾನಗಳನ್ನು ಪಾಲಿಸುವವರಿಂದಲೇ ಇಂತಹ ಕಾರ್ಯಗಳು ನಡೆಯಬೇಕು. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ' ಎಂದು ಕಿಡಿಕಾರಿದರು.

55
Image Credit : Asianet News

ಟ್ರಸ್ಟ್‌ನ ಈ ನಡೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಟ್ರಸ್ಟ್ ಸದಸ್ಯರು ಈ ಬಗ್ಗೆ ಮೌನ ವಹಿಸಿದ್ದು, ಮುಂಜಾಗ್ರತಾ ಕ್ರಮವಾಗಿ ದೇವಸ್ಥಾನದ ಸುತ್ತಮುತ್ತ ಪೊಲೀಸರು ನಿಗಾ ವಹಿಸಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಕಲಬುರಗಿ
ಶಿವ
ಹಬ್ಬ
ದೇವಸ್ಥಾನ

Latest Videos
Recommended Stories
Recommended image1
Bengaluru: ಬ್ಯಾಂಕ್‌ ಲಾಕರಲ್ಲಿದ್ದ ಚಿನ್ನ ಎಗರಿಸಿ ಬೆಟ್ಟಿಂಗ್‌ ಆಟ! ₹4 ಕೋಟಿ ಮೌಲ್ಯದ ಆಭರಣ ಕದ್ದ ಮ್ಯಾನೇಜರ್‌!
Recommended image2
ಶಿವರಾತ್ರಿಯಂದೇ ಗೋಕರ್ಣದ ಆತ್ಮಲಿಂಗ ದರ್ಶನ ಪಡೆದು ಶಿವೈಕ್ಯನಾದ ಭಕ್ತ!
Recommended image3
ಇಡೀ ಊರೇ ಇಂಡಿಯಾ-ಪಾಕ್ ಪಂದ್ಯದಲ್ಲಿ ಮುಳುಗಿತ್ತು, ಆ ಮನೆಯವ್ರು ಶಿವರಾತ್ರಿ ಜಾಗರಣೆಗೆ ಹೋದ್ರು, ಕಳ್ಳರು ಬಂದ್ರು ಚಿನ್ನ ದೋಚಿದ್ರು!
Related Stories
Recommended image1
Gadag: ಶಿವರಾತ್ರಿ ದಿನವೇ ರಾಮಲಿಂಗೇಶ್ವರ ಮೂರ್ತಿ ಭಗ್ನಗೊಳಿಸಿದ ದುಷ್ಕರ್ಮಿಗಳು! (ಫೋಟೋ)
Recommended image2
ಇಡೀ ಊರೇ ಇಂಡಿಯಾ-ಪಾಕ್ ಪಂದ್ಯದಲ್ಲಿ ಮುಳುಗಿತ್ತು, ಆ ಮನೆಯವ್ರು ಶಿವರಾತ್ರಿ ಜಾಗರಣೆಗೆ ಹೋದ್ರು, ಕಳ್ಳರು ಬಂದ್ರು ಚಿನ್ನ ದೋಚಿದ್ರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved