ದೇಶದ್ರೋಹ ಪ್ರಕರಣ: ಬೀದರ್‌ ಜೈಲಲ್ಲಿ ಶಿಕ್ಷಕಿ, ಜತೆ ಸಿದ್ದು ಮಾತುಕತೆ

ಶಾಹೀನ್‌ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದ ಸಿದ್ದರಾಮಯ್ಯ|ಬಂಧನಕ್ಕೊಳಗಾದವರಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ|ಪೊಲೀಸರು ಹಾಕಿರುವ ದೇಶದ್ರೋಹ ಪ್ರಕರಣ ಸೂಕ್ತವಲ್ಲ ಎಂದ ಸಿದ್ದು|

Former CM Siddaramaiah Met With Sahin Institute Teacher in Bidar Jail

ಬೀದರ್‌[ಫೆ.15]: ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಜಿಲ್ಲೆಯ ಶಾಹೀನ್‌ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಂಸ್ಥೆಯ ಪ್ರಮುಖರು ಮತ್ತು ಬಂಧನಕ್ಕೊಳಗಾದವರ ಮಕ್ಕಳನ್ನು ಭೇಟಿಯಾಗಿ ಧೈರ್ಯ ಹೇಳಿದ್ದಾರೆ. 

ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ನಾಟಕ: ಶಾಹೀನ್‌ ಶಿಕ್ಷಣ ವಿರುದ್ಧ ಜನಾಕ್ರೋಶ

ಶುಕ್ರವಾರ ನಗರಕ್ಕೆ ಆಗಮಿಸಿ ಶಾಹೀನ್‌ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ, ಪೊಲೀಸರು ಹಾಕಿರುವ ದೇಶದ್ರೋಹ ಪ್ರಕರಣ ಸೂಕ್ತವಲ್ಲ. ಚಿಕ್ಕಮಕ್ಕಳ ನಾಟಕ ಪ್ರದರ್ಶನವನ್ನೇ ಗಂಭೀರವಾಗಿ ತೆಗೆದುಕೊಂಡು ಅನಗತ್ಯ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಪ್ರಕರಣಗಳನ್ನು ಹೂಡಲಾಗಿದೆ ಎಂದು ದೂರಿದ್ದಾರೆ. 

Former CM Siddaramaiah Met With Sahin Institute Teacher in Bidar Jail

ಮೋದಿ ವಿರುದ್ಧ ಅವಹೇಳನಕಾರಿ ನಾಟಕ ಪ್ರದರ್ಶನ: ಶಿಕ್ಷಕಿ, ಪೋಷಕಿಗೆ ಬೇಲ್‌

ತದನಂತರ ಇಲ್ಲಿನ ಜಿಲ್ಲಾ ಕಾರಾಗೃಹಕ್ಕೆ ತೆರಳಿ, ನಾಟಕ ಪ್ರದರ್ಶನ ಮಾಡಿದ ವಿದ್ಯಾರ್ಥಿನಿಯ ತಾಯಿಯನ್ನು ಹಾಗೂ ಶಾಲೆಯ ಮುಖ್ಯಶಿಕ್ಷಕಿಯನ್ನು ಭೇಟಿಯಾಗಿ ಧೈರ್ಯ ಹೇಳಿದ್ದಾರೆ.

ಮಕ್ಕಳ ಮೇಲೆ ದೇಶದ್ರೋಹದ ಕೇಸ್‌ ಹಾಕಿದ್ದು ಖಂಡನೀಯ: ಖಂಡ್ರೆ

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಈಶ್ವರ ಖಂಡ್ರೆ, ಶಾಸಕರಾದ ರಾಜಶೇಖರ ಪಾಟೀಲ್‌, ರಹೀಮ್‌ ಖಾನ್‌, ಬಿ. ನಾರಾಯಣ, ವಿಜಯಸಿಂಗ್‌, ಚಂದ್ರಶೇಖರ ಪಾಟೀಲ್‌ ಹಾಗೂ ಅರವಿಂದಕುಮಾರ ಅರಳಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿಇತರರಿದ್ದರು.
 

Latest Videos
Follow Us:
Download App:
  • android
  • ios