Asianet Suvarna News Asianet Suvarna News

ಮಕ್ಕಳ ಮೇಲೆ ದೇಶದ್ರೋಹದ ಕೇಸ್‌ ಹಾಕಿದ್ದು ಖಂಡನೀಯ: ಖಂಡ್ರೆ

ವಿಧವಾ ತಾಯಿಯನ್ನು ಜೈಲಿಗಟ್ಟಿರುವುದು ಸರ್ಕಾರಕ್ಕೆ ಶೋಭೆ ತರುವಂಥದ್ದಲ್ಲ|  ಕಲ್ಲಡ್ಕ ಪ್ರಭಾಕರ ಭಟ್ಟರ ಶಾಲೆಯಲ್ಲಿ ಬಾಬ್ರಿ ಮಸೀದಿ ದ್ವಂಸದ ನಾಟಕ ಮಾಡಿಸಿದ್ದರು| ಶಾಹೀನ್ ಶಾಲೆ ಮುಚ್ಚಿಸುವ ಹುನ್ನಾರ|

KPCC Working President Eshwar Khandre Talks Over Case of Treason
Author
Bengaluru, First Published Feb 6, 2020, 3:18 PM IST

ಬೀದರ್(ಫೆ.06): ಬಿಜೆಪಿ ಸರ್ಕಾರ ಜನರಲ್ಲಿ ಭಯ ಹುಟ್ಟಿಸುತ್ತಿದೆ. ಶಾಹೀನ್ ಶಾಲೆಯ ಚಿಕ್ಕ ಮಕ್ಕಳು ನಾಟಕ ಮಾಡಿದ್ದಕ್ಕೆ ದೇಶದ್ರೋಹದ ಕೇಸ್ ಹಾಕಿರುವುದು ಖಂಡನೀಯ. ಈ ಸರ್ಕಾರಕ್ಕೆ ಮಾನವೀಯತೆ ಏನಾದ್ರೂ ಇದೆಯಾ? ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಮೋದಿ ವಿರುದ್ಧ ಅವಹೇಳನಕಾರಿ ನಾಟಕ: ದೇಶದ್ರೋಹದ ಕೇಸ್‌ ವಾಪಸ್ ಪಡೆಯಲು ಸಿದ್ದು ಆಗ್ರಹ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ನಾಟಕದಲ್ಲಿ ಪಾತ್ರ ಮಾಡಿದ್ದ ಬಾಲಕಿಯನ್ನು ಭೇಟಿ ಮಾಡಿ, ಅಭಯ ನೀಡಿದ ನಂತರ ಮಾತನಾಡಿದ ಖಂಡ್ರೆ, ವಿಧವಾ ತಾಯಿಯನ್ನು ಜೈಲಿಗಟ್ಟಿರುವುದು ಸರ್ಕಾರಕ್ಕೆ ಶೋಭೆ ತರುವಂಥದ್ದಲ್ಲ. ಕಲ್ಲಡ್ಕ ಪ್ರಭಾಕರ ಭಟ್ಟರ ಶಾಲೆಯಲ್ಲಿ ಬಾಬ್ರಿ ಮಸೀದಿ ದ್ವಂಸದ ನಾಟಕ ಮಾಡಿಸಿದ್ದರು. ಆ ಮೂಲಕ ಮಕ್ಕಳಲ್ಲಿ ಧಾರ್ಮಿಕತೆ ಕೆರಳಿಸುವ ಕ್ರಮಕ್ಕೆ ಮುಂದಾಗಿದ್ದರು. ಆ ಕೇಸಲ್ಲಿ ಬರೀ ಎಫ್ ಆಯ್ ಆರ್ ದಾಖಲಿಸಲಾಗಿದೆ. ಗಾಂಧಿಯವರ ಬಗ್ಗೆ ಅವಹೇಳನಕಾರಿ ಮಾತನಾಡಿದವರಿಗೆ ಸರಕಾರ ರಕ್ಷಣೆ ಕೊಡುತ್ತಿದೆ ಎಂದು ಹೇಳಿದ್ದಾರೆ. 

ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ನಾಟಕ: ಶಾಹೀನ್‌ ಶಿಕ್ಷಣ ವಿರುದ್ಧ ಜನಾಕ್ರೋಶ

ಆದರೆ ಶಾಹೀನ್ ಶಾಲೆಯ ಮಕ್ಕಳ ಸಣ್ಣ ತಪ್ಪಿಗೆ ದೇಶದ್ರೋಹದ ಪ್ರಕರಣ ದಾಖಲಿಸಿರುವುದು ಬಿಜೆಪಿಯವರ ತಾರತಮ್ಯ ನೀತಿ ತೋರುತ್ತಿದೆ. ಇದು ಶಾಹೀನ್ ಶಾಲೆಯನ್ನು ಮುಚ್ಚಿಸುವ ಹುನ್ನಾರವಾಗಿದೆ. ಇದು ಧ್ವನಿಗಳನ್ನು ದಮನ ಮಾಡುವ ಕ್ರಮವಾಗಿದೆ. ತಕ್ಷಣವೇ ಮುಖ್ಯಮಂತ್ರಿಗಳು ದೇಶದ್ರೋಹದ ಪ್ರಕರಣವನ್ನು ಹಿಂಪಡೆಯಬೇಕು. ಇಬ್ಬರು ಅಮಾಯಕ ಮಹಿಳೆಯರನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಮತ ಹಾಕದವರನ್ನು ಮಟ್ಟ ಹಾಕಲು ಹೊರಟಿದ್ದಾರೆ. ಬಿಜೆಪಿ ಸೇಡು, ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ಹೇಳಿದ್ದಾರೆ.

ಮೋದಿ ವಿರುದ್ಧ ಅವಹೇಳನಕಾರಿ ನಾಟಕ: ಬೀದರ್‌ಗೆ ಅಸಾದುದ್ದಿನ್ ಓವೈಸಿ ಭೇಟಿ

Follow Us:
Download App:
  • android
  • ios